ಶಿವಮೊಗ್ಗದಲ್ಲಿ ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್;‌ ಅಗ್ನಿಶಾಮಕ ಯಂತ್ರ ಬಳಸಲೂ ಆಗ್ಲಿಲ್ಲ!

Published : Feb 28, 2026, 05:09 PM IST
shivamogga private bus fire tragedy

ಸಾರಾಂಶ

Shimoga bus fire accident: ಶಿವಮೊಗ್ಗದಲ್ಲಿ ಖಾಸಗಿ ಬಸ್‌ವೊಂದು ಬೆಂಕಿಗೆ ಆಹುತಿ ಆಗಿದೆ. ಹೌದು, ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ಬಸ್‌ಗಳು ಆಹುತಿ ಆಗುತ್ತಿವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಆಗಿದೆ. 

ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ಬಸ್‌ಗಳು ಬೆಂಕಿಗೆ ಆಹುತಿ ಆಗುತ್ತಿವೆ. ಈಗಾಗಲೇ ಕೆಲ ಬಸ್‌ಗಳು ಬೆಂಕಿ ಅಪಘಾತ ಆಗಿ, ಜೀವ ಹಾನಿ ಕೂಡ ಆಗಿದ್ದುಂಟು. ಈಗ ಹುಲಿಕಲ್ ಘಾಟ್‌ನಲ್ಲಿ ಬಸ್‌ವೊಂದು ಹೊತ್ತಿ ಉರಿದಿದೆ. ಹೌದು, ಕುಂದಾಪುರದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. 

ಈ ಘಟನೆ ಎಲ್ಲಿ ನಡೆದಿದೆ?

ಬಸ್‌ವೊಂದು ಕುಂದಾಪುರದಿಂದ ಶಿವಮೊಗ್ಗಕ್ಕೆ ಹೊರಟಿತ್ತು.ಹುಲಿಕಲ್ ಘಾಟ್‌ನಲ್ಲಿ ಚಂಡಿಕಾಂಬ ದೇಗುಲದ ಸಮೀಪದ ತಿರುವಿನಲ್ಲಿ ಇದಕ್ಕಿದ್ದಂತೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಜಾನನ ಕಂಪನಿಯ ಸೇರಿದ ಶ್ರೀ ದುರ್ಗಾಂಬ ಬಸ್ ಇದಾಗಿದೆ.

ಪ್ರಯಾಣಿಕರು ಸೇಫ್‌ ಆಗಿದ್ದಾರೆ

ಬಸ್ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್‌ನಲ್ಲಿ ಸುಮಾರು 36 ಪ್ರಯಾಣಿಕರಿದ್ದರು. ಚಾಲಕ ಹೇಳಿದಕೂಡಲೇ ಪ್ರಯಾಣಿಕರು ಕೆಳಗಡೆ ಇಳಿದಿದದಾರೆ. ಆಮೇಲೆ ಬಸ್ಸು ಸಂಪೂರ್ಣ ಬೆಂಕಿಗೆ ಆಹುತಿ ಆಗಿದೆ. ಆದರೆ ಯಾವುದೇ ಪ್ರಾಣಪಾಯವಿಲ್ಲ.

ಬೆಂಕಿಗೆ ಆಹುತಿ ಆಗಿದೆ!

ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ, ಬಸ್ ಬೆಂಕಿಗಾಹುತಿಯಾದ ವಿಷಯ ತಿಳಿಯುತ್ತಿದ್ದಂತೆ ಹುಲಿಕಲ್ ಘಾಟ್ ಕಡೆ ದೌಡಾಯಿಸಿದ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಶಿವಾನಂದ ಕೊಳಿ ಅವರು ಬಂದಿದ್ದರು. ಸದ್ಯ ಪ್ರಯಾಣಿಕರು ಸುರಕ್ಷಿತವಾಗಿದ್ದು ಬೇರೆ ಬೇರೆ ಬಸ್‌ಗಳ ಮೂಲಕ ಪ್ರಯಾಣ ಮಾಡಿದ್ದಾರೆ. ಬಸ್‌, ಇಂಜಿನ್‌, ಸೀಟ್‌, ಟೈರ್‌ ಎಲ್ಲವೂ ಸುಟ್ಟು ಹೋಗಿದೆ.

ಬಸ್‌ ಇಂಜಿನ್‌ನಲ್ಲಿ ಎಣ್ಣೆ ಸೋರಿಕೆ ಆಗಿದೆಯಾ? ಘಾಟಿಯಿಂದ ಇಂಜಿನ್‌ ಬಿಸಿಯಾಗಿ ಹೀಗೆ ಆಗಿದೆಯಾ ಎಂಬ ಪ್ರಶ್ನೆ ಕೂಡ ಬಂದಿದೆ. ಬಸ್‌ನಲ್ಲಿ ಅಗ್ನಿಶಾಮಕ ಯಂತ್ರ ಇದ್ದರೂ ಕೂಡ ಅದನ್ನು ಬಳಸಲು ಆಗಿಲ್ವಂತೆ. ಇದರ ಹಿಂದಿನ ಕಾರಣ ಏನು ಎಂದು ತನಿಖೆ ನಡೆಯುತ್ತಿದೆ.

ಅಂದಹಾಗೆ ಸ್ಲೀಪರ್‌ ಬಸ್‌ಗಳು ಬೆಂಕಿಗೆ ಆಹುತಿ ಆಗುತ್ತಿರುವುದು ಹೆಚ್ಚಾಗ್ತಿದೆ. ಇನ್ನು ಈ ಬಸ್‌ಗಳಲ್ಲಿ ಸಿಕ್ಕಾಪಟ್ಟೆ ಲಗೇಜ್‌ಗಳನ್ನು ಕೂಡ ತುಂಬಲಾಗುವುದು. ಇದು ಕೂಡ ಬೆಂಕಿ ಹತ್ತಲು ಕಾರಣ ಎನ್ನಲಾಗಿದೆ.

 

PREV
Read more Articles on
click me!

Recommended Stories

ಮಂಗಳೂರಿನಿಂದ ಗಲ್ಫ್ ದೇಶಗಳು ಸೇರಿ, ಇರಾನ್‌ನತ್ತ ಹೊರಟ ವಿಮಾನಗಳು ವಾಪಸ್; ರದ್ದಾದ ವಿಮಾನಗಳ ವಿವರ ಇಲ್ಲಿದೆ!
ಚಿಲ್ಲರೆ ಕಾಸಿಗೆ '51 ಸಾವಿರ ಅತಿಥಿ ಶಿಕ್ಷಕರ ನಿಯೋಜನೆ'ಯೇ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಸಾಧನೆಯಂತೆ!