ಬೆಳಗಾವಿಯ ಅಥಣಿಯಿಂದ ಮಹಾರಾಷ್ಟ್ರ, ಆಂಧ್ರಕ್ಕೆ ಹೊಸ ಸಾರಿಗೆ ಬಸ್ ಆರಂಭ, ಅಂತಾರಾಜ್ಯ ಬಸ್ ಸೇವೆಯ ಸಮಯ ಹೀಗಿದೆ

Published : May 26, 2026, 03:53 PM IST
NWKRTC BUS

ಸಾರಾಂಶ

ಶಾಸಕ ಲಕ್ಷ್ಮಣ ಸವದಿ ಅವರು ಅಥಣಿಯಿಂದ ನೆರೆಯ ಮಹಾರಾಷ್ಟ್ರದ ಪುಣೆ ಮತ್ತು ಕೊಲ್ಲಾಪುರಕ್ಕೆ ನೂತನ ಅಂತಾರಾಜ್ಯ ಬಸ್ ಸೇವೆಗೆ ಚಾಲನೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಆಂಧ್ರಪ್ರದೇಶದ ಶ್ರೀಶೈಲಂಗೆ ಹಾಗೂ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ಸೇವೆ ಆರಂಭಿಸುವ ಭರವಸೆಯನ್ನೂ ನೀಡಿದ್ದಾರೆ.

ಬೆಳಗಾವಿ: ಅಥಣಿ ಸಾರಿಗೆ ಘಟಕದಿಂದ ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಕ್ಕೆ ಬಸ್ ಸೌಕರ್ಯ ಆರಂಭಿಸಲಾಗಿದೆ. ಅಥಣಿ ನಾಗರಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಗಡಿ ದಾಟಿದ ಬಸ್‌ಗಳು

ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಅಥಣಿ-ಪುಣೆ ಮತ್ತು ಅಥಣಿ- ಕೊಲ್ಲಾಪುರ ನೂತನ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಸಾರಿಗೆ ಘಟಕದಿಂದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ, ಮಹಾನಗರಗಳಿಗೆ ಈಗಾಗಲೇ ಸಾರಿಗೆ ಸೇವೆ ಕಲ್ಪಿಸಲಾಗಿದೆ. ಅಥಣಿ ಗಡಿ ಭಾಗದಲ್ಲಿರುವುದರಿಂದ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣ, ಆಂಧ್ರಪ್ರದೇಶಕ್ಕೆ ಜನರು ವಿವಿಧ ವ್ಯವಹಾರಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ತೆರಳುತ್ತಾರೆ. ಆದ್ದರಿಂದ ಮೊದಲ ಹಂತವಾಗಿ ನೆರೆಯ ಮಹಾರಾಷ್ಟ್ರಕ್ಕೆ ಅಂತಾರಾಜ್ಯ ಬಸ್ ಸೇವೆ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಆಂಧ್ರ ಪ್ರದೇಶದ ಶ್ರೀಶೈಲಂಗೆ ಸೇವೆ ಆರಂಭಿಸಲಾಗುವುದು. ಚಿಕ್ಕೋಡಿ, ಬೆಳಗಾವಿ ಮತ್ತು ವಿಜಯಪುರಕ್ಕೆ ತಡೆರಹಿತ ವಾಹನ ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದ್ದು, ಆದರೆ, ಅಲ್ಲಲ್ಲಿ ಗ್ರಾಮಸ್ಥರು ಮನವಿ ನೀಡಿ ನಿಲುಗಡೆಗೆ ಅವಕಾಶ ಕೇಳುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮತೆಗೆದುಕೊಳ್ಲಲಾಗುವುದು ಎಂದು ತಿಳಿಸಿದರು.

ಅಥಣಿ ಸೇರಿ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸ್ನೇಹಿ ನೂತನ ಸಾರಿಗೆ ಸೇವೆ ಆರಂಭಿಸುವ ಸಂಕಲ್ಪ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಈ ಘಟಕಕ್ಕೆ ಇನ್ನಷ್ಟು ಹೊಸ ಬಸ್‌ಗಳನ್ನು ಇಲಾಖೆಯಿಂದ ತರುವ ಮೂಲಕ ತಾಲೂಕಿನ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಬಸ್ ಸಮಯ ಇಂತಿದೆ

ಚಿಕ್ಕೋಡಿ ವಿಭಾಗೀಯ ಘಟಕದ ನಿಯಂತ್ರಣಾಧಿಕಾರಿ ಮಹಾದೇವ ಮುಂಜೆ ಮಾತನಾಡಿ, ಈ ನೂತನ ಬಸ್‌ ಅಥಣಿ-ಪುಣೆ ಪ್ರತಿದಿನ ಬೆಳಿಗ್ಗೆ ಇಲ್ಲಿಂದ 7.45 ಕ್ಕೆ ಮತ್ತು ಅಥಣಿ-ಕೊಲ್ಲಾಪುರ 7ಕ್ಕೆ ಹೊರಡಲಿದೆ. ಅಥಣಿ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಪುರಸಭೆ ಸದಸ್ಯ ಕಲ್ಲೇಶ್ ಮಡ್ಡಿ, ಕಾಂಗ್ರೆಸ್ ಮುಖಂಡ ಶ್ಯಾಮ ಪೂಜಾರಿ, ಶ್ರೀನಿವಾಸ ಪಟ್ಟಣ, ಘಟಕದ ವ್ಯವಸ್ಥಾಪಕ ಎನ್.ಎಂ.ಕೇರಿ ಸೇರಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಬೆಂಗಳೂರಿಗೆ ಆಲಿಕಲ್ಲು ಮಳೆ ಎಚ್ಚರಿಕೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಚಿಕ್ಕಮಗಳೂರಿನಲ್ಲಿ ಬೆಳಗ್ಗಿನಿಂದಲೇ ಮಳೆ
ಬೆಂಗಳೂರು ವಾಹನ ಸವಾರರೇ ಗಮನಿಸಿ: ಕಾಮರಾಜ್ ರಸ್ತೆ 60 ದಿನ ಬಂದ್, ಸಂಚಾರ ಮಾರ್ಗ ಬದಲಾವಣೆ, ಇಲ್ಲಿದೆ ಕಂಪ್ಲೀಟ್ ಗೈಡ್