Karnataka Assembly : RTCಯಲ್ಲಿ ಬೆಳೆ ಜಾಗ ಖಾಲಿ ಬಿಡುವಂತೆ ಇಲ್ಲ

By Kannadaprabha News  |  First Published Feb 16, 2022, 2:47 AM IST

* ಪಹಣಿಯಲ್ಲಿ ಬೆಳೆ ಕಾಲಂ  ಖಾಲಿ ಬಿಡುವಂತಿಲ್ಲ
* ಹಿಂದಿನ ವರ್ಷದ್ದನ್ನಾದರೂ ನಮೂದಿಸಬೇಕು
* ಅಧಿಕಾರಿಗಳಿಗೆ ಸೂಚಿಸಲಾಗಿದೆ: ಮಾಧುಸ್ವಾಮಿ


ಬೆಂಗಳೂರು(ಫೆ. 16)  ರೈತರ (Farmer)ಜಮೀನುಗಳ (Land) ಪಹಣಿಯ (RTC) ಬೆಳೆ ಕಾಲಂ ಅನ್ನು ಖಾಲಿ ಬಿಡುವಂತಿಲ್ಲ. ಆಯಾ ವರ್ಷ ಬೆಳೆದಿರುವ ಬೆಳೆಯ ಮಾಹಿತಿ ಕೊರತೆ ಇದ್ದಲ್ಲಿ ಹಿಂದಿನ ವರ್ಷದ ಬೆಳೆಯನ್ನಾದರೂ (crops) ನಮೂದು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ (JC Madhu Swamy) ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಮಲೆನಾಡು ಭಾಗದ ಬಹಳಷ್ಟುರೈತರ ಪಹಣಿಗಳಲ್ಲಿ ಬೆಳೆ ಕಾಲಂನಲ್ಲಿ ಯಾವುದೇ ಬೆಳೆಯ ಹೆಸರು ನಮೂದಾಗದೆ ಖಾಲಿ ಬಿಡಲಾಗಿದೆ. ಅಂತಹ ರೈತರು ಬೆಳೆ ವಿಮೆ ಪಡೆಯಲಾಗಲಿ, ಬ್ಯಾಂಕುಗಳಲ್ಲಿ ಸಾಲ ಪಡೆಯಲಾಗಲಿ ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ಅವರ ಗಮನ ಸೆಳೆವ ಸೂಚನೆಗೆ ಉತ್ತರ ನೀಡಿದ ಸಚಿವರು, ನಿಯಮಾನುಸಾರ ಪ್ರತೀ ವರ್ಷ ರೈತರ ಜಮೀನಿಗೆ ಹೋಗಿ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಬೆಳೆ ಸಮೀಕ್ಷೆ ನಡೆಸಿ ಪ್ರತಿಯೊಬ್ಬ ರೈತರ ಪಹಣಿಯಲ್ಲಿ ಬೆಳೆ ನಮೂದು ಮಾಡಬೇಕು. ಒಂದು ವೇಳೆ ಕಾರಣಾಂತರಗಳಿಂದ ಇದು ಸಾಧ್ಯವಾಗದೆ ಇದ್ದರೂ ಬೆಳೆ ಕಾಲಂ ಖಾಲಿ ಬಿಡುವಂತಿಲ್ಲ. ಹಿಂದಿನ ವರ್ಷ ರೈತ ಬೆಳೆದಿದ್ದ ಬೆಳೆಯನ್ನೇ ನಮೂದಿಸಬೇಕೆಂದು ಸೂಚಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು.

Tap to resize

Latest Videos

ಸಹಕಾರ ಸಂಘಗಳ ಆಡಿಟ್‌ ನಡೆಸಲು  ಸಿಎಗಳಿಗೆ ಮಿತಿ: ಸಹಕಾರ ಸಂಘಗಳ ಕ್ರಮಬದ್ಧ ಹಾಗೂ ಉತ್ತಮ ಗುಣಮಟ್ಟದ ಲೆಕ್ಕ ಪರಿಶೋಧನೆ ನಡೆಯಲು ಚಾರ್ಟರ್ಡ್‌ ಅಕೌಂಟೆಂಟ್‌ಗಳು ವರ್ಷಕ್ಕೆ ಇಂತಿಷ್ಟೇ ಲೆಕ್ಕ ಪರಿಶೋಧನೆ ಮಾಡಬೇಕು ಎಂಬುದು ಸೇರಿದಂತೆ ಹಲವು ಅಂಶ ಇರುವ ಮಾರ್ಗಸೂಚಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

DC Car Seized: ಕಲಬುರಗಿಯಲ್ಲಿ ಕಾನೂನಿನ ಶಕ್ತಿ... ಪರಿಹಾರ ನೀಡದ  ಡಿಸಿ ಕಾರು ಜಪ್ತಿಮಾಡಿಕೊಂಡ ರೈತ

ಬಿಜೆಪಿಯ ಭಾರತಿ ಶೆಟ್ಟಿಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಲೆಕ್ಕ ಪರಿಶೋಧಕರು ಇಲ್ಲದ ಕಾರಣ ಖಾಸಗಿಯವರನ್ನು ಅವಲಂಬಿಸಬೇಕಾಗಿದೆ. ಗುಣಮಟ್ಟದ ಲೆಕ್ಕ ಪರಿಶೋಧನೆ ನಡೆಯಲು ಲೆಕ್ಕ ಪರಿಶೋಧಕರಿಗೆ ವರ್ಷಕ್ಕೆ ಇಂತಿಷ್ಟುಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಮಾಡಬೇಕು ಎಂಬ ನಿಯಮವನ್ನು ಬರುವ ಏಪ್ರಿಲ್‌ ತಿಂಗಳಿಂದ ಜಾರಿಗೆ ತರಲಾಗುವುದು. ಅದೇ ರೀತಿ ಲೆಕ್ಕ ಪರಿಶೋಧಕರ ಕುರಿತಂತೆ ಮಾರ್ಗಸೂಚಿ ಸಿದ್ಧಪಡಿಸಲು ಕ್ರಮ ವಹಿಸಲಾಗುವುದು ಎಂದರು.

ಲೆಕ್ಕ ಪರಿಶೋಧಕರು ನೀಡುವ ವರದಿ ಆಧರಿಸಿ ಸರ್ಕಾರ ಸಹಕಾರ ಸಂಘಗಳ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ. ಹೀಗಿರುವಾಗ ಲೆಕ್ಕ ಪರಿಶೋಧಕರೆ ತಪ್ಪು ವರದಿ ನೀಡಿದರೆ ಕಷ್ಟವಾಗುತ್ತದೆ. ಈ ವರೆಗೆ ಸುಮಾರು 11 ಸೊಸೈಟಿಗಳ ಲೆಕ್ಕ ಪರಿಶೋಧನಾ ವರದಿ ಬಗ್ಗೆ ದೂರು ಬಂದಿದೆ. ಒಂದು ವೇಳೆ ಲೆಕ್ಕ ಪರಿಶೋಧಕರು ತಪ್ಪು ಮಾಡಿರುವುದು ಕಂಡು ಬಂದರೆ ಅಂಥವರನ್ನು ನಿಷೇಧಿಸಲಾಗುವುದು. ಈಗಾಗಲೇ ಸುಮಾರು 60 ಲೆಕ್ಕ ಪರಿಶೋಧಕರನ್ನು ನಿಷೇಧ ಮಾಡುವ ಸಂಬಂಧ ನೋಟಿಸ್‌ ನೀಡಲಾಗಿದೆ ಎಂದು ಹೇಳಿದರು.

ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ 402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

 

click me!