* ಕಲಬುರಗಿ ರೈತ ಕಲ್ಲಪ್ಪರಿಗೆ ಸಿಗದ ಪರಹಾರದ ಹಣ
* ನ್ಯಾಯಕ್ಕಾಗಿ ಕಾನೂನು ಹೋರಾಟ
* ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಲು ನ್ಯಾಯಾಲಯದ ಆದೇಶ
* ವಕೀಲರೊಂದಿಗೆ ತೆರಳಿ ಕಾರು ಜಪ್ತಿ ಮಾಡಿದ ಕಲ್ಲಪ್ಪ
ಕಲಬುರಗಿ(ಫೆ. 15) ಕಾನೂನಿನ (Law) ಶಕ್ತಿ ಎಂಥಹದು ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆ. ಸರ್ಕಾರದಿಂದ (Karnataka Govt) ಸಿಗಬೇಕಾಗಿದ್ದ ಹೆಚ್ಚುವರಿ ಪರಿಹಾರ (compensation) ಸಿಗದ ರೈತರು ಕಾನೂನು ಹೋರಾಟಕ್ಕೆ ಇಳಿದಿದ್ದರು. ನ್ಯಾಯಾಲಯದಲ್ಲಿ (Court) ಅವರ ಹೋರಾಟಕ್ಕೆ ಜಯ ಸಿಕ್ಕಿತ್ತು. ದಶಕದ ಹೋರಾಟದ ಬಳಿಕ ರೈತರು ನಿಟ್ಟುಸಿರು ಬಿಟ್ಟಿದ್ದರು. ಪರಿಹಾರ ಮೊತ್ತ ಸರಿಯಾಗಿ ನೀಡದ ಜಿಲ್ಲಾಧಿಕಾರಿ (DC) ಕಾರು (Car) ಜಪ್ತಿಗೆ ಕೋರ್ಟ್ ಆದೇಶ ನೀಡಿತ್ತು.
ಆದೇಶ ಪ್ರತಿ ಕೈ ಸೇರಿದ್ದೇ ತಡರೈತ ತನ್ನ ಸ್ನೇಹಿತರ ಜತೆಗೂಡಿ ತೆರಳಿ ಜಿಲ್ಲಾಧಿಕಾರಿ ವಾಹನವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ರೈತ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕೆಎ 32 ಜಿ-9990 ಕಾರನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಏನಿದು ಪ್ರಕರಣ: ಕಲಬುರಗಿ (Kalburgi) ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನನ್ನು ಭೀಮಾ ಏತ ನೀರಾವರಿ ಯೋಜನೆಗಾಗಿ ಸರ್ಕಾರ 2010 ರಲ್ಲಿ ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಪರಿಹಾರವಾಗಿ 7,14,132 ರೂ. ಸಂದಾಯ ಮಾಡಲಾಗುತ್ತದೆ. ಅದರೆ, ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಮೊದಲು ಹೇಳಿದ್ದಕ್ಕಿಂತ ಕಡಿಮೆ ಬೆಲೆ ನೀಡಲಾಗುತ್ತದೆ.
ಹೆಚ್ಚುವರಿ ಹಣ ನೀಡಬೇಕು ಎಂದು ರೈತ ನ್ಯಾಯಾಲಯದ ಮೊರೆ ಹೋಗುತ್ತಾರೆ. ವರ್ಷಗಳೇ ಉರುಳಿದರೂ ರೈತನ ಕೂಗು ಮಾತ್ರ ತಲುಪಬೇಕಾದವರಿಗೆ ತಲುಪುವುದೇ ಇಲ್ಲ, ಕಲ್ಲಪ್ಪ ಕಲಬುರಗಿ ಜಿಲ್ಲಾ ಮೊದಲ ಹೆಚ್ಚುವರಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ವಿಚಾರಣೆ ನಡೆಸುವ ಕೋರ್ಟ್ ಕಲ್ಲಪ್ಪನವರಿಗೆ ಅನ್ಯಾಯವಾಗಿದೆ ಎಂಬ ಅಂಶ ಮನಗಂಡು ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶ ನೀಡುತ್ತದೆ.
ಒಂದೇ ನೋಂದಣಿಯ ಎರಡು ಬೇಂಜ್ ಕಾರು, ಇದು ಹೇಗೆ?
ಕೋರ್ಟಿನ ಆದೇಶ ಪ್ರತಿ ಪಡೆದುಕೊಂಡ ಕಲ್ಲಪ್ಪ ತಮ್ಮ ವಕೀಲರೊಂದಿಗೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕಾರನ್ನು ಸೀಜ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚುವರಿ ಪರಿಹಾರದ ಮೊತ್ತ ಸಿಕ್ಕ ನಂತರವೇ ಅವರು ಕಾರನ್ನು ಬಿಟ್ಟುಕೊಡುತ್ತೇನೆ ಎಂದಿದ್ದಾರೆ.
ಮಲ್ಯ ದಿವಾಳಿ: ಭಾರತದಲ್ಲಿ 9 ಸಾವಿರ ಕೋಟಿ ರು. ಸಾಲ ಮಾಡಿ ಬ್ರಿಟನ್‌ಗೆ ಪರಾರಿಯಾಗಿದ್ದ ಉದ್ಯಮಿ ವಿಜಯ ಮಲ್ಯ, ತಮ್ಮ ಬ್ರಿಟನ್ ಮನೆಯನ್ನೂ ಕಳೆದುಕೊಂಡಿದ್ದರು. ಸಾಲ ಕಟ್ಟದ ಮಲ್ಯ ಅವರ ಲಂಡನ್ ನಿವಾಸವನ್ನು ವಶಕ್ಕೆ ಪಡೆಯಲು ಸ್ವಿಸ್ ಬ್ಯಾಂಕ್ ‘ಯುಬಿಎಸ್’ ಸಲ್ಲಿಸಿದ ಅರ್ಜಿಯನ್ನು ಬ್ರಿಟನ್ ನ್ಯಾಯಾಲಯ ಮಾನ್ಯ ಮಾಡಿತ್ತು.
ಈ ಪ್ರಕಾರ ಲಂಡನ್‌ನ ರೆಜಿಂಟ್ ಉದ್ಯಾನದಲ್ಲಿರುವ ಕಾರ್ನ್‌ವಾಲ್ ಟೆರೇಸ್ ಹೆಸರಿನ ಮಲ್ಯ ಅವರ ಐಷಾರಾಮಿ ನಿವಾಸವು ಸ್ವಿಸ್ ಬ್ಯಾಂಕ್ ಯುಬಿಎಸ್ ವಶವಾಗಲಿದೆ. ತನ್ಮೂಲಕ ಮಲ್ಯ, ಅವರ ಪುತ್ರ ಸಿದ್ಧಾರ್ಥ ಮತ್ತು ತಾಯಿ ಲಲಿತಾ ಅವರು ಈ ಮನೆಯಿಂದ ಹೊರಬೀಳಲಿದ್ದು ಮಲ್ಯ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದೆ.