'ಹಾಸನ ಏನ್ ರೇವಣ್ಣ ಸಾಮ್ರಾಜ್ಯಾನಾ.. ಸಪೋರ್ಟ್ ಕೊಡ್ರಿ’

By Web DeskFirst Published Sep 19, 2019, 9:17 PM IST
Highlights

ರೇವಣ್ಣ ಮತ್ತು ದೇವೇಗೌಡರ ಮೇಲೆ ಮಾಧುಸ್ವಾಮಿ ವಾಗ್ದಾಳಿ/ ಹಾಸನ ಯಾರ ಸಾಮ್ರಾಜ್ಯವೂ ಅಲ್ಲ/ಉಸ್ತುವಾರಿ ನಡೆಸಿಕೊಂಡು ಹೋಗುವ ಶಕ್ತಿ ನನಗಿದೆ

ತುಮಕೂರು[ಸೆ. 19]  ಕೇಂದ್ರದಿಂದ ನೆರೆ ಪರಿಹಾರ ಬಂದಿಲ್ಲ ಎನ್ನುವ‌ ವಿಚಾರದ ಬಗ್ಗೆ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದೇವೆ. ಖಾತೆಗಳಿಗೆ 10 ಸಾವಿರ ರೂ. ಹಾಕಿದ್ದೇವೆ. ತಾತ್ಕಾಲಿಕ ಶೆಡ್ ನಿರ್ಮಾಣದ ಕೆಲಸ ನಡೀತಿದೆ. ಪ್ರಧಾನಿಗಳ ಕಿಸಾನ್ ಸಮ್ಮಾನ್‌ ಜತೆಗೆ ರಾಜ್ಯದಿಂದಲೂ ಹಾಣ ಹಾಕಿದ್ದೇವೆ.  ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ. ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಮನೆಕಟ್ಟಲು 1 ಲಕ್ಷ ರೂ. ಕೊಡಲಾಗುತ್ತಿದೆ. ಭಾಗಶಃ ಹಾನಿಯಾದ ಮನೆಗಳಿಗೆ 50 ಸಾವಿರ ಕೊಡುತ್ತಿದ್ದೇವೆ. ಇದರಲ್ಲಿ ಕಾಂಗ್ರೆಸ್ ‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಹೇಳಿದ ಹಾಗೆ ಆಡಳಿತ ನಡೆಸಲು ಆಗೋಲ್ಲ. ನಾನು ಹೇಳಿದ್ದು ಸುಳ್ಳಾದರೆ ಹೋಗಿ ಪರಿಶೀಲನೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.

‘ಕಲೆಕ್ಷನ್‌ಗಾಗಿ BSY ಇಂಜಿನಿಯರ್ ಪೋಸ್ಟ್ ಇಟ್ಕೊಂಡಿದ್ರು’

 ಹಾಸನ ಕರ್ನಾಟಕ ರಾಜ್ಯದ ಒಳಗಿದೆ. ಹಾಸನವನ್ನು ಯಾರಿಗೂ ಬರೆದುಕೊಟ್ಟಿಲ್ಲ. ಹಾಸನ ನಿಭಾಯಿಸುವ ಶಕ್ತಿ‌ ನನಗಿದೆ ಎಂದೇ ಉಸ್ತುವಾರಿ ಕೊಟ್ಟಿದ್ದಾರೆ. ತುಮಕೂರಿಗಿಂತ ಹಾಸನದಲ್ಲಿ ನನಗೆ ‌ಹಿಡಿತ ಚೆನ್ನಾಗಿದೆ. ಅಧಿಕಾರಿಗಳು ಯಾವ ರಾಜಕಾರಣಿಗಳ ಮಾತು ಕೇಳಬೇಕಂತಿಲ್ಲ. ಕಾನೂನು ಮತ್ತು ನಿಯಮದ ಮಾತು ಕೇಳಬೇಕು.

ಹಾಸನದ ವಿಚಾರದಲ್ಲಿ ರೇವಣ್ಣ ಸಪೋರ್ಟ್ ಮಾಡಬೇಕು. ಹಾಸನ ರೇವಣ್ಣನ ಸಾಮ್ರಾಜ್ಯವಾ? ತುಮಕೂರು ನನ್ನ ಸಾಮ್ರಾಜ್ಯನಾ? ನನ್ನ ದೃಷ್ಟಿಯಲ್ಲಿ ರೇವಣ್ಣ ಹಸ್ತಕ್ಷೇಪ ಮಾಡಲ್ಲ ಎಂದುಕೊಂಡಿದ್ದೇನೆ ಎಂದರು.

ದೇವೇಗೌಡರು ಅರ್ಜೆಂಟ್ ನಲ್ಲಿದ್ದಾರೆ ಸೋತು ಕೂತು ಅಭ್ಯಾಸ ಇಲ್ಲ. ಅವರಿಗೆ‌ ಅದೊಂದು ಹೇಳಿಕೆ ನೀಡುವುದೊಂದು ಚಟ. ತಿರುಗಾ ಇನ್ನೊಂದು ಎಲೆಕ್ಷನ್ ಮಾಡಿಸುವ ಆಸೆ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.

click me!