ನಾಡಿಗೆ ಸಚಿವರಾದರೇನು..ಮನೆಗೆ ಮಗ, ಅಂಗಡಿಗೆ ಬಂದು ಚಿಕನ್ ಖರೀದಿಸಿದ ರವಿ

By Suvarna News  |  First Published Apr 10, 2020, 6:26 PM IST

ಅಂಗಡಿಗೆ ಬಂದು ಚಿಕನ್ ಖರೀದಿಸಿದ ಸಚಿವ ಸಿ.ಟಿ.ರವಿ./  ಚಿಕ್ಕಮಗಳೂರು ನಗರದ ಹನುಮಂತ ವೃತ್ತದ ಬಳಿಯ ಅಂಗಡಿ/ ಕೊರೋನಾಗೂ ಮಾಂಸಕ್ಕೂ ಯಾವುದೇ ಸಂಬಂಧವಿಲ್ಲ/ ನಾನ್ವೆಜ್‍ನವರು ಚಿಕನ್, ಮಟನ್, ಮೀನು ತಿನ್ನಬಹುದು/ ರವಿ ಹೇಳಿಕೆ


ಚಿಕ್ಕಮಗಳೂರು(ಏ. 10) ಲಾಕ್ ಡೌನ್ ಕಾರಣಕ್ಕೆ ಅಗತ್ಯ ವಸ್ತುಳನ್ನು ಹೊರತುಪಡಿಸಿ ಉಳಿದವುಗಳ ಮಾರಾಟಕ್ಕೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಜನರ ಸಮಸ್ಯೆಯನ್ನು ನಿರಂತರವಾಗಿ ಆಲಿಸುತ್ತಲೇ ಇರುವ ಸಚಿವ ಸಿಟಿ ರವಿ ಮಾಂಸ ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

 ಪ್ರವಾಸೋದ್ಯಮ ಸಚಿವ ಸಿಟಿ ರವಿ  ಅಂಡಗಿಗೆ ಬಂದು ಚಿಕನ್ ಖರೀದಿಸಿದ್ದಾರೆ.  ಕೋಳಿ ಮಾಂಸ ಮಾರಾಟದ ಅಂಗಡಿಗೆ  ಬಂದು 2 ಕೆ.ಜಿ. ಚಿಕನ್ ಖರೀದಿ ಮಾಡಿದ್ದಾರೆ.

Tap to resize

Latest Videos

ಲಾಕ್ ಡೌನ್ ಪರಿಣಾಮ; ರಕ್ತ ಕೊಟ್ಟ ಸಿಟಿ ರವಿ

ಚಿಕ್ಕಮಗಳೂರು ನಗರದ ಹನುಮಂತ ವೃತ್ತದ ಬಳಿಯ ಅಂಗಡಿಗೆ ಆಗಮಿಸಿದ ರವಿ ಚಿಕನ್ ಖರೀದಿ ಮಾಡಿದರು.  ಈ ವೇಳೆ ಮಾತನಾಡಿದ ಸಚಿವರು, ಕೊರೋನಾಗೂ ಮಾಂಸಕ್ಕೂ ಯಾವುದೇ ಸಂಬಂಧವಿಲ್ಲ.
ನಾನ್ವೆಜ್‍ನವರು ಚಿಕನ್, ಮಟನ್, ಮೀನು ತಿನ್ನಬಹುದು.  ರೋಗ ನಿರೋಧಕ ಶಕ್ತಿಗಾಗಿ ಇವುಗಳನ್ನ ತಿನ್ನಿ ಎಂದು ಆಹಾರ ತಜ್ಞರೇ ಹೇಳಿದ್ದಾರೆ ಎಂದು ತಿಳಿಸಿದರು.

ವೆಜ್‍ನವರು ಬೆಳೆ, ಹಣ್ಣು, ತರಕಾರಿ ತಿನ್ನಬಹುದು.  ಜನರಿಗೆ ಆತಂಕ ಬೇಡ, ಚಿಕನ್, ಮೀನು ತಿನ್ನಬಹುದು.  ಇವುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.

 

click me!