ಕೆಲ ದಿನಗಳ ಹಿಂದಷ್ಟೇ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಚುನಾವಣಾ ನಿವೃತ್ತಿ ಬಗ್ಗೆ ಮಾತನಾಡಿದ್ದರು. ಇದೀಗ ಸಚಿವರೋರ್ವರು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಹೊಸಪೇಟೆ (ಡಿ.14): ಜನರು ಒತ್ತಾಯ ಮಾಡಿದರೆ ಅಷ್ಟೇ ಮುಂದೆ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವೆ. ಇಲ್ಲದಿದ್ದರೆ, ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ನಗರದಲ್ಲಿ ವಕೀಲರ ಸಂಘದ ಸಮಾರಂಭದಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆ ಬಳಿಕ ಕಣಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದೆ. ಆದರೆ, ಉಪಚುನಾವಣೆ ಹಿನ್ನೆಲೆ ಸ್ಪರ್ಧೆ ಮಾಡಿದ್ದೆ.
ಈಗಲೂ ಆಗ ಹೇಳಿದ ಹೇಳಿಕೆಗೆ ಬದ್ಧನಾಗಿರುವೆ. ಆದರೆ ಜನರು ಒತ್ತಾಯ ಮಾಡಿದರೆ ಮಾತ್ರ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವೆ ಎಂದರು.
ನಿಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗ್ತಾ ಇದೆಯಾ? ಕಮಾಂಡ್ ಕಂಟ್ರೋಲ್‌ಗೆ ಕರೆ ಮಾಡಿ ...
ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದರು. ಇದೀಗ ಸಚಿವ ಆನಂದ್ ಸಿಂಗ್ ಸಹ ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ.