ಮೊದಲು ಕುಡಿಯೋಕೆ ನೀರು ಕೊಡಿ; ಆಮೇಲೆ ಓಟು!

By Suvarna NewsFirst Published Apr 22, 2024, 12:18 AM IST
Highlights

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಶಾಶ್ವತ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ತಾಲೂಕು. ಇಲ್ಲಿ ಪ್ರತಿ ಬಾರಿಯೂ ಕೂಡ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಕೂಡ ಒಟ್ಟೊಟ್ಟಿಗೆ ಆರಂಭವಾಗುತ್ತೆ. ಅಂತದ್ದೇ ಒಂದು ಕುಡಿಯುವ ನೀರಿನ ಸಮಸ್ಯೆ ಕಡೂರು ತಾಲೂಕಿನ ಸರಸ್ವತಿಪುರ ಗ್ರಾಮದಲ್ಲಿ ಎದುರಾಗಿದೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
ಚಿಕ್ಕಮಗಳೂರು (ಏ.22) : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಶಾಶ್ವತ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ತಾಲೂಕು. ಇಲ್ಲಿ ಪ್ರತಿ ಬಾರಿಯೂ ಕೂಡ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಕೂಡ ಒಟ್ಟೊಟ್ಟಿಗೆ ಆರಂಭವಾಗುತ್ತೆ. ಅಂತದ್ದೇ ಒಂದು ಕುಡಿಯುವ ನೀರಿನ ಸಮಸ್ಯೆ ಕಡೂರು ತಾಲೂಕಿನ ಸರಸ್ವತಿಪುರ ಗ್ರಾಮದಲ್ಲಿ ಎದುರಾಗಿದೆ. 

ವಾರಕ್ಕೊಮ್ಮೆ ಕುಡಿಯೋಕೆ ನೀರು ಪೂರೈಕೆ : 

ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಇಲ್ಲಿನ ಗ್ರಾಮಸ್ಥರು ಎದುರಿಸುತ್ತಿದ್ದಾರೆ . ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಬಾಗಿಲಿಗೆ ಅಲೆದು ಅಲೆದು ಕುಡಿಯುವ ನೀರು ಕೊಡಿ ಎಂದು ಬೇಡಿ ಸುಸ್ತಾಗಿ ಹೋಗಿದ್ದಾರೆ. ಆದ್ರೆ, ಸ್ಥಳೀಯ ಆಡಳಿತ ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಿರುವ ಜೊತೆಗೆ ವಾರಕ್ಕೊಮ್ಮೆ ಕುಡಿಯೋಕೆ ನೀರು ಪೂರೈಕೆ ಮಾಡುತ್ತಿದೆ. 

ಜಾಲಿ ಮೂಡಲ್ಲಿ ಸಾನ್ಯಾ ಅಯ್ಯರ್…. ನೀನಿರಲು ಜೊತೆಯಲ್ಲಿ…. ಅಂದಿದ್ದು ಯಾರಿಗೆ?

ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಎಲೆಕ್ಷನ್ ಬ್ಯುಸಿ : 

ಈ ಊರಲ್ಲಿ ಕುಡಿಯೋಕೆ ನೀರಿಲ್ಲ. ವಾರಕ್ಕೊಮ್ಮೆ ಬಿಡೋ ನೀರಿಗಾಗಿ ಮಹಿಳೆಯರು ಬೆಳಗ್ಗಿನಿಂದ ಕಾದು ಕೂರಬೇಕು. ಒಂದು ವೇಳೆ ತಾವು ಮನೆಗೆ ಹೋಗೋದಾದ್ರೆ ಟ್ಯಾಂಕ್ ಬಳಿ ತಮ್ಮ ಬಿಂದಿಗೆ ಬಿಟ್ಟು ಹೋಗಬೇಕು. ಅದೇ ರೀತಿ ಎಲ್ಲರೂ ಕೂಡ ಟ್ಯಾಂಕ್ ಬಳಿ ಸರತಿಗಾಗಿ ಬಿಟ್ಟು ಹೋಗಿರುವ ಕೊಡಗಳೇ ಆ ಊರಿನ ನೀರಿನ ಸಮಸ್ಯೆಯನ್ನು ಬಂದವರಿಗೆ ಎಳೆ ಎಳೆಯಾಗಿ ಬಿಚ್ಚಿಡುತ್ತವೆ. ಅಷ್ಟೇ ಅಲ್ಲದೆ ಟ್ಯಾಂಕ್ ಬಳಿ ಬಿಂದಿಗೆಯನ್ನ ಬಿಟ್ಟು ಹೋದರೆ ಆ ಬಿಂದಿಗೆ ಅಲ್ಲಿರುತ್ತೆ ಅನ್ನೋ ನಂಬಿಕೆ ಕೂಡ ಇಲ್ಲದಂತಾಗಿದೆ. ಆ ಮಟ್ಟಿಗಿನ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೂ ಕೂಡ ಸ್ಥಳೀಯ ಹಾಗೂ ತಾಲೂಕು ಆಡಳಿತ ಮಾತ್ರ ಚುನಾವಣೆಯಲ್ಲಿ ಬ್ಯುಸಿ ಆಗಿದೆ.

 

ಚಿಕ್ಕಮಗಳೂರು: ಹುಲಿ ಹತ್ಯೆ ಆರೋಪ, ಇಬ್ಬರ ಬಂಧನ ಇನ್ನೋರ್ವ ಪರಾರಿ

ಇಡೀ ದಿನ ಕಾದರೂ ಒಂದು ಡ್ರಮ್ ನೀರು ಸಿಕ್ಕರೆ ಹೆಚ್ಚು. ಅದೇ ನೀರಲ್ಲಿ ಒಂದು ವಾರ ಬದುಕಬೇಕು. ದನಕರುಗಳನ್ನ ಸಾಕಬೇಕು. ನಾವು ಬದುಕೋದು ಹೇಗೆಂದು ಜನ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಒಟ್ಟಾರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನಸಾಮಾನ್ಯರಿಗೆ ಏನಾದರೂ ಆಗಲಿ ನಮಗೆ ಚುನಾವಣೆಯೇ ಮುಖ್ಯ ಎನ್ನುತ್ತಿದ್ದಾರೆ. ಸರಸ್ವತಿಪುರದ ಗ್ರಾಮಸ್ಥರು ಮಾತ್ರ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಕುಡಿಯೋಕೆ ನೀರು ಪೂರೈಕೆ ಮಾಡೋಕೆ ಆಗದಿದ್ರೆ ತಮ್ಮ-ತಮ್ಮ ಸ್ಥಾನ ಬಿಟ್ಟು ಮನೆಗೆ ಹೋಗಿ ಎಂದು ಹಿಡಿ ಶಾಪ ಹಾಕ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದ್ರೂ ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಕುಡಿಯೋಕೆ ನೀರು ಕೊಡಬೇಕಾಗಿದೆ.

click me!