ಪೊಲೀಸರ ಸರ್ಪಗಾವಲಿನಲ್ಲಿ ಉಡುಪಿಗೆ ಬನ್ನಂಜೆ ರಾಜ; ತಾಯಿ ಚಿತೆಗೆ ಅಗ್ನಿಸ್ಪರ್ಶ

By Web DeskFirst Published Aug 27, 2018, 4:37 PM IST
Highlights
  • ಕಳೆದ ಶನಿವಾರ ಕಾಲು ಜಾರಿ ಮೃತಪಟ್ಟಿದ್ದ  ಬನ್ನಂಜೆ ರಾಜನ ತಾಯಿ
  • ಹಿಂಡಲಗಾ ಜೈಲಿನಲ್ಲಿ ಜೈಲುವಾಸವನ್ನು ಅನುಭವಿಸುತ್ತಿರುವ  ಬನ್ನಂಜೆ ರಾಜ
  • 15 ಪ್ರಕರಣಗಳನ್ನು ಎದುರಿಸುತ್ತಿರುವ ಭೂಗತ ಪಾತಕಿ 

ಉಡುಪಿ : ಪೊಲೀಸರ ಸರ್ಪಗಾವಲಿನಲ್ಲಿ ಉಡುಪಿಗೆ ಕರೆತರಲಾಗಿರುವ ಭೂಗತ ಪಾತಕಿ ಬನ್ನಂಜೆ ರಾಜ, ತನ್ನ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾನೆ.  

ಬನ್ನಂಜೆ ರಾಜನ ತಾಯಿ ವಿಲಾಸಿನಿ‌ ಶೆಟ್ಟಿಗಾರ್(78) ಕಳೆದ ಶನಿವಾರ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು,  ಮಲ್ಪೆಯ ಹಿಂದೂ ರುಧ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜೈಲುವಾಸವನ್ನು ಅನುಭವಿಸುತ್ತಿರುವ  ಬನ್ನಂಜೆ ರಾಜನಿಗೆ ನ್ಯಾಯಾಲಯವು, ಮಾನವೀಯ ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಿತ್ತು.

ರಾಜ ಆಗಮನದ  ಹಿನ್ನೆಲೆಯಲ್ಲಿ ಮನೆ, ರುಧ್ರಭೂಮಿ  ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. 

ಕಳೆದ ಜುಲೈಯಲ್ಲೂ ಕೂಡಾ ವಿಶೇಷ ಅನುಮತಿಯ ಮೇರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ಬನ್ನಂಜೆ ರಾಜನಿಗೆ ಅವಕಾಶ ಕಲ್ಪಿಸಲಾಗಿತ್ತು.

ಸದ್ಯ ವಿಚಾರಣಾಧೀನ‌ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿರುವ ರಾಜ, ಹದಿನೈದು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.

click me!