ಚುನಾವಣೆ : ರಾಜ್ಯದಲ್ಲಿ 30 ಅಭ್ಯರ್ಥಿಗಳ ಅವಿರೋಧ ಆಯ್ಕೆ

Published : May 22, 2019, 08:51 AM IST
ಚುನಾವಣೆ :  ರಾಜ್ಯದಲ್ಲಿ 30 ಅಭ್ಯರ್ಥಿಗಳ ಅವಿರೋಧ ಆಯ್ಕೆ

ಸಾರಾಂಶ

30 ಸ್ಥಾನಗಳಿಗೆ ರಾಜ್ಯದಲ್ಲಿ ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿದೆ. 

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚಿತ್ರದುರ್ಗ, ಕೋಲಾರ ಸೇರಿದಂತೆ ಏಳು ಜಿಲ್ಲೆಗಳ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ 30 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ. 

ಕಾಂಗ್ರೆಸ್ಸಿನ 15, ಬಿಜೆಪಿ, ಜೆಡಿಎಸ್‌ನ ತಲಾ ಒಬ್ಬರು ಹಾಗೂ 13 ಮಂದಿ ಪಕ್ಷೇತರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಸಭೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ಪುರಸಭೆ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪುರಸಭೆ, ತಾಳಿಕೋಟೆ ಪುರಸಭೆ, ಧಾರವಾಡದ ಕಲಘಟಗಿ ಪಟ್ಟಣ ಪಂಚಾಯಿತಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆ, ಹೊನ್ನಾವರ ಪಟ್ಟಣ ಪಂಚಾಯಿತಿ, ಬೀದರ್ ಜಿಲ್ಲೆಯ ಹುಮನಾಬಾದ್ ಪುರಸಭೆ, ಭಾಲ್ಕಿ ಪುರಸಭೆ, ಔರಾದ ಪಟ್ಟಣ ಪಂಚಾಯಿತಿ ಮತ್ತು ಬಳ್ಳಾರಿ ಜಿಲ್ಲೆಯ ಹಡಗಲಿ ಪುರಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ. 

PREV
click me!

Recommended Stories

ಶಾಸಕ ಲಕ್ಷ್ಮಣ ಸವದಿ ಅಂಡ್ ಸನ್ಸ್‌ನಿಂದ ಡಿಸಿಸಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ; ಮನೆಗೆ ಕರೆಸಿಕೊಂಡು ಥಳಿತ!
ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಪುಟ್ಟ ಬಾಲಕನ ಕನ್ನಡ-ಇಂಗ್ಲೀಷ್ ಕಮೆಂಟರಿ ವಿಡಿಯೋ ಜನ ಪಿಧಾ