ಕೊಡಗಿನಲ್ಲಿ ಭಾರೀ ಮಳೆ, ಕಾವೇರಿಗೆ ಬಂತು ಜೀವಕಳೆ: 100 ಅಡಿ ಭರ್ತಿಯತ್ತ ಕೆಆರ್‌ಎಸ್ ಜಲಾಶಯ!

Published : Aug 02, 2026, 10:05 PM IST
Mandya KRS Dam

ಸಾರಾಂಶ

ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಯ ಸಮೀಪ ತಲುಪಿದೆ. ಪ್ರಸ್ತುತ 31,583 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಈ ಬೆಳವಣಿಗೆಯು ಮಂಡ್ಯ ಮತ್ತು ಮೈಸೂರು ಭಾಗದ ರೈತರಲ್ಲಿ ಮುಂಗಾರು ಬೆಳೆಗೆ ನೀರಿನ ಭರವಸೆ ಮೂಡಿಸಿದೆ.

ಮಂಡ್ಯ (ಆ.02): ಕನ್ನಡ ನಾಡಿನ ಜೀವನಾಡಿ ಕಾವೇರಿ (Cauvery) ಮತ್ತೊಮ್ಮೆ ಕನ್ನಡಿಗರ ನಿರೀಕ್ಷೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Catchment) ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ (Heavy Rain) ಪರಿಣಾಮ ಮಂಡ್ಯ (Mandya) ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.

ಭಾನುವಾರ ಲಭ್ಯವಾದ ಮಾಹಿತಿಯ ಪ್ರಕಾರ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ 98.80 ಅಡಿ ನೀರು ಸಂಗ್ರಹವಾಗಿದ್ದು, ಬೆಳಗಿನ ವೇಳೆಗೆ 100 ಅಡಿ ಗಡಿ ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಇನ್ನೂ 26.80 ಅಡಿ ನೀರು ತುಂಬಬೇಕಿದೆ. ಪ್ರಸ್ತುತ ಡ್ಯಾಂಗೆ 31,583 ಕ್ಯೂಸೆಕ್ (Cusecs) ನೀರು ಒಳಹರಿವು ದಾಖಲಾಗುತ್ತಿದೆ. ಇನ್ನೊಂದೆಡೆ 1,819 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಒಳಹರಿವು ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.

22 ಟಿಎಂಸಿ ನೀರು ಸಂಗ್ರಹ

ಸದ್ಯ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 21.885 ಟಿಎಂಸಿ (TMC) ನೀರು ಸಂಗ್ರಹವಾಗಿದೆ. ಡ್ಯಾಂನ ಒಟ್ಟು ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಆಗಿದೆ. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ, ಆಗಸ್ಟ್ ತಿಂಗಳಲ್ಲೇ ಅಣೆಕಟ್ಟೆ ಗಣನೀಯ ಮಟ್ಟಕ್ಕೆ ಭರ್ತಿಯಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ (Irrigation Department) ಮೂಲಗಳು ಅಂದಾಜಿಸಿವೆ.

ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಿಂದ ಮಂಡ್ಯ, ಮೈಸೂರು (Mysuru) ಸೇರಿದಂತೆ ಕಾವೇರಿ ನೀರಾವರಿ ಪ್ರದೇಶದ (Cauvery Irrigation Region) ರೈತರಲ್ಲಿ ಸಂತಸ ಮನೆ ಮಾಡಿದೆ. ಮುಂಗಾರು (Monsoon) ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.

ಕೆಆರ್‌ಎಸ್ (KRS Dam) ಇಂದಿನ ಪ್ರಮುಖ ಅಂಕಿಅಂಶಗಳು

  • ಗರಿಷ್ಠ ಮಟ್ಟ (Maximum Level): 124.80 ಅಡಿ
  • ಇಂದಿನ ನೀರಿನ ಮಟ್ಟ (Current Water Level): 98.80 ಅಡಿ
  • ಒಳಹರಿವು (Inflow): 31,583 ಕ್ಯೂಸೆಕ್
  • ಹೊರಹರಿವು (Outflow): 1,819 ಕ್ಯೂಸೆಕ್
  • ಗರಿಷ್ಠ ಸಂಗ್ರಹ ಸಾಮರ್ಥ್ಯ (Maximum Storage): 49.452 ಟಿಎಂಸಿ
  • ಇಂದಿನ ನೀರಿನ ಸಂಗ್ರಹ (Current Storage): 21.885 ಟಿಎಂಸಿ
  • ಭರ್ತಿಗೆ ಬಾಕಿ (Balance to Full Reservoir Level): 26.80 ಅಡಿ

PREV
Read more Articles on
click me!

Recommended Stories

School Holiday: ರಾಜ್ಯದಲ್ಲಿ ಭಾರೀ ಮಳೆ ಆರ್ಭಟ, ಈ ಜಿಲ್ಲೆಗಳ ಕೆಲವು ತಾಲೂಕುಗಳ ಶಾಲೆ-ಕಾಲೇಜುಗಳಿಗೆ ನಾಳೆ ರಜೆ!
ಭದ್ರಾ ನದಿ ಪ್ರವಾಹ: ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದ ಅಡಿಕೆ, ಕಾಫಿ ತೋಟ ಕ್ಷಣಾರ್ಧದಲ್ಲಿ ಕೊಚ್ಚಿಹೋಯ್ತು!