ತವರಿನಿಂದ ಪತ್ನಿಯನ್ನು ಕರೆದೊಯ್ದ ಅಳಿಯನ ವಿರುದ್ಧವೇ ಕಿಡ್ನಾಪ್ ಕೇಸ್‌! ವಿಚಿತ್ರ ಪ್ರಕರಣಕ್ಕೆ ಹೈಕೋರ್ಟ್ ತಡೆ

Kannadaprabha News   | Kannada Prabha
Published : Jun 25, 2026, 02:08 PM IST
Karnataka High court

ಸಾರಾಂಶ

ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಕ್ಕೆ ಅಳಿಯನ ವಿರುದ್ಧ ಅತ್ತೆ ದಾಖಲಿಸಿದ್ದ ಅಪಹರಣ ಮತ್ತು ಅತಿಕ್ರಮ ಪ್ರವೇಶ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪತಿ-ಪತ್ನಿ ಒಟ್ಟಿಗೆ ವಾಸಿಸುತ್ತಿರುವುದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಗೆ ತಡೆ ನೀಡಿ, ದೂರುದಾರ ಅತ್ತೆಗೆ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು: ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಅಳಿಯನ ವಿರುದ್ಧ ಅತ್ತೆ ದಾಖಲಿಸಿದ್ದ ಅಪಹರಣ ಮತ್ತು ಮನೆ ಅತಿಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ರಾಜಾಜಿನಗರದ ನಿವಾಸಿ ಜ್ಯೋತಿ ಎಂಬುವರು ತನ್ನ ಮಗಳನ್ನು ಅಳಿಯ ಮುರಳಿ ಮತ್ತು ಆತನ ಸ್ನೇಹಿತರು ಅಪಹರಣ ಮಾಡಿದ್ದಾರೆ ಎಂದು 2026ರ ಫೆ.13ರಂದು ದೂರು ನೀಡಿದ್ದರು.

ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಅಪಹರಣ ಹಾಗೂ ಅತಿಕ್ರಮ ಪ್ರವೇಶ ಆರೋಪದ ಮೇಲೆ ರಾಜಾಜಿನಗರ ಠಾಣಾ ಪೊಲೀಸರು ದಾಖಲಿಸಿದ ಎಫ್ಐರ್ ಹಾಗೂ ಅದಕ್ಕೆ ಸಂಬಂಧಿಸಿದ ನಗರದ 32ನೇ ಎಸಿಜೆಎಂ ಕೋರ್ಟ್ ವಿಚಾರಣೆ ರದ್ದು ಕೋರಿ ಮುರಳಿ, ಸ್ನೇಹಿತರಾದ ಮಂಜುನಾಥ ಹಾಗೂ ಚರಣ್‌ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಯಾರನ್ನು ಅಪಹರಣ ಮಾಡಿದ್ದೀರಿ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಕೇಳಿತು. ಅರ್ಜಿದಾರರ ಪರ ವಕೀಲರು, ಪತ್ನಿಯನ್ನು ಎಂದಾಗ ಅಶ್ಚರ್ಯ ಪಟ್ಟ ಅವರು ಪತ್ನಿಯನ್ನು ಏಕೆ ಅಪಹರಣ ಮಾಡಿದಿರಿ ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ಅಪಹರಣ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದಷ್ಟೇ ಎಂದು ಉತ್ತರಿಸಿದರು.

ಆಗ ನ್ಯಾಯಪೀಠ, ''''ಮದುವೆಯಾಗಿದ್ದರೆ ಮತ್ಯಾಕೆ ಅಪಹರಣ ಪ್ರಕರಣ ದಾಖಲಿಸಲಾಗಿದೆ? ಪತಿ-ಪತ್ನಿ ಒಟ್ಟಿಗೆ ವಾಸ ಮಾಡುತ್ತಿದ್ದಾರೆಯೇ'''' ಮತ್ತೆ ಪ್ರಶ್ನೆ ಕೇಳಿತು.

ಅರ್ಜಿದಾರರ ಪರ ವಕೀಲರು, ''''ಮೊದಲ ಅರ್ಜಿದಾರ ಮುರಳಿ ದೂರುದಾರೆಯ ಪುತ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಪತ್ನಿ ತವರು ಮನೆಗೆ ಹೋಗಿದ್ದರು.‌ ಮುರಳಿ ಅತ್ತೆ ಮನೆಗೆ ಹೋಗಿ ಪತ್ನಿಯನ್ನು ಕರೆತಂದಿರುವುದಕ್ಕೆ ಅಪಹರಣ ಹಾಗೂ ಅತಿಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ. ಮುರಳಿ ಹಾಗೂ ದೂರುದಾರೆಯ ಪುತ್ರಿ ಸದ್ಯ ಒಂದೇ ಮನೆಯಲ್ಲಿ ಜೊತೆಯಾಗಿ ಜೀವಿಸುತ್ತಿದ್ದಾರೆ'''''''' ಎಂದು ತಿಳಿಸಿದರು.

ಈ ವಾದ ಪರಿಗಣಿಸಿದ ಪೀಠ, ‌ಮುರಳಿಯು ದೂರುದಾರೆಯ ಮನೆಗೆ ಹೋಗಿ ಪತ್ನಿಯನ್ನು ಕರದುಕೊಂಡು ಹೋದ ಕಾರಣಕ್ಕೆ ಈ ಪ್ರಕರಣ ದಾಖಲಾಗಿಸಲಾಗಿದೆ‌. ಆದ್ದರಿಂದ ಅರ್ಜಿದಾರರಿಗೆ ಸಂಬಂಧಿಸಿದ ಮುಂದಿನ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಮಧ್ಯಂತರ ಆದೇಶ ಮಾಡಿತು.

ನಂತರ ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜಾಜಿನಗರ ಠಾಣಾ ಪೊಲೀಸರು ಮತ್ತು ದೂರುದಾರೆಯಾದ ಮುರಳಿ ಅವರ ಅತ್ತೆ ಜ್ಯೋತಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

PREV
Read more Articles on
click me!

Recommended Stories

ಸಾವಿಗೂ ಮುನ್ನ ಗೆಳತಿಗೆ ವೈಶಾಕ್ ಉಪಾಧ್ಯಾಯ ಕೊನೆ ಮೆಸೇಜ್ ಏನಾಗಿತ್ತು? ಕುಕ್ಕೆ ಸುಬ್ರಮಣ್ಯಕ್ಕೆ ಹೋಗೋಣ ಎಂದಿದ್ದ ನಟಿ ಕೃಷಿ ತಾಪಂಡ
ಅಪ್ಪಾ ಐ ಲವ್ ಯೂ ಪಾ.., ಅನ್ನೋ ಮಗುವನ್ನ ಬೈಕ್ ಸೈಡ್ ಬ್ಯಾಗ್‌ನಲ್ಲಿ ಕೂರಿಸಿದ ಬೆಪ್ಪ! ಮುಂದೇನಾಯ್ತು ನೀವೇ ನೋಡ್ರಪ್ಪ..