BBMP ಮುಖ್ಯ ಆಯುಕ್ತರನ್ನೇ ಜೈಲಿಗೆ ಕಳಿಸ್ತೀವಿ: ಹೈಕೋರ್ಟ್‌ ಕೆಂಡಾಮಂಡಲ

Kannadaprabha News   | Asianet News
Published : Nov 10, 2021, 06:16 AM ISTUpdated : Nov 10, 2021, 06:20 AM IST
BBMP ಮುಖ್ಯ ಆಯುಕ್ತರನ್ನೇ ಜೈಲಿಗೆ ಕಳಿಸ್ತೀವಿ: ಹೈಕೋರ್ಟ್‌ ಕೆಂಡಾಮಂಡಲ

ಸಾರಾಂಶ

*  ಅಕ್ರಮ ಕಟ್ಟಡ ವರದಿಗೆ ಬಿಬಿಎಂಪಿ ವಿಳಂಬ *  ಮತ್ತೆ ಕಾಲಾವಕಾಶ ಕೇಳಿದ್ದಕ್ಕೆ ಹೈಕೋರ್ಟ್‌ ಕೆಂಡಾಮಂಡಲ *  ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸಿದ್ದಾರೆ  

ಬೆಂಗಳೂರು(ನ.10):  ನಗರದ ಶೇಷಾದ್ರಿಪುರದ ನೆಹರು ಉದ್ಯಾನದಲ್ಲಿ ಅಕ್ರಮವಾಗಿ ಸ್ಪೋರ್ಟ್ಸ್‌ ಕ್ಲಬ್‌(Sports Club) ನಿರ್ಮಿಸುತ್ತಿರುವ ಆರೋಪ ಸಂಬಂಧ ಸ್ಥಳ ಪರಿಶೀಲಿಸಿ ವರದಿ(ಋಎಪೊರತ) ಸಲ್ಲಿಸಲು ನೀಡಿದ್ದ ನಿರ್ದೇಶನ ಪಾಲಿಸದ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌(High Court ), ನ್ಯಾಯಾಲಯದ ಆದೇಶಗಳನ್ನು ಲಘುವಾಗಿ ಪರಿಗಣಿಸುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಉದ್ಯಾನಗಳು ಹಾಗೂ ಆಟದ ಮೈದಾನಗಳ ಅಸಮರ್ಪಕ ನಿರ್ವಹಣೆ ಪ್ರಶ್ನಿಸಿ ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

2 ಸಾವಿರ ಕೋಟಿ ಉಳಿಸಿಕೊಳ್ಳಲು ಸುಗ್ರೀವಾಜ್ಞೆಗೆ ಸಿದ್ಧತೆ

ಕಳೆದ ಜು.19ರಂದು ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್‌ ದಳವಾಯಿ ಶೇಷಾದ್ರಿಪುರದ ನೆಹರು ಪಾರ್ಕ್ನಲ್ಲಿ ನೆಹರು ಸ್ಪೋಟ್ಸ್‌ರ್‍ ಕ್ಲಬ್‌ ಹೆಸರಿನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ್ದ ಪೀಠ, ಅರ್ಜಿದಾರರು ಆರೋಪಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಕೂಡಲೇ ಅಧಿಕಾರಿಯೊಬ್ಬರನ್ನು ಪಾಲಿಕೆ ನಿಯೋಜಿಸಬೇಕು. ಆ ಅಧಿಕಾರಿ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ಮೂರು ವಾರಗಳಲ್ಲಿ ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು. ಆ ನಂತರ ಮೂರ್ನಾಲ್ಕು ಬಾರಿ ಅರ್ಜಿ ವಿಚಾರಣೆಗೆ ಬಂದಾಗಲೂ ವರದಿ ಸಲ್ಲಿಸಲು ಪಾಲಿಕೆ ಕಾಲಾವಕಾಶ ಪಡೆದುಕೊಂಡಿತ್ತು.

ಜೈಲಿಗೆ ಕಳಿಸಿದ್ರೆ ಸರಿ ಹೋಗುತ್ತೆ:

ಮಂಗಳವಾರ ಮತ್ತೆ ಅರ್ಜಿ ವಿಚಾರಣೆಗೆ ಬಂದಾಗ ಬಿಬಿಎಂಪಿ ಪರ ವಕೀಲರು ಜು.19ರ ಆದೇಶದ ಅನುಪಾಲನಾ ವರದಿ ಸಲ್ಲಿಸಲು ಕಾಲಾವಕಾಶ ಕೋರಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ನ್ಯಾಯಾಲಯದ(Court) ಆದೇಶಗಳನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸಿದ್ದಾರೆ. ಇದನ್ನೆಲ್ಲ ನೋಡುತ್ತಾ ಸುಮ್ಮನೆ ಕೂರಲು ಸಾಧ್ಯವಿಲ್ಲ. ಒಂದಿಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದರೆ ಎಲ್ಲ ಸರಿ ಹೋಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರನ್ನೇ ಜೈಲಿಗೆ ಕಳುಹಿಸಬೇಕಾದೀತು ಎಂದು ಎಚ್ಚರಿಸಿತು.

Bengaluru| ಎಲ್ಲೆಂದರಲ್ಲಿ ಪುನೀತ್‌ ಪ್ರತಿಮೆ ಸ್ಥಾಪಿಸದಂತೆ ಬಿಬಿಎಂಪಿ ಸೂಚನೆ

ನ್ಯಾಯಾಲಯದ ಘನತೆ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಉದ್ಯಾನ, ಆಟದ ಮೈದಾನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದೊಡ್ಡವರ ವಿರುದ್ಧ ಕ್ರಮ ಜರುಗಿಸಲು ಪಾಲಿಕೆ ಹಿಂಜರಿಯಬಹುದು. ಆದರೆ, ನ್ಯಾಯಾಲಯಕ್ಕೆ ಅಂಥ ಯಾವುದೇ ಹಿಂಜರಿಕೆ ಇಲ್ಲ. ಕೂಡಲೇ ಕ್ರಮ ಜರುಗಿಸದಿದ್ದರೆ ಅಧಿಕಾರಿಗಳಿಗೆ ತೊಂದರೆ ಖಚಿತ ಎಂದು ನ್ಯಾಯಪೀಠ ತಿಳಿಸಿತು. ಅಲ್ಲದೆ, ಇದೇ ಅಂತಿಮ ಅವಕಾಶವಾಗಿದ್ದು, ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.

ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ

ರಾಜ್ಯದ ಇತರ ಭಾಗಗಳಲ್ಲಿರುವ ಉದ್ಯಾನ ಹಾಗೂ ಮೈದಾನಗಳ ನಿರ್ವಹಣೆ ಹಾಗೂ ಸ್ಥಿತಿಗತಿ ಕುರಿತ ವರದಿಯನ್ನು ಆಯಾ ನಗರ ಪಾಲಿಕೆಗಳಿಂದ ತರಿಸಿಕೊಂಡು, ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ(Government of Karnataka) ನ್ಯಾಯಪೀಠ ನಿರ್ದೇಶಿಸಿತು.

ಎಲ್ಲೆಂದರಲ್ಲಿ ಪುನೀತ್‌ ಪ್ರತಿಮೆ ಸ್ಥಾಪಿಸದಂತೆ ಬಿಬಿಎಂಪಿ ಸೂಚನೆ

ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಪುತ್ಥಳಿ ಅಥವಾ ಪ್ರತಿಮೆಗಳನ್ನು ಅನಧಿಕೃತವಾಗಿ ಎಲ್ಲಿಯೂ ಸ್ಥಾಪಿಸಬಾರದು. ಸರ್ಕಾರದ ತೀರ್ಮಾನದಂತೆ ಅಧಿಕೃತವಾಗಿ ಒಂದು ಪುತ್ಥಳಿಯನ್ನು ಸ್ಥಾಪಿಸುವುದಾಗಿ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದ್ದರು. 

ಈಗಾಗಲೇ ಅನಧಿಕೃತ ಪುತ್ಥಳಿ ತೆರವಿಗೆ ಹೈಕೋರ್ಟ್‌(High Court) ಸೂಚನೆ ನೀಡಿದೆ. ಹೀಗಾಗಿ ಅನುಮತಿ ಪಡೆಯದೆ ಯಾವುದೇ ಪುತ್ಥಳಿ ಸ್ಥಾಪಿಸುವಂತಿಲ್ಲ. ಪಾಲಿಕೆಯ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ, ಪ್ರತಿಮೆ(Statue) ಇಡದಂತೆ ಸೂಚನೆ ನೀಡಲಾಗಿದೆ. ಪಾದಚಾರಿ ಮಾರ್ಗ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವ ಪ್ರದೇಶದಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಿರುವ ಪುತ್ಥಳಿಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

PREV
Read more Articles on
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!