ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಅದರಿಂದಲೇ ಸಂಸದ ಡಾ. ಉಮೇಶ ಜಾಧವ್‌ರನ್ನು ರಾಜಕೀಯವಾಗಿ ಬೆಳೆಸಿದ್ದೇ ಕಾಂಗ್ರೆಸ್, ಆದರೆ ಸ್ವ ಹಿತಾಸಕ್ತಿಗಾಗಿ ಪಕ್ಷಕ್ಕೆ ದ್ರೋಹ ಮಾಡಿ ಕಾರ್ಯಕರ್ತರನ್ನು ಬೀದಿಪಾಲು ಮಾಡಿ ಬಿಜೆಪಿ ತೋರಿಸಿದ ಆಮಿಷಕ್ಕೆ ಒಳಗಾಗಿ ಹೊರಟು ಹೋದರು: ಜಮಾದಾರ
ಚಿಂಚೋಳಿ(ಏ.21): ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದ್ದ ಬ್ರಿಟಿಷರು ತಾವೇ ನಿರ್ನಾಮವಾಗಿ ಹೋದರು. ಈಗ ಕಾಂಗ್ರೆಸ್ ಮುಕ್ತ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಡೆಯನ್ನು ಜನತೆ ಬಹಳ ದಿನ ಸಹಿಸುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಜಮಾದಾರ ಹೇಳಿದ್ದಾರೆ.
ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಅದರಿಂದಲೇ ಸಂಸದ ಡಾ. ಉಮೇಶ ಜಾಧವ್‌ರನ್ನು ರಾಜಕೀಯವಾಗಿ ಬೆಳೆಸಿದ್ದೇ ಕಾಂಗ್ರೆಸ್. ಆದರೆ ಸ್ವ ಹಿತಾಸಕ್ತಿಗಾಗಿ ಪಕ್ಷಕ್ಕೆ ದ್ರೋಹ ಮಾಡಿ ಕಾರ್ಯಕರ್ತರನ್ನು ಬೀದಿಪಾಲು ಮಾಡಿ ಬಿಜೆಪಿ ತೋರಿಸಿದ ಆಮಿಷಕ್ಕೆ ಒಳಗಾಗಿ ಹೊರಟು ಹೋದರು. ತಮ್ಮ ಈ ಚಾಳಿಯನ್ನೇ ಚಿಂಚೋಳಿ ಕ್ಷೇತ್ರದ ಕಾರ್ಯಕರ್ತರಿಗೆ ಕಲಿಸುತ್ತಿದ್ದಾರೆ ಎಂದರು.
'ಡಿಕೆಶಿ ಹಡಗಿಗೆ ಸಿದ್ದರಾಮಯ್ಯ ರಂಧ್ರ'
ತಾಲೂಕು ಬಿಜೆಪಿ ಅಧ್ಯಕ್ಷರು ಸಾಮಾಜಿಕ ಜಾಲ ತಾಣಗಳಲ್ಲಿ ಚಿಂಚೋಳಿ ಕಾಂಗ್ರೆಸ್ ಮುಕ್ತವೆಂದು ಹೇಳಿಕೆ ನೀಡುತ್ತಿದ್ದಾರೆ. ಈ ಮೊದಲು ತಮ್ಮ ಪರಿಸ್ಥಿತಿ ಯಾವ ತರಹದಾಗಿತ್ತು ಎಂಬುದನ್ನು ತಾವೇ ಪ್ರಶ್ನಿಸಿಕೊಳ್ಳಬೇಕೆಂದು ತಿರುಗೇಟು ನೀಡಿದ್ದಾರೆ.