
ಕೋಲಾರ : ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಹಾಗೂ ಮರು ಎಣಿಕೆ ಎಂದು ಹೈಕೋರ್ಟ್ ಆದೇಶ ಸಂಬಂಧ ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನಿಸಿ ಕೋಲಾರದಲ್ಲಿ ಮಂಜುನಾಥ್ ಗೌಡ ಗೆ ಸ್ವಾಗತ ಮಾಡಿದರು. ಕೋಲಾರ ಜಿಲ್ಲಾ ಬಿಜೆಪಿ ಕಚೇರಿಯ ಬಳಿ ಸ್ವಾಗತ ಮಾಡಿದ್ದು, ಮಾಜಿ ಸಂಸದ ಮುನಿಸ್ವಾಮಿ,ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾದರು. ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಹಾಗೂ ಮರು ಎಣಿಕೆಗೆ ಹೈಕೋರ್ಟ್ ಆದೇಶ ಕುರಿತು ಕೋಲಾರದಲ್ಲಿ ಅರ್ಜಿದಾರ, ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಪತ್ರಿಕಾಗೋಷ್ಠಿ ನಡೆಸಿ. ತೀರ್ಪು ತಡ ಆಯ್ತು. ಆದ್ರೆ ಲೋಪ ದೋಷ ನ್ಯಾಯಾಲಯ ಗಮನಕ್ಕೆ ತಂದಿದ್ದೆ. ವಿಡಿಯೋ ರೆಕಾರ್ಡಿಂಗ್ ಮಿಸ್ಸಿಂಗ್ ಕುರಿತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ಆಗಿದೆ. ಮರು ಎಣಿಕೆ ಕೇಳಿದ್ರು ಅನುಮತಿ ನೀಡದೆ ಫಲಿತಾಂಶ ಪ್ರಕಟಣೆ ಮಾಡಿದ್ರು. ಡೆಮೋಕ್ರಸಿ ನ ಮರ್ಡರ್ ಮಾಡಲು ಹೋಗಿದ್ದಾರೆ. ಕಚಡಾ ಕೆಲಸ ಮಾಡಿದವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಆಗಬೇಕು. ಇಂತಹವರನ್ನು ಜೈಲಿಗೆ ಕಳುಹಿಸಬೇಕು ಎಂದರು.
ನಾಲ್ಕು ವಾರದಲ್ಲಿ ಎಣಿಕೆ ಆದ್ರೆ ನಾನು ಗೆಲ್ಲುತ್ತೇನೆ. 17(c) ಫಾರಂ ನಲ್ಲಿ 113 ಕಡೆಗಳಲ್ಲಿ ನಮ್ಮವರ ಸಹಿ ಇರಲಿಲ್ಲ. ಕೆಲವು ಕಡೆ ಮೋಸ ಆಗಿದೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ವಿಡಿಯೋ ನಾಶ ಮಾಡಿದ್ದೆ ಕಳ್ಳತನ ಮಾಡೋಕೆ ಕಾರಣ. ನಾವು 300 ಮತಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ವಿಡಿಯೋ ಹಾರ್ಡ್ ಡಿಸ್ಕ್ ಕಾಣೆ ಆಗಿದ್ದೆ ಅನುಮಾನಕ್ಕೆ ಕಾರಣ. ಸುಪ್ರೀಂ ಕೋರ್ಟ್ ಗೆ ಹೋದ್ರು ಇದು ತಡ ಆಗೋದಿಲ್ಲ. ಫಲಿತಾಂಶ ಪ್ರಕಟ ಮಾಡಿದ್ದೆ 5 ಗಂಟೆಗೆ ಅಷ್ಟೊತ್ತಿಗೆ ಕಾಂಗ್ರೆಸ್ ಸರ್ಕಾರ 130 ಸೀಟ್ ಬಂದಿತ್ತು.
ಕಾಂಗ್ರೆಸ್ ನಾಯಕರಿಂದ ಸೂಚನೆ ಬಂದಿರೋದ್ರಿಂದ ಅವತ್ತು ಪ್ರಕಟ ಮಾಡುತ್ತಾರೆ. ಸ್ಟ್ರಾಂಗ್ ರೂಮ್ ನಲ್ಲಿ ವಿಡಿಯೋ ಮಿಸ್ಸಿಂಗ್ ಆಗಿದೆ. 108 ಮತಗಳಿಂದ ಗೆದ್ದಿದ್ದೇನೆ ಅಂತ ನನಗೆ ಅವತ್ತು ಹೇಳಿದ್ರು. 300 ಮತಗಳಿಂದ ಗೆಲ್ಲುತ್ತೇನೆ ಎಂದು ನನಗೆ ಅಧಿಕಾರಿಗಳು ಹೇಳಿದ್ದಾರೆ. ಮತಗಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ ಹೇಳ್ತಾರೆ. ಈಗ ಮಾಲೂರು ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ. ನಂಜೇಗೌಡ ನಾಲ್ಕು ವಾರ ಮಾತ್ರ ಶಾಸಕರು,ಆಮೇಲೆ ಅವರು ಮಾಜಿ ಶಾಸಕರು ಎಂದರು.
ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಸಂಸದ ಸುಧಾಕರ್ ಹೇಳಿಕೆ ನೀಡಿ, ಮಾಲೂರು ಶಾಸಕ ನಂಜೆ ಗೌಡ ಶಾಸಕತ್ವ ವಿಚಾರವಾಗಿ ಹೈಕೋರ್ಟ್ ತೀರ್ಪು ಸ್ವಾಗತ, ಆಗಿನ ಚುನಾವಣೆ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ. ಕಾಂಗ್ರೆಸ್ ಪಕ್ಷ ಮತಗಳ್ಳತನದ ಪಿತಾಮಹ ಎಂದು ಗೊತ್ತಾಗಿದೆ. ವಾಮಮಾರ್ಗದಿಂದ ಚುನಾವಣೆ ಗೆಲ್ಲುವುದರಲ್ಲಿ ಕಾಂಗ್ರೆಸ್ ನವರು ಮೊದಲಿನಿಂದಲೂ ನಿಸ್ಸೀಮರು. ಇದೇ ರೀತಿ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನವಿದೆ. ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.