ಭೂಮಿ ಹಿಂಪಡೆದ ರಾಜ್ಯ ಸರ್ಕಾರ, ಕೇಂದ್ರಕ್ಕೆ ಧನ್ಯವಾದ ಹೇಳಿದ ಯತ್ನಾಳ್!

By Suvarna NewsFirst Published May 27, 2021, 10:23 PM IST
Highlights

* ಜಿಂದಾಲ್  ಕಂಪನಿಗೆ ಭೂಮಿ ನೀಡಿಕೆ ಪ್ರಕರಣ
* ಭೂಮಿ ನೀಡಿಕೆ ಹಿಂದಕ್ಕೆ ಪಡೆಯುವುದಾಗಿ ರಾಜ್ಯ ಸರ್ಕಾರ ಘೋಷಣೆ
* ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕಿದೆ ಎಂದ ಯತ್ನಾಳ್

ಬೆಂಗಳೂರು(ಮೇ.27): ಬಳ್ಳಾರಿಯ ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ವಿವಾದ ವಿಚಾರವಾಗಿ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಂಡು ನೀಡಿದ್ದ ಹಿಂಪಡೆಯುವುದಾಗಿ ಸಿಎಂ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದರು.

ಈ ವಿಚಾರದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಯತ್ನಾಳ್ ಹೇಳಿರುವ ವಿಚಾರ ಯಥಾವತ್ ನಿಮ್ಮ ಮುಂದೆ ಇಡುತ್ತಿದ್ದೇವೆ.

ನಮ್ಮ ರಾಜ್ಯದ ನೆಲ ಜಲ ಮತ್ತು ನೈಸರ್ಗಿಕ ಸಂಪತ್ತು ಉಳಿಸಲು ನಾವು ಇತ್ತೀಚೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡ ಸುಮಾರು 3660 ಎಕರೆ ಖನಿಜ ಸಂಪತ್ತು ಹೊಂದಿದ ಪ್ರತಿ ಎಕರೆಗೆ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಕೇವಲ ಎಕರೆಗೆ ಒಂದು ಲಕ್ಷ ಇಪ್ಪತ್ತೈದು ಸಾವಿರ ರೂಪಾಯಿಗೆ ಜಿಂದಾಲ್ ಕಂಪನಿಗೆ ಮಾರಾಟ ಮಾಡುವ ರಾಜ್ಯ ಸರ್ಕಾರದ ಕ್ಯಾಬಿನೆಟ್ ನಿರ್ಣಯವನ್ನು ವಿರುದ್ಧ ನಾವು ನಮ್ಮ ರಾಷ್ಟ್ರದ ಪ್ರಧಾನಿ  ನರೇಂದ್ರ ಮೋದಿ ನಮ್ಮ ಕೇಂದ್ರ ಗೃಹ ಸಚಿವರಾದ  ಅಮಿತ್  ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ  ಜೆ. ಪಿ. ನಡ್ಡಾ ಅವರಿಗೆ ಪತ್ರ ಮುಖೇನ ಯಡಿಯೂರಪ್ಪನವರು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ಪತ್ರ ಬರೆದಿದ್ದೆವು.

ಜಿಂದಾಲ್ ಗೆ ನೀಡಿದ್ದ ಭೂಮಿ ವಾಪಸ್ ಪಡೆದ ಸರ್ಕಾರ

ನಮ್ಮ ಪಕ್ಷದ ಹೈಕಮಾಂಡ್ ನೀಡಿದ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಸ್ಟೀಲ್ ಕಂಪನಿಗೆ ನೀಡಿದ್ದ ಬಹುಮೂಲ್ಯ ನಮ್ಮ ನಾಡಿನ ಭೂಮಿಯ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಹೋರಾಟಕ್ಕೆ ಸ್ಪಂದಿಸಿ  ಪ್ರಧಾನ ಮಂತ್ರಿ  ನರೇಂದ್ರ ಮೋದಿ  ಅವರು ಹಾಗೂ ಎಲ್ಲಾ ಪಕ್ಷದ ನಾಯಕರಿಗೆ ನಮ್ಮ ಹೋರಾಟಕ್ಕೆ ಬೆಂಬಲಿಸಿದ ಎಲ್ಲಾ ನಾಡಿನ ಮಹಾಜನತೆಗೆ ಹಾಗೂ ನಮ್ಮ ನಾಡಿನ ಮೌಲ್ಯಾಧಾರಿತ ಮಾಧ್ಯಮದವರಿಗೆ ಹ್ರದಯ ಪೂರ್ವಕ ಕೃತಜ್ಞತೆಗಳು.. ರಾಜ್ಯ ಸರ್ಕಾರ ಸಂಪುಟ ಸಭೆ ನಿರ್ಧಾರ ತಿಳಿಸುತ್ತಿದ್ದಂತೆ ಯತ್ನಾಳ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

 

 

click me!