ಬೆಳಗಾವಿ ಮತ್ತು ಹುಬ್ಬಳ್ಳಿ ಮಂದಿಗೆ ಸಿಹಿಸುದ್ದಿ, ಕರ್ನಾಟಕ ಸರ್ಕಾರದಿಂದ ಮಹತ್ವದ ಕೆಲಸ

Published : Sep 29, 2026, 09:40 PM IST
Global Technology Centres in Belagavi, Hubballi

ಸಾರಾಂಶ

Global Technology Centres: ರಾಜ್ಯದ ತಂತ್ರಜ್ಞಾನ ವಲಯವನ್ನು ಬೆಂಗಳೂರಿನಿಂದ ಆಚೆಗೆ ವಿಸ್ತರಿಸುವ ಉದ್ದೇಶದಿಂದ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಉತ್ತರ ಕರ್ನಾಟಕದ ಯುವಕರಿಗೆ ಮತ್ತು ನವೋದ್ಯಮಗಳಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಬೆಂಗಳೂರು: ಬೆಳಗಾವಿ ಮತ್ತು ಹುಬ್ಬಳಿ ಭಾಗದ ಜನರಿಗೆ ಕರ್ನಾಟಕ ಸರ್ಕಾರ ಶುಭ ಸುದ್ದಿ ನೀಡಿದೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು (Global Technology Centres) ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ರಾಜ್ಯ ಗೃಹ, ಐಟಿ/ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ರಾಜ್ಯದ ತಂತ್ರಜ್ಞಾನ ವಲಯವನ್ನು ಬೆಂಗಳೂರಿನಿಂದ ಆಚೆಗೆ ಕೊಂಡೊಯ್ಯುವ ಉದ್ದೇಶ ಇದಾಗಿದೆ.

ಸಚಿವರು ಏನಂದ್ರು?

ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿರಬಾರದು. ರಾಜ್ಯದ ವಿವಿಧ ಭಾಗಗಳಲ್ಲಿನ ಪ್ರತಿಭೆ ಮತ್ತು ಉದ್ಯಮಶೀಲತೆ ಪೋಷಿಸುವ ಅವಶ್ಯಕತೆಯಿದೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ ಆಗಲಿದೆ. ಇದರಿಂದ ಉತ್ತರ ಕರ್ನಾಟಕದ ಯುವಕರು, ನವೋದ್ಯಮಗಳು ಮತ್ತು ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಹೊಸ ಅವಕಾಶ ಸೃಷ್ಟಿಸಿ ಕೊಟ್ಟಂತಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಟೆಕ್ನಾಲಾಜಿ ಬೇಸ್ಡ್‌ ಡೆವಲಪ್‌ಮೆಂಟ್ ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ. 2025-26ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್ (ಕಿಯೋನಿಕ್ಸ್) ಮೂಲಕ.. ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳೊಂದಿಗೆ ಹೊಸ ತಂತ್ರಜ್ಞಾನ ಕೇಂದ್ರ ಸ್ಥಾಪಿಸೋದಾಗಿ ಘೋಷಿಸಲಾಗಿತ್ತು.

ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಸುಮಾರು 10,000 ಚದರ ಅಡಿ ವಿಸ್ತೀರ್ಣದಲ್ಲಿGlobal Technology Centre ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಲಾಗಿದೆ.

ಮೂರು ವರ್ಷಗಳ ಅವಧಿಗೆ ಒಟ್ಟು 82.80 ಲಕ್ಷ ರೂ. ವೆಚ್ಚದಲ್ಲಿ Global Technology Centres ನಿರ್ಮಾಣ ಆಗಲಿದೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಹುಬ್ಬಳ್ಳಿ ಐಟಿ ಪಾರ್ಕ್‌ನಲ್ಲಿ ಸುಮಾರು 10,000 ಚದರ ಅಡಿ ವಿಸ್ತೀರ್ಣದಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 5.80 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ. ಬಂಡವಾಳ ವೆಚ್ಚಕ್ಕಾಗಿ 4.90 ಕೋಟಿ ರೂ.ಗಳು ಮತ್ತು ಕಾರ್ಯಾಚರಣೆಯ ವೆಚ್ಚಕ್ಕಾಗಿ 0.90 ಕೋಟಿ ರೂ.ಗಳು ಸೇರಿವೆ. ಹುಬ್ಬಳ್ಳಿ ಕೇಂದ್ರಕ್ಕೆ ಕೆಡಿಇಎಂ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಈ ಎರಡು ಕೇಂದ್ರಗಳಿಗೆ ವೆಚ್ಚವನ್ನು LEAPನ Incubators & Accelerators ಅಡಿಯಲ್ಲಿ ಭರಿಸಲಾಗುವುದು. ಇದು ರಾಜ್ಯಾದ್ಯಂತ ನವೋದ್ಯಮ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಉದ್ದೇಶಗಳು

  • ಸ್ಥಳೀಯ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವುದು
  • ತಂತ್ರಜ್ಞಾನ ಉದ್ಯಮಗಳಿಗೆ ಸೌಲಭ್ಯ ಒದಗಿಸುವುದು
  • ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು
  • ಬೆಳಗಾವಿ ಮತ್ತು ಹುಬ್ಬಳ್ಳಿ ಹೊಸ ವೇದಿಕೆ ಆಗಿ ಕೆಲಸ

ಬೆಂಗಳೂರು ಟೆಕ್ ಶೃಂಗಸಭೆ ತಂಡದೊಂದಿಗೆ ಸಚಿವರು ಶತತ ಮೂರು ದಿನಗಳ ಕಾಲ ಪೂರ್ವಸಿದ್ಧತಾ ಸಭೆ ನಡೆಸಿದರು. ಈ ಶೃಂಗಸಭೆಯು ನವೆಂಬರ್ 17 ರಿಂದ 19 ರವರೆಗೆ ಬೆಂಗಳೂರಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.

PREV
Read more Articles on
click me!

Recommended Stories

'ರೇಣುಕಾಸ್ವಾಮಿ ಸತ್ತಿದ್ದಾನೆ ಅಂದಾಗ ನಾನು ಕೂಡ ಶೂಟ್ ಮಾಡಿಕೊಳ್ಳುತ್ತೇನೆ ಅಂದಿದ್ರು ದರ್ಶನ್': ಕೋರ್ಟ್‌ಗೆ ಮಾಫಿ ಸಾಕ್ಷಿ ಪ್ರದೋಷ್‌ ಹೇಳಿದ ಸ್ಫೋಟಕ ಸತ್ಯಗಳು
ಆಟೋದಲ್ಲಿ ರಜನಿಕಾಂತ್ ಎಂಟ್ರಿ, ಕರ್ನಾಟಕದ ಪ್ರಸಿದ್ಧ ದೇಗುಲದಲ್ಲಿ ನಡೀತಿದ್ದ ಶೂಟಿಂಗ್‌ ಸೆಟ್‌ಗೆ ಭಾರತಿ ವಿಷ್ಣುವರ್ಧನ್‌ ಭೇಟಿ