ಕೃಷ್ಣಾ ನದಿ ಪ್ರವಾಹದಿಂದ ಕಂಗೆಟ್ಟ ಮೀನುಗಾರೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವಾಹದಿಂದ ಮನೆ ಕುಸಿತವಾಗಿದ್ದನ್ನು ಕಂಡು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಗಲಕೋಟೆ[ಆ. 16] ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಲ್ಹಳ್ಳಿ ಗ್ರಾಮದ ಮಾರುತಿ ಕ್ಷತ್ರಿ(22) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ದುರ್ಗಾದೇವಿ ದೇಗುಲದ ಮುಂದಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.
ಮೊದಲೆ ಸಾಲದ ಶೂಲದಿಂದ ಮೀನುಗಾರ ನರಳುತ್ತಿದ್ದರು. ಇದಾದ ಮೇಲೆ ಮನೆಯೂ ಕೊಚ್ಚಿಹೋಗಿದ್ದು ಅವರನ್ನು ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡಿತ್ತು.
ಕರ್ನಾಟಕ ಪ್ರವಾಹ ಮಾಡಿದ ಹಾನಿ ಎಷ್ಟು? ಸಣ್ಣದೊಂದು ಲೆಕ್ಕಾಚಾರ
ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡ್ಬೇಕು. ಗ್ರಾಮ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಸ್ಥಳಿಯರು ಪ್ರತಿಭಟನೆ ಸಹ ನಡೆಸಿದರು.