ನಿಜವಾಯ್ತೆ ಬಬಲಾದಿ ಶ್ರೀಗಳ ಕಂಟಕ ಭವಿಷ್ಯವಾಣಿ?

By Web DeskFirst Published Aug 13, 2019, 9:15 AM IST
Highlights

ಕರ್ನಾಟಕದಲ್ಲಿ ಉಂಟಾದ ಪ್ರವಾಹ ಲಕ್ಷಾಂತರ ಜನರನ್ನು ತತ್ತರಿಸುವಂತೆ ಮಾಡಿದೆ. ನೆರೆಯಿಂದ ಮನೆ ಮಠ ಕಳೆದುಕೊಂಡು ಜನತೆ ನಿರಾಶ್ರಿತರಾಗಿದ್ದಾರೆ.  ಇದೀಗ ಕೆಲ ತಿಂಗಳ ಹಿಂದೆ ನುಡಿದ ಭವಿಷ್ಯವಾಣಿಯೊಂದು ನಿಜವಾದಂತಾಗಿದೆ. 

ಜಯಪುರ [ಆ.13]:  ರಾಜ್ಯದಲ್ಲಿ ಇದೀಗ ಉಂಟಾಗಿರುವ ಜಲಪ್ರಳಯದ ಕುರಿತು ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಮಠದ ಸಿದ್ಧರಾಮ ಶ್ರೀಗಳು ನಾಲ್ಕು ತಿಂಗಳ ಹಿಂದೆಯೇ ಭವಿಷ್ಯವಾಣಿ ನುಡಿದಿದ್ದರು, ಶ್ರೀಗಳ ಹೇಳಿಕೆ ನಿಜವಾಗಿದೆ ಎಂದು ಭಕ್ತರು ಹೇಳುತ್ತಿದ್ದಾರೆ. 

ಅಂದು ಶ್ರೀಗಳು ನುಡಿದಿದ್ದ ಭವಿಷ್ಯವಾಣಿಯ ವಿಡಿಯೋ ಈಗ ವೈರಲ್‌ ಆಗಿದೆ. ಮಾಚ್‌ರ್‍ ತಿಂಗಳಲ್ಲಿ ನಡೆದ ಬಬಲಾದಿ ಮಠದ ಜಾತ್ರಾ ಮಹೋತ್ಸವದ ವೇಳೆ ಸಿದ್ಧರಾಮ ಶ್ರೀಗಳು, ‘ಮನಿ(ಮನೆ) ಪ್ರಳಯ, ಜಲ ಪ್ರಳಯ, ಅನೇಕ ಪಾಪಕೃತ್ಯ ನಡೀತಾವು. ಮಹಾರಾಷ್ಟ್ರ ಸೇತುವೆಯಿಂದ ನಮ್ಮ ರಾಜ್ಯ ಹಾಳಾಗುವುದು. ನಮ್ಮ ದೇಶಕ್ಕೆ ಯುದ್ಧದ ಭಯವೂ ಇದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂಗಾರಿ ಮಳೆ ಎಂಟಾಣಿ, ಹಿಂಗಾರಿ ಮಳೆ ಏಳಾಣಿ, ಯಾವತ್ತಿಗೂ ಇದು ಸಂಶಯವಲ್ಲ. ಇದು ಬಬಲಾದಿ ಮಠದ ಕಾಲಜ್ಞಾನ’ ಎಂದು ಭವಿಷ್ಯ ನುಡಿದಿದ್ದರು. ಪ್ರತಿವರ್ಷ ನಡೆಯುವ ಮಠದ ಜಾತ್ರೆ ವೇಳೆ ಶ್ರೀಗಳು ಮಳೆ, ಬೆಳೆ ಕುರಿತು ಶ್ರೀಗಳು ಹಿಂದಿನಿಂದಲೂ ಭವಿಷ್ಯವಾಣಿ ನುಡಿಯುತ್ತಾರೆ. ಶ್ರೀಗಳು ತಮ್ಮ ತ್ರಿಕಾಲ ಜ್ಞಾನದಿಂದ ಹೇಳಿಕೆ ನೀಡುತ್ತಾರೆಂಬುದು ಭಕ್ತರ ನಂಬಿಕೆ.

click me!