ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಸಾಸಲು ಸತೀಶ್ ಅವರಿಗೆ ಶಿರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಮಧುಗಿರಿ ತಾಲೂಕು ಕಾಡುಗೊಲ್ಲ ಸಮುದಾಯದ ಮುಖಂಡ ಈರಣ್ಣ ಮನವಿ ಮಾಡಿದರು.
ಮಧುಗಿರಿ : ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಸಾಸಲು ಸತೀಶ್ ಅವರಿಗೆ ಶಿರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಮಧುಗಿರಿ ತಾಲೂಕು ಕಾಡುಗೊಲ್ಲ ಸಮುದಾಯದ ಮುಖಂಡ ಈರಣ್ಣ ಮನವಿ ಮಾಡಿದರು.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿ 41 ಸಾವಿಕ್ಕೂ ಅಧಿಕ ಕಾಡುಗೊಲ್ಲ ಸಮುದಾಯದ ಮತದಾರರಿದ್ದು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಸಾಸಲು ಸತೀಶ್‌ರವರಿಗೆ ಟಿಕೆಟ್ ನೀಡುವಂತೆ ಒತ್ತಾಯಯಿಸಿದರು.
undefined
ತುಮಕೂರು ಜಿಲ್ಲೆಯಲ್ಲಿ ಪ್ರತಿ ಚುನಾವಣೆಯಲ್ಲಿ ನಮ್ಮ ಜನಾಂಗವು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಅತ್ಯಂತ ಹಿಂದುಳಿದಿರುವ ನಮ್ಮನ್ನು ಯಾವುದೇ ರಾಜಕೀಯ ಪಕ್ಷಗಳು ಸಹ ಸರಿಯಾಗಿ ಗುರುತಿಸುತ್ತಿಲ್ಲ, ನಮ್ಮನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬೆಳಸದಿರುವುದು ವಿಷಾದದ ಸಂಗತಿ ಎಂದರು.
ಈಗಾಗಲೇ ನಮ್ಮ ಜನಾಂಗದ ಸಾಸಲು ಸತೀಶ್‌ರವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತವು ತೊಡಗಿಸಿಕೊಂಡು ಈ ಸಲ ಶಿರಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಬೇಕು. ಒಂದು ವೇಳೆ ನೀಡದಿದ್ದರೆ ನಮ್ಮ ಜನಾಂಗದ ಒಗ್ಗೂಡಿ ಯಾವ ಪಕ್ಷಕ್ಕೆ ಮತ ಹಾಕಬೇಕೆಂದು ಎಲ್ಲರೂ ಅಂತಿಮ ತೀಮಾÜರ್‍ನ ಕೈಗೊಳ್ಳಲಾಗುವುದು. ಕೇವಲ ನಮ್ಮನ್ನು ಓಟ್ ಬ್ಯಾಂಕ್‌ಆಗಿ ಸೀಮಿತಪಡಿಸಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಈರಣ್ಣ ಎಚ್ಚರಿಕೆ ನೀಡಿದರು.
ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತ ಗಮನ ಹರಿಸುವ ನಿಟ್ಟಿನಲ್ಲಿ ಕಾಡುಗೊಲ್ಲ ಜನನಾಂಗಕ್ಕೆ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ಸೋಲಿಸಲು ಜೆಡಿಎಸ್ ರಣತಂತ್ರ
ರಾಯಚೂರು (ಫೆ.18): ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರವೂ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ವಿಭಿನ್ನವಾದ ಕ್ಷೇತ್ರವಾಗಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಈ ಸಲ ಶ್ರೀಕೋನ ಸ್ಪರ್ಧೆ ಮೇಲ್ನೋಟಕ್ಕೆ ಕಂಡು ಬಂದರೂ ಸಹ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಬಿಜೆಪಿಗೆ ಬಹುತೇಕ ಶಾಸಕ ಕೆ.ಶಿವನಗೌಡ ನಾಯಕರೇ ಅಭ್ಯರ್ಥಿ ಆಗಲಿದ್ದು, ಜೆಡಿಎಸ್ ಈಗಾಗಲೇ ತನ್ನ ಅಧಿಕೃತ ಅಭ್ಯರ್ಥಿ ಕೆ. ಕರೆಮ್ಮ ಜಿ. ನಾಯಕ ಹೆಸರನ್ನ ಘೋಷಣೆ ಮಾಡಿದೆ. ಕಾಂಗ್ರೆಸ್‌ನಲ್ಲಿ ಇನ್ನೂ ಅಭ್ಯರ್ಥಿಯ ಘೋಷಣೆ ಆಗಿಲ್ಲ. ಆದ್ರೂ ಸಹ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದರೂ, ಅವರಿಗಿಂತ ಬಿ.ವಿ.ನಾಯಕ ಅವರ ತಮ್ಮ ನ ಹೆಂಡತಿ ಶ್ರೀದೇವಿ ಆರ್.ರಾಜಶೇಖರ ನಾಯಕರೇ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇಡೀ ಕ್ಷೇತ್ರದ ವಿವಿಧೆಡೆ ಬೃಹತ್ ಬ್ಯಾನರ್, ಕಟೌಟ್ ರಾರಾಜಿಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಈ ಗೊಂದಲದ ನಡುವೆಯೇ ಶ್ರೀದೇವಿ ನಾಯಕ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಾ ಮತಬೇಟೆ ಶುರು ಮಾಡಿದ್ದಾರೆ.
ದೇವದುರ್ಗ ವಿಧಾನಸಭಾ ಕ್ಷೇತ್ರದ ಪರಿಚಯ:
ದೇವದುರ್ಗ ವಿಧಾನಸಭಾ ಕ್ಷೇತ್ರವೂ ಎಸ್ ಟಿ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ಮತದಾರರು 2,27,826 ಜನರು ಇದ್ದು, ಅದರಲ್ಲಿ 1,15,696 ಮಹಿಳಾ ಮತದಾರರು ಇದ್ರೆ, 1, 12, 101 ಪುರುಷ ಮತದಾರರು ಇದ್ದಾರೆ, ಇನ್ನುಳಿದ 26 ಇತರೆ ಮತದಾರರು ಇದ್ದು, ಈ ಕ್ಷೇತ್ರವೂ ಮೊದಲಿನಿಂದ ಕಾಂಗ್ರೆಸ್ ನ ಭದ್ರಕೋಟೆ ಆಗಿತ್ತು. ಆದ್ರೆ ಬದಲಾದ ರಾಜಕೀಯ ಬೆಳವಣಿಗೆಯಿಂದ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಇಡೀ ಏಷ್ಯಾದಲ್ಲಿ ಅತೀ ಹಿಂದುಳಿದ ತಾಲೂಕಾ ಎಂಬ ಹಣೆಪಟ್ಟಿ ಹೊತ್ತಿರುವ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಡತನ, ಅನಕ್ಷರತೆ, ಅಪೌಷ್ಟಿಕತೆ, ಬಾಲ ಕಾರ್ಮಿಕ ಪದ್ಧತಿ, ಗೂಳೆ ಹೋಗುವುದು ಕಾಮಾನ್ ಸಮಸ್ಯೆ ಆಗಿದೆ.
ಇದರ ಮಧ್ಯೆ ಕಳೆದ 10-15 ವರ್ಷಗಳಿಂದ ಕಾಲುವೆ ನೀರು ಬಂದಾಗಿನಿಂದ ನೀರಾವರಿ ಹೆಚ್ಚಾಗಿ ರೈತರ ಬದುಕು ಹಸನಾಗಿದೆ. ಆದ್ರೆ ದೇವದುರ್ಗ ಕ್ಷೇತ್ರದಲ್ಲಿ ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುವುದರಿಂದ ರೈತರು ದುಡಿದ ಹಣವನ್ನ ದುಷ್ಟ ಚಟಗಳಿಗೆ ಹಾಕಿ ದಿವಾಳಿ ಆಗುತ್ತಿದ್ದಾರೆ. ಇದರ ಮಧ್ಯೆ ಈಗ ಚುನಾವಣೆ ಬಂದಿದ್ದು ಜನ ನಾಯಕರ ಹಿಂದೆ ಜೈ ಎನ್ನುತ್ತಾ ಕಾರ್ಯಕರ್ತರು ಓಡಾಟ ಶುರು ಮಾಡಿದ್ದಾರೆ.