ಜೆಡಿಎಸ್‌ ಅಧಿಕಾರಕ್ಕೆ ತರಲು ಭೀಮಣ್ಣ ಪಾದಯಾತ್ರೆ

By Kannadaprabha News  |  First Published Feb 20, 2023, 5:03 AM IST

ಬಡವ ಹಾಗೂ ರೈತಪರ ಪ್ರಗತಿಗೆ ರಾಜ್ಯ ಹಾಗೂ ತಾಲೂಕಿನಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಾಗೃತಿ ಹಾಗೂ ಸಂಕಲ್ಪ ಪ್ರವಾಸ ಪಾದಯಾತ್ರೆ ತಾಲೂಕಿನಾದ್ಯಂತ ಹಮ್ಮಿಕೊಂಡಿರುವುದಾಗಿ ತಾಲೂಕು ಜೆಡಿಎಸ್‌ ಕಾರ್ಯಕರ್ತ ಗುಜ್ಜನಡು ಆರ್‌.ಭೀಮಯ್ಯ ಹೇಳಿದರು.


 ಪಾವಗಡ: ಬಡವ ಹಾಗೂ ರೈತಪರ ಪ್ರಗತಿಗೆ ರಾಜ್ಯ ಹಾಗೂ ತಾಲೂಕಿನಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಾಗೃತಿ ಹಾಗೂ ಸಂಕಲ್ಪ ಪ್ರವಾಸ ಪಾದಯಾತ್ರೆ ತಾಲೂಕಿನಾದ್ಯಂತ ಹಮ್ಮಿಕೊಂಡಿರುವುದಾಗಿ ತಾಲೂಕು ಜೆಡಿಎಸ್‌ ಕಾರ್ಯಕರ್ತ ಗುಜ್ಜನಡು ಆರ್‌.ಭೀಮಯ್ಯ ಹೇಳಿದರು.

ಗುಜ್ಜನಡು ಗ್ರಾಮದ ಆರ್‌.ಭೀಮಯ್ಯ ಕಳೆದ ನಾಲೈದು ದಿನಗಳಿಂದ ತಾಲೂಕಿನಾದ್ಯಂತ ಏಕಾಂಗಿ ಪಾದಯಾತ್ರೆ ಹಮ್ಮಿಕೊಂಡಿದ್ದು ಶನಿವಾರ ತಾಲೂಕಿನ ಓಬಳಾಪುರ ಹಾಗೂ ಬೆಳ್ಳಿಬಟ್ಟಲು ರಸ್ತೆ ಮಾರ್ಗವಾಗಿ ತೆರಳುತ್ತಿರುವ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

Tap to resize

Latest Videos

ಮನೆಮನೆಗೆ ತೆರಳಿ ಜೆಡಿಎಸ್‌ ಅಧಿಕಾರಕ್ಕೆ ತರುವಂತೆ ಮನವಿ ಮಾಡಲಾಗುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವಧಿಯಲ್ಲಿ ಆನೇಕ ಜನಪರ ಯೋಜನೆ ಜಾರಿಯಾಗಿವೆ. ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಜನಪರ ಹಾಗೂ ತಾಲೂಕಿನ ಪ್ರಗತಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಜನತೆಗೆ ಸ್ಪಂದಿಸಿ ಕೆಲಸ ಮಾಡುವ ಗುಣ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ ಕುಮಾರಸ್ವಾಮಿ ಕೈಬಲಪಡಿಸಬೇಕಿದೆ ಎಂದರು.

click me!