ಪಾಕ್ ಪರ ಘೋಷಣೆ: ಬೆಳಗಾವಿಯಲ್ಲಿ ಮತ್ತೊಂದು ವಿಡಿಯೋ ವೈರಲ್‌ , ಖಾಕಿಗೆ ತಲೆನೋವು!

By Kannadaprabha News  |  First Published May 15, 2023, 10:26 PM IST

ನಗರದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎನ್ನಲಾದ ಪ್ರಕರಣ ಇದೀಗ ಖಾಕಿ ಪಡೆಗೆ ತಲೆ ನೋವಾಗಿ ಪರಿಗಣಿಸಿದೆ. ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಯ ಹೆಸರು ಕೂಗಲಾಗಿದೆ ಎನ್ನಲಾಗುತ್ತಿದೆ. ಈ ಎರಡು ವಿಭಿನ್ನ ರೀತಿಯ ವಿಡಿಯೋ ವೈರಲ್‌ ಆಗಿರುವುದು ಪೊಲೀಸರಿಗೆ ಸದ್ಯ ತಲೆ ಬಿಸಿ ಮಾಡಿದೆ.


ಬೆಳಗಾವಿ (ಮೇ.15) : ನಗರದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎನ್ನಲಾದ ಪ್ರಕರಣ ಖಾಕಿ ಪಡೆಗೆ ತಲೆ ನೋವಾಗಿ ಪರಿಗಣಿಸಿದೆ. ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಯ ಹೆಸರು ಕೂಗಲಾಗಿದೆ ಎನ್ನಲಾಗುತ್ತಿದೆ. ಈ ಎರಡು ವಿಭಿನ್ನ ರೀತಿಯ ವಿಡಿಯೋ ವೈರಲ್‌ ಆಗಿರುವುದು ಪೊಲೀಸರಿಗೆ ಸದ್ಯ ತಲೆ ಬಿಸಿ ಮಾಡಿದೆ.

ಮೇ.13 ರಂದು ನಗರದ ಆರ್‌ಪಿಡಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಸೀಪ್‌ (ರಾಜು) ಸೇಠ್‌(Asif raja shet) ಗೆಲವು ಸಾಧಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಆರ್‌ಪಿಡಿ ಕ್ರಾಸ್‌ನಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡಲು ಬೆಂಬಲಿಗರು ಜಮಾಯಿಸಿದ್ದರು. ಈ ವೇಳೆ ನಗರದ ಆರ್‌ಪಿಡಿ ಕ್ರಾಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ವಿಡಿಯೋ ವೈರಲ್‌ ಆಗಿತ್ತು. ಇದರಿಂದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಅದೇ ದಿನ ರಾತ್ರಿ ಹಿಂದೂಪರ ಸಂಘಟನೆ ಕಾರ್ಯಕರ್ತರು ನಗರದ ಟಿಳಕವಾಡಿ ಪೊಲೀಸ್‌ ಠಾಣೆ ಎದುರು ಜಮಾಯಿಸಿ ದೇಶ ವಿರೋಧಿ ಹೇಳಿಕೆ ಕೂಗಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದಲ್ಲದೇ, ಹನುಮಾನ ಚಾಲಿಸಾ ಹಾಗೂ ಮಂತ್ರಗಳನ್ನು ಪಠಣ ಮಾಡಿದ್ದರು.

Tap to resize

Latest Videos

Viral video: ಪಾಕ್‌ ಪರ ಘೋಷಣೆ: ಐದಕ್ಕೂ ಹೆಚ್ಚು ಜನರ ವಿರುದ್ಧ ಕೇಸು

ಅಲ್ಲದೇ ಪಾಕಿಸ್ತಾನ ಪರ ಘೋಷಣೆ ಕೂಗಿದ ಐದಕ್ಕೂ ಹೆಚ್ಚು ಜನರ ವಿರುದ್ಧ ಟಿಳಕವಾಡಿ ಪೊಲೀಸರು (Talakavadi police station)ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಬೆನ್ನೆಲ್ಲೆ ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಆಸೀಪ್‌ ಸೇಠ್‌ ಜಿಂದಾಬಾದ ಎಂದು ಘೋಷಣೆ ಕೂಗಲಾಗಿದೆ ಎನ್ನಲಾದ ವಿಡಿಯೋ ಇದೀಗ ವೈರಲ್‌ ಆಗಿದೆ. ಇದರಿಂದಾಗಿ ಈ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರಿಗೆ ಯಾವ ವಿಡಿಯೋ ನೈಜವಾಗಿದೆ ಎಂಬುವುದನ್ನು ಪತ್ತೆ ಹಚ್ಚುವುದು ತಲೆ ನೋವಾಗಿದೆ. ಅಲ್ಲದೇ ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು ಏಕಕಾಲಕ್ಕೆ ಘೋಷಣೆ ಕೂಗಿದ್ದರಿಂದ ಯಾರು ಯಾವ ಘೋಷಣೆ ಕೂಗಿದ್ದಾರೆ ಎಂಬುವುದನ್ನು ಅರಿತುಕೊಳ್ಳಲು ಸ್ಥಳದಲ್ಲಿದ್ದ ಪೊಲೀಸರಿಗೂ ಸಾಧ್ಯವಾಗಿಲ್ಲ.

 

Karnataka Election Result 2023 ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!

ಆದ್ದರಿಂದ ಸದ್ಯ ನಗರ ಹಾಗೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪಾಕಪರ ಘೋಷಣೆ ಕೂಗಲಾಗಿದೆ ಎನ್ನಲಾದ ವಿಡಿಯೋ ನೈಜತೆ ಬಗ್ಗೆ ತಾಂತ್ರಿಕ ಘಟಕಕ್ಕೆ ಕಳುಹಿಸಿಕೊಡಲಾಗಿದ್ದು, ಈ ವರದಿ ಆಧರಿಸಿ ಮುಂದಿನ ಕ್ರಮಕ್ಕೆ ಖಾಕಿ ಪಡೆ ಮುಂದಾಗಿದೆ ಎನ್ನಲಾಗಿದೆ. ಪಾಕ್‌ ಪರ ಘೋಷಣೆ ಕೂಗಿದ ಐದಕ್ಕೂ ಹೆಚ್ಚು ಜನರ ವಿರುದ್ಧ ಟಿಳಕವಾಡಿ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

click me!