ಕಾಡಸಿದ್ದೇಶ್ವರ ಮಠ ನಮಗೊಂದು ಪುಣ್ಯ ದೈವದ ಕ್ಷೇತ್ರವಾಗಿದ್ದು, ಗಂಗಾಧರ ಅಜ್ಜ ಶಿವಯೋಗಿ ಶ್ರೀಗಳು ಪ್ರತಿ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಎಂಎಲ್‌ಎ ಟಿಕೆಟ್ ನೀಡುವುದರಿಂದ ಹಿಡಿದು, ಎಲ್ಲವೂ ಇಲ್ಲಿ ತೀರ್ಮಾನ ಮಾಡಿದ್ದೆ. ಸಂಪೂರ್ಣವಾಗಿ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತುಮಕೂರು : ಕಾಡಸಿದ್ದೇಶ್ವರ ಮಠ ನಮಗೊಂದು ಪುಣ್ಯ ದೈವದ ಕ್ಷೇತ್ರವಾಗಿದ್ದು, ಗಂಗಾಧರ ಅಜ್ಜ ಶಿವಯೋಗಿ ಶ್ರೀಗಳು ಪ್ರತಿ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಎಂಎಲ್‌ಎ ಟಿಕೆಟ್ ನೀಡುವುದರಿಂದ ಹಿಡಿದು, ಎಲ್ಲವೂ ಇಲ್ಲಿ ತೀರ್ಮಾನ ಮಾಡಿದ್ದೆ. ಸಂಪೂರ್ಣವಾಗಿ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಗೆ ಸಂಬಂಧಿಸಿದಂತೆ ಐಟಿ ರೈಡ್, ಜೈಲು ಎಲ್ಲದರ ಬಗ್ಗೆ ಹೇಳಿದ್ದೇನೆ. ತಮ್ಮ ಹೆಲಿಕಾಪ್ಟರ್ ಅವಘಡವಾದ ವೇಳೆ ನನ್ನ ಮಗಳನ್ನ ಕರೆಸಿ ಇಲ್ಲಿ ಮಾರ್ಗದರ್ಶನ ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಶಕ್ತಿ ದೊರಕಲಿ, ಒಳ್ಳೆಯದಾಗಲಿ ಎಂದು ಮಾರ್ಗದರ್ಶನ ಮಾಡಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 136 ಕಾಂಗ್ರೆಸ್ ಸೀಚ್ ಬೇಕೆಂದು ನಾನು ಕೇಳಿಕೊಂಡಿದ್ದೆ. ಆರಂಭದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡÜಬೇಕು ಎಂದಿದ್ದರು. ಹೀಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತೇವೆ. ಚೆಲುರಾಯಸ್ವಾಮಿ ಸೇರಿದಂತೆ ಈ ಸಂದರ್ಭದಲ್ಲಿ ಹಲವರು ಸಾಥ್ ನೀಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಒಂದು ಸೀಟ್ ಬಿಟ್ಟು ಎಲ್ಲಾ ಕಡೆ ಕಾಂಗ್ರೆಸ್ ಬಂದಿದೆ. ಇದು ನನ್ನ ಅಥವಾ ಡಿಕೆಶಿ ಗೆಲುವಲ್ಲ, ಮಂಡ್ಯ ಜನರ ಗೆಲುವು. ಗುರು ಇಲ್ಲದೇ ಗುರಿ ಇಲ್ಲದೆ ತಲುಪಲು ಸಾಧ್ಯವಿಲ್ಲ. ಹೀಗಾಗಿ ಗುರು ದರ್ಶನ ಕ್ಕೆ ಬಂದಿದ್ದೇನೆ. ನನ್ನ ಈ ಪೀಠದ ಸಂಪರ್ಕ 18-20 ವರ್ಷ ಹಳೆಯದು. ಕೆಲವು ಕಡೆ ನಾನು ಕೇಳದೆ 8-10 ಕ್ಷೇತ್ರಗಳಿಗೆ ನಾನೇ ಟಿಕೆಚ್ ಕೊಟ್ಟೆಅವೆಲ್ಲವೂ ಹೋದವು ಎಂದು ಶಿವಕುಮಾರ್ ತಿಳಿಸಿದರು.
ಶಾಸಕಾಂಗ ಸಭೆಯಲ್ಲಿ ಸಿಎಂ ತೀರ್ಮಾನ:
ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಗೂ ವರಿಷ್ಠರ ತೀರ್ಮಾನದಂತೆ ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆಯನ್ನು ಮಾಡಲಾಗುತ್ತದೆ. ಏನೆ ಮಾಡಿದರೂ, ಪಕ್ಷಕೋಸ್ಕರ ದುಡಿದಿದ್ದೇನೆ. ಹಗಲು ರಾತ್ರಿ ದುಡಿದಿದ್ದೇನೆ. ನಮ್ಮಲ್ಲಿ ಸಿದ್ದರಾಮಯ್ಯ ಸೇರಿದಂತೆ ಯಾರೊಂದಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನೇ ಹಲವು ಬಾರಿ ಸೋತಿದ್ದೇನೆ. ನಾನು ಮಂತ್ರಿಯಾಗಿಲ್ಲದೇ ಇದ್ದಾಗ ತಾಳ್ಮೆಯಿಂದ ಇರಲಿಲ್ಲವೇ ಎಂದು ಪ್ರಶ್ನಿಸಿದ ಡಿಕೆಶಿ, ಅವರಿಗೆ ನಾನು ಸಹಕಾರ ಕೊಟ್ಡಿದ್ದೆ ಎಂದು ಸಿದ್ದರಾಮಯ್ಯನವರ ಹೆಸರೇಳದ ಶಿವಕುಮಾರ್, ಪರೋಕ್ಷವಾಗಿ ನಾನೇ ಸಿಎಂ ಎನ್ನುವ ಆಸೆಯನ್ನು ಬಿಚ್ಚಿಟ್ಟರು.
ಸಿದ್ದರಾಮಯ್ಯ ಸಹಕಾರ ಕೊಡುವ ವಿಶ್ವಾಸವಿದೆ:
ಕೆಲವರು ನನಗೆ ಹಾಗೂ ಸಿದ್ದರಾಮಯ್ಯರ ನಡುವೆ ವ್ಯತ್ಯಾಸ ಇದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ನಮ್ಮಿಬ್ಬಿರ ನಡುವೆ ವ್ಯತ್ಯಾಸ ಇಲ್ಲ. ಹಲವು ಬಾರಿ ಪಕ್ಷದ ವಿಚಾರದಲ್ಲಿ ನಾನು ಸೋತಿದ್ದೇನೆ. ನಾನು ಸೋತು ಸಿದ್ದರಾಮಯ್ಯನವರಿಗೆ ಸಹಕಾರ ಕೊಟ್ಟಿದ್ದೇನೆ. ಅವರೂ ಸಹಕಾರ ಕೊಡುವ ವಿಶ್ವಾಸ ಇದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದ ಆರಂಭದಲ್ಲಿ ನನ್ನನ್ನು ಮಂತ್ರಿ ಮಾಡದೇ ಇದ್ದಾಗ ನಾನು ತಾಳ್ಮೆಯಿಂದ ಇರಲಿಲ್ಲವೇ ಎಂದು ಪ್ರಶ್ನಿಸಿದ ಡಿಕೆಶಿ, ಸಿದ್ದರಾಮಯ್ಯನವರಿಗೆ ನಾನು ಸಹಕಾರ ಕೊಟ್ಟಿದ್ದೇನೆ. ಅವರು ತಮಗೆ ಅವಕಾಶ ಸಹಕಾರ ಕೊಡುವ ನಂಬಿಕೆಯಿದೆ ಎಂದರು.