ಕಾರವಾರದಲ್ಲಿ ಬಿಜೆಪಿ- ಕಾಂಗ್ರೆಸ್ ಟಫ್ ಫೈಟ್, ಶತಾಯಗತಾಯ ಗೆಲ್ಲಲು ಅಭ್ಯರ್ಥಿಗಳ ಪರ ಮುಖಂಡರ ಫೀಲ್ಡ್ ವರ್ಕ್

Published : Apr 27, 2023, 10:26 PM IST
ಕಾರವಾರದಲ್ಲಿ ಬಿಜೆಪಿ- ಕಾಂಗ್ರೆಸ್ ಟಫ್ ಫೈಟ್, ಶತಾಯಗತಾಯ ಗೆಲ್ಲಲು ಅಭ್ಯರ್ಥಿಗಳ ಪರ ಮುಖಂಡರ ಫೀಲ್ಡ್ ವರ್ಕ್

ಸಾರಾಂಶ

ಉತ್ತರಕನ್ನಡ ಜಿಲ್ಲೆಯ  ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಭರ್ಜರಿ ಪ್ರಚಾರ ಫೈಟ್ ನಡೆಯುತ್ತಿದೆ. ಕಾರವಾರದಲ್ಲಂತೂ ಅಭ್ಯರ್ಥಿಗಳ‌ ಪರವಾಗಿ ಪಕ್ಷಗಳ ಮುಖಂಡರು ಪ್ರಚಾರ ನಡೆಸುತ್ತಿದ್ದು, ತಮ್ಮ ಪಕ್ಷಗಳನ್ನು ಗೆಲ್ಲಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಏ.27): ಉತ್ತರಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಭರ್ಜರಿ ಪ್ರಚಾರ ಫೈಟ್ ನಡೆಯುತ್ತಿದೆ. ಜಿಲ್ಲೆಯ ಕಾರವಾರದಲ್ಲಂತೂ ಅಭ್ಯರ್ಥಿಗಳ‌ ಪರವಾಗಿ ಪಕ್ಷಗಳ ಮುಖಂಡರು ಪ್ರಚಾರ ನಡೆಸುತ್ತಿದ್ದು, ತಮ್ಮ ಪಕ್ಷಗಳನ್ನು ಗೆಲ್ಲಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ನಿನ್ನೆ ಬಿಜೆಪಿ ಅಭ್ಯರ್ಥಿ ಪರವಾಗಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಫೀಲ್ಡಿಗಿಳಿದಿದ್ರೆ, ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಛತ್ತೀಸ್‌ಗಢದ ಶಾಸಕ ವಿಕಾಸ್ ಉಪಾಧ್ಯಾಯ ಕಳೆದ ನಾಲ್ಕೈದು ದಿನಗಳಿಂದ ಪ್ರಚಾರ ನಡೆಸುತ್ತಿದ್ದಾರೆ.  

ಉತ್ತರಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ನಿರ್ಮಾಣವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯಂತೂ ಜಿದ್ದಾಜಿದ್ದಿನ ಫೈಟ್ ಕಾಣಲಾರಂಭಿಸಿದೆ. ಜೆಡಿಎಸ್‌ನ ಚೈತ್ರಾ ಕೊಠಾರ್‌ಕರ್ ಈ ಬಾರಿ ಮೊದಲ ಬಾರಿ ಚುನಾವಣಾ ಕಣಕ್ಕಿಳಿದರೆ, 2018ರಲ್ಲಿ ಬಿಜೆಪಿಯ ರೂಪಾಲಿ ನಾಯ್ಕ್ ವಿರುದ್ದ ಸೋಲು ಕಂಡಿದ್ದ ಸತೀಶ್ ಸೈಲ್ ಈ ಬಾರಿ ಗೆಲುವು ಕಾಣುವ ಕನಸು ಹೊತ್ತಿದ್ದಾರೆ. ಬಿಜೆಪಿಯ ರೂಪಾಲಿ ನಾಯ್ಕ್ ಅಂತೂ ತನ್ನ ಕ್ಷೇತ್ರವನ್ನು ಮತ್ತೆ ಗೆಲ್ಲಲು ಶತಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರವಾಗಿ ಎರಡು ದಿನಗಳ ಕಾಲ ಗೋವಾ ರಾಜ್ಯದ ಕೇಂದ್ರ ಸಚಿವ ಶ್ರೀಪಾದ‌ ನಾಯಕ್ ಹಾಗೂ ಶಾಸಕ ಪ್ರೇಮೇಂದ್ರ ಶೇಟ್ ಪ್ರಚಾರ ನಡೆಸಿದ್ರೆ, ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಎಂಎಲ್‌ಸಿ ಗಣಪತಿ ಉಳ್ವೇಕರ್ ಫೀಲ್ಡಿಗಿಳಿದು ಮಾಜಾಳಿ, ಸದಾಶಿವಗಢ ವ್ಯಾಪ್ತಿಯಲ್ಲಿ ರೂಪಾಲಿ ನಾಯ್ಕ್ ಪರವಾಗಿ ಮತಯಾಚಿಸಿದ್ದಾರೆ.

ಜಿಲ್ಲೆಯ ಹಾಗೂ ಕ್ಷೇತ್ರದ ಧ್ವನಿಯಾಗಿರುವ ಮಹಿಳಾ ಶಾಸಕಿ ರೂಪಾಲಿ ನಾಯ್ಕ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಮತ ನೀಡಿ. ರೂಪಾಲಿ ನಾಯ್ಕ ಅವರು ಮಹಿಳಾ ಶಾಸಕಿಯಾಗಿ ಜಿಲ್ಲೆ ಹಾಗೂ ಕ್ಷೇತ್ರದ ಧ್ವನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ. ಹಿಂದೆಂದೂ ಆಗದೇ ಇರುವ ಕಾರ್ಯವನ್ನು ಅವರ ಅವಧಿಯಲ್ಲಿ ಮಾಡಿದ್ದಾರೆ. ಇಂತಹ ಜನ ನಾಯಕಿಯನ್ನು ಮತ್ತೊಮ್ಮೆ ಆಯ್ಕೆ ಮಾಡಲು ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮುಖಂಡರೀರ್ವರು ಮತಯಾಚಿಸಿದ್ದಾರೆ. 

ಇನ್ನು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರವಾಗಿ ಛತ್ತೀಸ್‌ಗಢದ ಶಾಸಕ, ಕ್ಷೇತ್ರದ ಉಸ್ತುವಾರಿ ವಿಕಾಸ್ ಉಪಾಧ್ಯಾಯ ಫೀಲ್ಡಿಗಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜತೆ ಕಾರವಾರ ಸದಾಶಿವಗಡದ ಮೇಸ್ತವಾಡ, ಜಿಂಚೆವಾಡ, ದೇವನಿಕವಾಡದಲ್ಲಿ ಮತ ಪ್ರಚಾರ ನಡೆಸಿ ಈ ಬಾರಿ ಸತೀಶ್ ಸೈಲ್ ಅವರನ್ನು ಆರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೋನಾದ ಸಮಯದಲ್ಲಿ ದೇಶದ ಜನರಿಗೆ ಕಷ್ಟದ ಸಮಯದಲ್ಲಿ ನೆರವಿಗೆ ಬಂದಿರೋದು ಕಾಂಗ್ರೆಸ್. ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶ್ ಸೈಲ್ ಅವರು ತಮ್ಮ ಶಾಸಕರ ಅವಧಿಯಲ್ಲಿ ಮಾಡಿದ ವಿವಿಧ ಅಭಿವೃದ್ಧಿ ಯೋಜನೆಗಳು ಈವರೆಗೆ ನೋಡಲು ಸಿಗುತ್ತವೆ.

ಆದರೆ, ಬಿಜೆಪಿ ಶಾಸಕರ ಕಡೆಯಿಂದ ಹೊಸದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ಶೂನ್ಯ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಇನ್ನಷ್ಟು ಬಲಪಡಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭೇಟಿ ನೀಡುತ್ತಿದ್ದು, ಈ ಮೂಲಕ ಪಕ್ಷ ಬಲವರ್ಧನೆಗೊಳ್ಳಲಿದೆ. ಜಿಲ್ಲೆಗೆ ಮೋದಿ ಭೇಟಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ‌. ಬಿಜೆಪಿ ಕೇವಲ ಭಾಷಣ ಮಾಡ್ತದೆ, ಕಾಂಗ್ರೆಸ್ ಜನರಿಗೆ ಆಹಾರ ನೀಡ್ತದೆ ಎಂದು ವಿಕಾಸ್ ಉಪಾಧ್ಯಾಯ ಹೇಳಿದರು.

ಕೊಡಗಿನಲ್ಲಿ ಚುನಾವಣೆಗೆ ಟಿಪ್ಪು ಅಸ್ತ್ರ ಬಳಸಿದ್ವಾ ರಾಜಕೀಯ ಪಕ್ಷಗಳು!

ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್,  ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯುವನಿಧಿ, ಗೃಹ ಲಕ್ಷ್ಮಿ, ಗೃಹ ಜೋತಿ ಮುಂತಾದ ಯೋಜನೆಗಳನ್ನು ಜನರಿಗೆ ನೀಡಲಾಗುವುದು. ಇದರಿಂದ ಬೆಲೆ ಏರಿಕೆಯ ಕಾರಣ ತೊಂದರೆ ಅನುಭವಿಸುತ್ತಿರುವ ರಾಜ್ಯದ ಜನರಿಗೆ ತುಂಬಾ ಅನುಕೂಲವಾಗಲಿದೆ‌. ಈ ಸಲ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.

ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಕಾಂಗ್ರೆಸ್ 5 ಗ್ಯಾರಂಟಿ ಯೋಜನೆ ಘೋಷಿಸಿದ ರಾಹುಲ್

ಒಟ್ಟಿನಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಕೋಟೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮುಂದುವರಿಸಿದರೆ, ಕಾಂಗ್ರೆಸ್ ಕಳೆದುಕೊಂಡ ಕೋಟೆಯನ್ನು ಮತ್ತೆ ವಶಪಡಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದೆ. ಪಕ್ಷಗಳು ಜನರನ್ನು ಒಲಿಸಿಕೊಳ್ಳಲು ವಿವಿಧ ಸರ್ಕಸ್ ನಡೆಸಿದರೂ, ಚುನಾವಣಾ ದಿನ ಮಾತ್ರ ಜನಸಾಮಾನ್ಯರು ಸರಕಾರವನ್ನು ಯಾರ ಕೈಗೆ ನೀಡ್ತಾರೆ ಅನ್ನೋದನ್ನು ಕಾದು ನೋಡಬೇಕಷ್ಟೇ.

PREV
Read more Articles on
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ