ಜನತಾ ಕರ್ಫ್ಯೂ ಮುಗಿಯುವವರೆಗೆ ಬಡವರಿಗೆ ಆಹಾರ

Kannadaprabha News   | Asianet News
Published : Apr 28, 2021, 11:19 AM ISTUpdated : Apr 28, 2021, 01:29 PM IST
ಜನತಾ ಕರ್ಫ್ಯೂ ಮುಗಿಯುವವರೆಗೆ ಬಡವರಿಗೆ  ಆಹಾರ

ಸಾರಾಂಶ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದು,  ಉಚಿತ ಆಹಾರವನ್ನು ವಿತರಣೆ ಮಾಡಲಾಗುತ್ತದೆ. ಟೀ ನರಸಿಪುರ ಪುರಸಭಾ ಸದಸ್ಯ ಈ ಮಾಹಿತಿ ನೀಡಿದ್ದಾರೆ. 

  ಟಿ. ನರಸೀಪುರ (ಏ.28):  ಕೋವಿಡ್‌ 19 ಮಹಾಮಾರಿ ತಾಲೂಕಿನಾದ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಪಟ್ಟಣದ ನಿರ್ಗತಿಕರು ಹಾಗೂ ಬಡವರಿಗೆ ಜನತಾ ಕರ್ಫ್ಯೂ ಮುಗಿಯುವವರೆಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುವುದು ಎಂದು ಪುರಸಭಾ ಸದಸ್ಯ ಎಸ್‌.ಕೆ. ಕಿರಣ್ ಹೇಳಿದರು.

ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಬಡವರು ಹಾಗೂ ನಿರ್ಗತಿಕರಿಗೆ ಆಹಾರದ ಪೊಟ್ಟಣ ಹಾಗೂ ಮಾಸ್ಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಮಹಾಮಾರಿ ಕೊರೋನಾ ಸೋಂಕು ಮಿತಿ ಮೀರಿದ ವೇಗದಲ್ಲಿ ಹರಡುತ್ತಿದೆ. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ಜನತಾ ಕಫä್ರ್ಯ ಜಾರಿಗೊಳಿಸಿದೆ. ಈ ಹಿನ್ನೆಲೆ ತಮ್ಮ ಹುಟ್ಟುಹಬ್ಬವನ್ನು ಮಾದರಿಯಾಗಿ ಹಾಗೂ ಸರಳವಾಗಿ ಆಚರಿಸಿಕೊಳ್ಳಲಾಗುತ್ತಿದೆ. ಪಟ್ಟಣಾದ್ಯಂತ ಇರುವ ಬಡವರು, ನಿರ್ಗತಿಕರಿಗೆ ಮಧ್ಯಾಹ್ನದ ಊಟ ಹಾಗೂ ಮಾಸ್ಕ್‌ ವಿತರಿಸಲಾಗುತ್ತಿದೆ, ಪಟ್ಟಣದಲ್ಲಿ ಯಾವುದೇ ಭಾಗದಲ್ಲಿ ನಿರ್ಗತಿಕರು ಹಾಗೂ ಬಡವರು ಕಂಡು ಬಂದರೆ ನಮ್ಮನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಕೋವಿಡ್ : ತೀವ್ರ ಆತಂಕ ಹೊರಹಾಕಿದ ಡೀಸಿ ರೋಹಿಣಿ ...

ರಕ್ತದಾನ ಶಿಬಿರ- ಮೇ 1 ರಿಂದ 18 ವರ್ಷ ಮೇಲ್ಪಟ್ಟವಯಸ್ಸಿನವರಿಗೂ ಕೊರೋನಾ ಲಸಿಕೆ ಹಾಕುವುದಾಗಿ ಸರ್ಕಾರ ಪ್ರಕಟಿಸಿದೆ. ಈ ಹಿನ್ನೆಲೆ ರಕ್ತದ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ಮೇ 1ಕ್ಕೆ ಮೊದಲು ಬಿಜೆಪಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿ ಹೆಚ್ಚಿನ ರಕ್ತ ಸಂಗ್ರಹಣೆ ಮಾಡಿ ರಕ್ತದಾನ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಒಬಿಸಿ ಅಧ್ಯಕ್ಷ ಗೂಳಿ ಮಹೇಶ್‌, ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದರಾಜು, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್‌, ಉಪಾಧ್ಯಕ್ಷ ಕೆ. ನಂಜುಂಡಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಮೋಹನ್‌, ಕಾರ್ಯದರ್ಶಿ ನಂದಕುಮಾರ್‌, ಗ್ರಾಪಂ ಸದಸ್ಯ ಮಹದೇವಸ್ವಾಮಿ ಇದ್ದರು.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ