ಮಾಜಿ ಶಿಷ್ಯನಿಗೆ ತವರಿನಲ್ಲಿಯೇ ಶಾಕ್ ...ಇದೇನು ಸಿದ್ದು ಹೊಸ ಅಖಾಡ!

Published : Sep 20, 2019, 11:31 PM ISTUpdated : Sep 20, 2019, 11:33 PM IST
ಮಾಜಿ ಶಿಷ್ಯನಿಗೆ ತವರಿನಲ್ಲಿಯೇ ಶಾಕ್ ...ಇದೇನು ಸಿದ್ದು ಹೊಸ ಅಖಾಡ!

ಸಾರಾಂಶ

ಎಂಟಿಬಿ ನಾಗರಾಜ್ ಗೆ ತವರಿನಲ್ಲಿಯೇ ಸೆಡ್ಡು ಹೊಡೆಯಲು ಕೈ ಪಡೆ/ ಹೊಸಕೋಟೆಯಲ್ಲಿ ಕಾಂಗ್ರೆಸ್  ಶಕ್ತಿ ಪ್ರದರ್ಶನ/ ಮಾಜಿ ಶಿಷ್ಯನ ವಿರುದ್ಧ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ

ಬೆಂಗಳೂರು/ಹೊಸಕೋಟೆ[ಸೆ. 20] ಶ್ರೀಮಂತ ಶಾಸಕ ಎಂಬ ಪಟ್ಟವನ್ನು ಪಡೆದುಕೊಂಡು ದೋಸ್ತಿ ಸರ್ಕಾರದಲ್ಲಿಯೂ ಸಚಿವ ಪದವಿಯನ್ನು ಸ್ವೀಕರಿಸಿದ್ದ ಹೊಸಕೋಟೆ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಗೆ ಸೆಡ್ಡು ಹೊಡೆಯಲು ಕೈ ಪಡೆ ಮುಂದಾಗಿದೆ.

ಶನಿವಾರ[ಸೆ. 21] ರಂದು  ಕಾಂಗ್ರೆಸ್ ಪಕ್ಷದ  ಸ್ವಾಭಿಮಾನಿ ಸಮಾವೇಶ ನಡೆಯಲಿದ್ದು ಇದಕ್ಕೆ ಭರದ ಸಿದ್ಧತೆ ಮಾಡಲಾಗಿದೆ. ಎಂಟಿಬಿ ನಾಗರಾಜ್ ರಾಜಿನಾಮೆ ನೀಡಿ ಅನರ್ಹರಾದ ಕಾರಣ ಉಪ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಂಟಿಬಿ ನಾಗರಾಜ್ ವಿರುದ್ದ ಪ್ರತಿಭಟನೆ ನಡೆಸುವ ಸಲುವಾಗಿಯೇ ಸಭೆ ಹಮ್ಮಿಕೊಂಡಿದೆ.

ಸಮಾವೇಶದಲ್ಲಿ ಒಂದು ಕಾಲದ ಎಂಟಿಬಿ ಗುರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರುಗಳು ಭಾಗವಹಿಸಲಿದ್ದಾರೆ. ಇದಕ್ಕಾಗಿ ಹೊಸಕೋಟೆ ಹಳೆ ಬಸ್ ನಿಲ್ದಾಣದಲ್ಲಿ  ಬೃಹತ್ ವೇದಿಕೆ ಸಿದ್ಧವಾಗುತ್ತಿದ್ದು, ಸಮಾವೇಶದಲ್ಲಿ 5 ರಿಂದ 6 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ.

 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!