'ಉಪ ಚುನಾವಣೆ ಬಳಿಕ ಸಿಎಂ ಬದಲಾವಣೆ ಖಚಿತ : ಬಿಜೆಪಿಗರಿಂದಲೇ ಮಾಹಿತಿ'

By Kannadaprabha NewsFirst Published Oct 28, 2020, 2:07 PM IST
Highlights

ಮುಖ್ಯಮಂತ್ರಿ ಯಡಿಯೂರಪ್ಪ ಉಪ ಚುನಾವಣೆ ಬಳಿಕ ಪಟ್ಟ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಮೈಸೂರು (ಅ.28):  ಆರ್‌.ಆರ್‌. ನಗರ ಮತ್ತು ಶಿರಾ ಉಪ ಚುನಾವಣೆಯ ನಂತರ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಖಚಿತ. ಈ ಬಗ್ಗೆ ಆ ಪಕ್ಷದವರೇ ಹೇಳುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ತಿಳಿಸಿದರು.

ಬಿಜೆಪಿ ಶಿರಾ ಹಾಗೂ ಆರ್‌.ಆರ್‌. ನಗರದಲ್ಲಿ ಗೆಲುವು ಸಾಧಿಸಲು ಹಣದ ಹೊಳೆ ಹರಿಸುತ್ತಿದೆ. ಆದರೂ ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಬಳಿಕ ಬಿಜೆಪಿ ಸೋಲಿನಿಂದಾಗಿ ಅವರ ಒಳಜಗಳ ಹೆಚ್ಚಾಗಲಿದೆ. ಯತ್ನಾಳ್‌ ಹಾಗೂ ಉಮೇಶ್‌ ಕತ್ತಿಯವರು ಹೇಳಿರುವಂತೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಕ್ರಮ ಆಸ್ತಿ ಗಳಿಕೆ, ಚುನಾವಣಾ ಅಕ್ರಮಗಳಲ್ಲಿ ಭಾಗಿ: ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್‌ ದೂರು .

ಡಿಫ್ಯಾಕ್ಟೋ ಸಿಎಂ ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಹಣದ ಹೊಳೆ ಹರಿಸುತ್ತಿದ್ದಾರೆ. ಒಂದು ಮತಕ್ಕೆ ಕನಿಷ್ಠ ಎರಡು ಸಾವಿರ ನೀಡುತ್ತಿದ್ದಾರೆ. ದಸರಾ ಆಚರಣೆ, ಇಂದಿರಾ ಕ್ಯಾಂಟೀನ್‌ ನಿರ್ವಹಣೆ, ಸರ್ಕಾರಿ ನೌಕರರಿಗೆ ಸಂಬಳ ನೀಡಲು ಇಲ್ಲದ ಹಣ ಚುನಾವಣೆಯಲ್ಲಿ ಖರ್ಚು ಮಾಡಲು ಹೇಗೆ ಬಂತು ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕೊರೋನಾ ಅವ್ಯವಹಾರದಿಂದ ಸಂಪಾದಿಸಿದ ಹಣ ಉಪ ಚುನಾವಣೆಗೆ ಬಳಕೆಯಾಗುತ್ತಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಬಿಸಿಜಿ ವ್ಯಾಕ್ಸಿನ್‌ ನೀಡಿದ್ದರೂ ನಾವು ಎಂದೂ ಅದಕ್ಕೆ ರಾಜಕೀಯ ಬಣ್ಣ ಕಟ್ಟಲಿಲ್ಲ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಕೋವಿಡ್‌ಗೆ ವ್ಯಾಕ್ಸಿನ್‌ ಘೋಷಿಸಿ ಜನರ ಟೀಕೆಗೆ ಗುರಿಯಾಗಿದೆ. ಇದರೊಂದಿಗೆ 2 ಕೋಟಿ ಉದ್ಯೋಗ ನಷ್ಟವಾಗಿದೆ. ಬಿಜೆಪಿ ಎಂದರೆ ಭ್ರಷ್ಟಾಚಾರಿ ಜನತಾ ಪಕ್ಷ ಎಂದು ಜನರು ಟೀಕಿಸುತ್ತಿದ್ದಾರೆ. ಇವೆಲ್ಲಾ ಕಾರಣಗಳಿಂದ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಮೈತ್ರಿ ಬಿಹಾರದಲ್ಲಿ ಗೆಲುವು ಸಾಧಿಸಿ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ತರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲಾ ಪಕ್ಷಗಳಲ್ಲಿಯೂ ನಾಯಕರ ನಡುವೆ ಪೈಪೋಟಿ ಇರುವುದು ಸಹಜ. ಆದರೆ ನಮ್ಮ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಅಂತಹ ಅಸಮಾಧಾನಗಳು ಯಾವುದೂ ಇಲ್ಲ. ಎಸ್‌.ಟಿ. ಸೋಮಶೇಖರ್‌ ಎಷ್ಟುಹಣ ಪಡೆದು ಪಕ್ಷ ಬದಲಾಯಿಸಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಅವರೇ ಬಹಳಷ್ಟುಬಾರಿ ಡಿ.ಕೆ. ಶಿವಕುಮಾರ್‌ ಅವರನ್ನು ರಾಜಕೀಯ ಗುರುಗಳು ಎಂದಿದ್ದರು. ಅವರ ಮಾತನ್ನು ನಂಬುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

click me!