ರಾಮಲಿಂಗಾರೆಡ್ಡಿ ಬೆಂಬಲಿತ ಬಿಬಿಎಂಪಿ ಸದಸ್ಯರ ರಾಜೀನಾಮೆ?

Published : Dec 25, 2018, 08:20 PM IST
ರಾಮಲಿಂಗಾರೆಡ್ಡಿ ಬೆಂಬಲಿತ ಬಿಬಿಎಂಪಿ ಸದಸ್ಯರ ರಾಜೀನಾಮೆ?

ಸಾರಾಂಶ

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದು ಬಿಬಿಎಂಪಿ ಮೇಲೆ ಪರಿಣಾಮ ಬೀರಲಿದೆಯೇ? ಎಂಬ ಪ್ರಶ್ನೆ ಮೂಡಿದೆ. ರಾಮಲಿಂಗಾರೆಡ್ಡಿ ಬೆಂಬಲಿಗರಾದ ಬಿಬಿಎಂಪಿ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಬೆಂಗಳೂರು[ಡಿ.25] ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ  ಬಿಬಿಎಂಪಿ ಸದಸ್ಯರು ರಾಜೀನಾಮೆಗೆ ನೀಡಲು‌ ಅಲೋಚನೆ ಮಾಡಿದ್ದಾರೆ. ಶಾಸಕರಾದ ರಾಮಲಿಂಗಾರೆಡ್ಡಿ ನಿವಾಸಕ್ಕೆ ಕಾರ್ಪೊರೇಟರ್ ರಿಜ್ವಾನ್ ಹಾಗೂ ಮಂಜುನಾಥ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ರಾಮಲಿಂಗ ರೆಡ್ಡಿ  ಏಳುಬಾರಿ‌ ಗೆದ್ದಿದ್ದಾರೆ. ಅವರ ರಾಜಕೀಯ ಇತಿಹಾಸದಲ್ಲಿ ಯಾವುದೆ ಕಪ್ಪು ಚುಕ್ಕಿ ಇಲ್ಲ. ಕಾಂಗ್ರೆಸ್ ಪಕ್ಷ ಬೆಳೆಸುವಲಲ್ಲಿ ಶ್ರಮ ವಹಿಸಿದ್ದಾರೆ. ಕಾರ್ಯಕರ್ತರ ಏಳಿಗೆಗಾಗಿ ದುಡಿದಿದ್ದಾರೆ ಎಂದು ರಿಜ್ವಾನ್ ಅಭಿಮಾನ ವ್ಯಕ್ತಪಡಿಸಿದರು.

ನಾಳೆ[ಡಿಸೆಂಬರ್ 26]  ಬಿಬಿಎಂಪಿ ಕೌನ್ಸಿಲ್ ಸಭೆ ಇರುವುದರಿಂದ ಈ ಭೇಟಿ ಬಹಳ ಮಹತ್ವ ಪಡೆದುಕೊಂಡಿದೆ.  ಒಟ್ಟಿನಲ್ಲಿ ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದರೂ ಬಂಡಾಯ ಮಾತ್ರ ಶಮನವಾದಂತೆ ಕಂಡುಬರುತ್ತಿಲ್ಲ. ಒಂದೆಲ್ಲಾ ಒಂದು ಕಡೆ ತನ್ನ ಪರಿಣಾಮ ತೋರಿಸುತ್ತಲೆ ಇದೆ.

PREV
click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!