ವರ್ಷಾಂತ್ಯಕ್ಕೆ ಒಂದಿಡಿ ದಿನ ಬೆಂಗಳೂರಲ್ಲಿ ಹಾಸ್ಯದ ಹೊಳೆ.. ಎಲ್ಲಿ? ಯಾವಾಗ?

By Web DeskFirst Published Dec 21, 2018, 10:56 PM IST
Highlights

ವರ್ಷದ ಅಂತ್ಯಕ್ಕೆ ಎಲ್ಲ ನೋವನ್ನು ಮರೆಸಿ ನಗೆಯ ಬುಗ್ಗೆ ಹರಿಸಲು ಒಂದು ಇಡೀ ದಿನ ಸಜ್ಜಾಗಿದೆ. ಕನ್ನಡದ ಪ್ರಮುಖ ಹಾಸ್ಯ ದಿಗ್ಗಜರು ಒಂದೇ ಕಡೆ ಸೇರಲಿದ್ದಾರೆ. ಎಲ್ಲಿ..ಯಾವಾಗ.. ವಿವರ ಮುಂದಿದೆ.

ಬೆಂಗಳೂರು[ಡಿ.21] ಅಕಾಡೆಮಿ ಆಫ್ ಹ್ಯೂಮರ್ ಅರ್ಪಿಸುವ ಡಾ.ಪ್ರಭುಶಂಕರ್ ಅವರ ಸಂಸ್ಮರಣೆಯ 'ಹಾಸ್ಯೋತ್ಸವ  2018 ಅಳುತಳುತ ಬಂದೇವ' ಡಿಸೆಂಬರ್ 25, ಮಂಗಳವಾರ ನಡೆಯಲಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಹಾಸ್ಯರಸಧಾರೆ ಹರಿಯಲಿದ್ದು ಜಯನಗರದ 7ನೇ ಬ್ಲಾಕ್ ನ್ಯಾಷನಲ್ ಕಾಲೇಜು ಎಚ್.ಎನ್‌ ಕಲಾಕ್ಷೇತ್ರ ಹಾಸ್ಯೋತ್ಸವಕ್ಕೆ ಸಾಕ್ಷಿಯಾಗಲಿದೆ.

ಉಪಕಾರ್ ಡೆವಲಪರ್ಸ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನಪ್ರಿಯ ಹಾಸ್ಯನಟ ಮುಖ್ಯಮಂತ್ರಿ ಚಂದ್ರು, ಸಾಹಿತಿ ಅ.ರಾ.ಮಿತ್ರ, ಬೇಲೂರು ರಾಮಮೂರ್ತಿ, ಡಾ.ಸಿಕೆ.ರೇಣುಕಾಚಾರ್ಯ, ವೈ.ವಿ.ಗುಂಡೂರಾವ್, ಗಂಗಾವತಿ ಪ್ರಾಣೇಶ್, ದುಂಡಿರಾಜ್, ಮೈಸೂರು ಆನಂದ್ ಮತ್ತು ಪ್ರೊ.ಕೆ.ಪಿ.ಪುತ್ತೂರಾಯ ಹಾಸ್ಯ ರಸಧಾರೆ ಹರಿಸಲಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ‘ಬೀಗಬೇಡ’ ಅಂದವರಿಗೆ ಪ್ರಾಣೇಶ್ ಪಂಚ್!

ಈ ವರ್ಷದ ವಿಶೇಷವಾಗಿ ಮೇಗರವಳ್ಳಿ ಸುಬ್ರಮಣ್ಯ ಅವರಿಂದ ವ್ಯಂಗ್ಯ ಚಿತ್ರ ಪ್ರದರ್ಶನ ಮತ್ತು ಎಂ.ಆರ್‌.ಸುಬ್ಬರಾವ್ ಮತ್ತು ಕಿರ್ಲೋಸ್ಕರ್ ಸತ್ಯ ಅವರ ಗಾನವಿನೋದಿನಿ ತಂಡದಿಂದ ಹಾಸ್ಯ ಗಾನ ವೈವಿಧ್ಯ ನಡೆಯಲಿದೆ. ಬೇಲೂರು ರಾಮಮೂರ್ತಿ ಮತ್ತು ವೈವಿ ಗುಂಡೂರಾವ್ ಹಾಸ್ಯೋತ್ಸವದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

click me!