Breaking ಕರ್ನಾಟಕ ಉಪ ಚುನಾವಣೆ ಟಿಕೆಟ್ ಘೋಷಣೆ,ಅಚ್ಚರಿ ತೀರ್ಮಾನ ಕೈಗೊಂಡ ಬಿಜೆಪಿ

Published : Mar 19, 2026, 09:32 AM ISTUpdated : Mar 19, 2026, 09:42 AM IST
Nitin nabin bjp national president

ಸಾರಾಂಶ

ಕರ್ನಾಟಕ ಉಪ ಚುನಾವಣೆ ಟಿಕೆಟ್ ಘೋಷಣೆ, ಅಚ್ಚರಿ ತೀರ್ಮಾನ ಕೈಗೊಂಡ ಬಿಜೆಪಿ, ಕಾವು ಪಡೆದುಕೊಂಡಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಅಚ್ಚರಿ ನಿರ್ಧಾರ ಕೈಗೊಂಡಿದೆ.

ಬೆಂಗಳೂರು (ಮಾ.19) ಕರ್ನಾಟಕ ಉಪ ಚುನಾವಣೆಗೆ ಕಾವು ತೀವ್ರಗೊಂಡಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಈ ಬಾರಿ ಬಿಜೆಪಿ ಕೆಲ ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಾಗಲಕೋಟೆ ಕ್ಷೇತ್ರದ ಟಿಕೆಟ್ ವೀರಣ್ಣ ಚರಂತಿಮಠ್‌ಗೆ ನೀಡಲಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಶ್ರೀನಿವಾಸ್ ಟಿ ದಾಸಕರಿಯಪ್ಪ ಪಾಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯದ ನಾಯಕನಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ನಿರ್ಧಾರ ಕೈಗೊಂಡಿದೆ.

ಎಸ್‌ಟಿ ಸಮುದಾಯದ ಉಪಾಧ್ಯಕ್ಷನಿಗೆ ಟಿಕೆಟ್

ದಾವಣಗೆರೆ ಕ್ಣೇತ್ರದಲ್ಲಿಸಿದ್ದೇಶ್ವರ ಬಣದ ಮುಖಂಡ ಶ್ರೀನಿವಾಸ್ ಟಿ ದಾಸಕರಿಯಪ್ಪಗೆ ಟಿಕೆಟ್ ನೀಡಲಾಗಿದೆ. ದಾವಣೆಗರೆಯಲ್ಲಿರವು ಪ್ರಬಲ ಲಿಂಗಾಯತ, ಮರಾಠ ಸಮುದಾಯ ಬಿಟ್ಟು ಎಸ್ ಟಿ ಸಮುದಾಯಕ್ಕೆ ಟಿಕೆಟ್ ಘೋಷಣ ಮಾಡಲಾಗಿದೆ. ದಾವಣೆಗೆರೆ ದಕ್ಷಿಣ ಕ್ಷೇತ್ರದಲ್ಲಿ 13 ಸಾವಿರ ಮತ ಹೊಂದಿರುವ ಎಸ್ ಟಿ ಸಮೂದಾಯಕ್ಕೆ ಇದೀಗ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿಯ ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾಗಿರುವ ಶ್ರೀನಿವಾಸ್ ಹಲವು ಚುನಾವಣೆಗಳಲ್ಲಿ ಟಿಕೆಟ್ ವಂಚಿತರಾಗಿ ಬೇಸರಗೊಂಡಿದ್ದರು. ಇತ್ತೀಚೆಗೆ ಪಕ್ಷೇತ್ರರಾಗಿ ಸ್ಪರ್ಧೆ ಮಾಡುವ ಕುರಿತು ಶ್ರೀನಿವಾಸ್ ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಾರಿ ಬಿಜೆಪಿ ಪ್ರಬಲ ಸಮುದಾಯದ ಬದಲು ಪರಿಶಿಷ್ಠ ಪಂಗಡಕ್ಕೆ ಅವಕಾಶ ನೀಡಿದೆ.

ದಾವಣೆಗೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಟಿಕೆಟ್ ಘೋಷಣೆ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠಗೆ ಟಿಕೆಟ್ ನೀಡಲು ಹೆಚ್ಚಿನ ಗೊಂದಲ ಇರಲಿಲ್ಲ. ಮಾಜಿ ಶಾಸಕರಾಗಿರುವ ಚರಂತಿಮಠ ಪರ ಜಿಲ್ಲೆಯ ಬಿಜೆಪಿ ಮುಖಂಡರು ಗ್ರೀನ್ ಸಿಗ್ನಲ್ ನೀಡದ್ದರು. ಇತ್ತ ರಾಜ್ಯ ಮಟ್ಟದಲ್ಲೂ ಚರಂತಿಮಠ ಪರವಾಗಿ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಲಾಗಿತ್ತು. ಹೀಗಾಗಿ ಬಾಗಲಕೋಟೆ ಯಾವುದೇ ಅಡೆ ತಡೆ ಇಲ್ಲದೆ ಅಭ್ಯರ್ಥಿ ಆಯ್ಕೆ ನಡೆದಿತ್ತು.ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಲವು ಸುತ್ತಿನ ಚರ್ಚೆ ಬಳಿಕ ಆಯ್ಕೆ ಮಾಡಲಾಗಿದೆ.

ದಾವಣೆಗೆರೆ ಜಿಲ್ಲೆಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಸ್ಥಳೀಯ ಮುಖಂಡ ಅಜಯ್ ಕುಮಾರ್, ರಾಜೇನಹಳ್ಳಿ ಶಿವಕುಮಾರ್, ಎಸ್‌ಟಿ ಸಮುದಾಯದ ನಾಯಕ ಶ್ರೀನಿವಾಸ್ ಟಿ ಕರಿಯಪ್ಪ ಸೇರಿದಂತೆ ಪ್ರಮುಖರು ಅಭ್ಯರ್ಥಿಗಳ ರೇಸ್‌ನಲ್ಲಿದ್ದರು. ಈ ಪೈಕಿ ಶ್ರೀನಿವಾಸ್ ಟಿ ಕರಿಯಪ್ಪ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

 

 

 

PREV
Read more Articles on
click me!

Recommended Stories

ತ.ನಾಡು ರೀತಿ ಇಲ್ಲೂ ಹೋಟೆಲ್‌ ವಿದ್ಯುತ್‌ ಸಬ್ಸಿಡಿ ಕೊಡಿ | ಪಿ.ಸಿ. ರಾವ್ ಅವರ ವಿಶೇಷ ಸಂದರ್ಶನ
ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ, ಆರೇಂಜ್ ಅಲರ್ಟ್