ಕೈ ಟ್ರಬಲ್ ಶೂಟರ್ ಕಾಣೆಯಾಗಿದ್ದಾರೆಂದು ಡಿಕೆಶಿ ಕೋಟೆಯಲ್ಲಿ ಬಿಜೆಪಿಗರ ಸಂಭ್ರಮ

By Suvarna NewsFirst Published Dec 9, 2019, 4:58 PM IST
Highlights

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿಗರ ಸಂಭ್ರಮ ಮುಗಿಲು ಮುಟ್ಟಿದೆ. ಕಾಂಗ್ರೆಸ್ ಕೇವಲ 2 ಸ್ಥಾನ ಪಡೆದಿದ್ದು, ಜೆಡಿಎಸ್ ಶೂನ್ಯವಾಗಿದೆ.

ರಾಮನಗರ [ಡಿ.09]: ರಾಜ್ಯದಲ್ಲಿ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ.  ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಜೆಡಿಎಸ್ ಶೂನ್ಯ ಫಲಿತಾಂಶ ದಾಖಲಿಸಿದೆ. 

ಬಿಜೆಪಿ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರ ಸಂಭ್ರಮ ಮುಗಿಲು ಮುಟ್ಟಿದ್ದು ಎಲ್ಲೆಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ಜಯಗಳಿಸಿದ್ದಕ್ಕೆ ಸಂಭ್ರಮ ಪಡುತ್ತಿದ್ದಾರೆ. 

ಇತ್ತ ಡಿಕೆ ಸಹೋದರರ ಭದ್ರಕೋಟೆಯಲ್ಲಿಯೂ ಸಹ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವವ ಆಚರಿಸಿದ್ದಾರೆ. ಇಲ್ಲಿನ ಐಜೂರು ವೃತ್ತದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಪರ ಘೋಷನೆ ಕೂಗಿದ್ದಾರೆ. 

ಸಂಭ್ರಮದ ವೇಳೆ ಹೌದು ಹುಲಿಯಾ ಎಂದು ಘೋಷಣೆ ಕೂಗಿದ್ದು, ಕಾಂಗ್ರೆಸ್ ಟ್ರಬಲ್ ಶೂಟರ್ ಕಾಣೆಯಾಗಿದ್ದಾರೆ ಎಂದು ಘೋಷಣೆ ಕೂಗಿದ್ದಾರೆ. 

ನಿಜವಾಯ್ತು ನೀಲಿ ಪುಸ್ತಕದ ರಾಜಕೀಯ ಭವಿಷ್ಯ: BSY ಸರ್ಕಾರಕ್ಕಿಲ್ಲ ಕಂಟಕ!...

ರಾಜ್ಯದಲ್ಲಿ 15 ಶಾಸಕರ ಅನರ್ಹತೆಯಿಂದ ತೆರವಾದ ಕ್ಷೇತ್ರಹಳಿಗೆ ಡಿಸೆಂಬರ್ 5 ರಂದು ನಡೆದ ಚುನಾವಣೆಯಲ್ಲಿ 12 ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಮುಂದುವರಿಯಲಿದೆ. 

ಒಟ್ಟು 12 ಸ್ಥಾನಗಳಲ್ಲಿ ಬಿಜೆಪಿಗಳಿಸುವ ಮೂಲಕ ರಾಜ್ಯದಲ್ಲಿ 117 ಸ್ಥಾನಗಳು ಬಿಜೆಪಿ ಪಡೆದಂತಾಗಿದೆ.

click me!