ಭಾಗವತ ಪಟ್ಲ ಸತೀಶ್ ಅವರನ್ನು ಮೇಳದಿಂದ ಹೊರ ಹಾಕಿರುವುದಕ್ಕೆ ಹೈಕೋರ್ಟ್ ದೇವಸ್ಥಾನ ಟ್ರಸ್ಟಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾಗವತ ಪಟ್ಲ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಿಚಾರಣೆ ನಡೆಸಿದೆ.
ಮಂಗಳೂರು(ಡಿ.09): ಭಾಗವತ ಪಟ್ಲ ಸತೀಶ್ ಅವರನ್ನು ಮೇಳದಿಂದ ಹೊರ ಹಾಕಿರುವುದಕ್ಕೆ ಹೈಕೋರ್ಟ್ ದೇವಸ್ಥಾನ ಟ್ರಸ್ಟಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾಗವತ ಪಟ್ಲ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಿಚಾರಣೆ ನಡೆಸಿದೆ.
ಭಾಗವತ ಪಟ್ಲ ಸತೀಶ್ ಅವರನ್ನು ಮೇಳದಿಂದ ಹೊರ ಹಾಕಿರುವ ಸಂಬಂಧ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ಕಟೀಲು ಯಕ್ಷಗಾನ ಮೇಳದಿಂದ ಭಾಗವತ ಸತೀಶ್ ಪಟ್ಲರನ್ನು ಹೊರಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಭಾಗವತ ಸತೀಶ್ ಪಟ್ಲ ಅರ್ಜಿ ವಿಚಾರಣೆಗೆ ಪಡೆದ ನ್ಯಾಯಾಲಯ ಮೇಳದಿಂದ ಭಾಗವತನ ಹೊರ ಹಾಕಿದ್ದಕ್ಕೆ ದೇವಸ್ಥಾನದ ಟ್ರಸ್ಟಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
undefined
ಪಟ್ಲ ಸತೀಶ್ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?
ಬುಧವಾರ ಸತೀಶ್ ಪಟ್ಲ ಮತ್ತು ಟ್ರಸ್ಟಿಗಳು ಖುದ್ದು ಹಾಜರಾಗಲು ಕೋರ್ಟ್ ಸೂಚನೆ ನೀಡಿದ್ದು, ಬುಧವಾರ 2.30ಕ್ಕೆ ಹೈಕೋರ್ಟ್‌ಗೆ ಹಾಜರಾಗಿ ರಾಜಿ ಮೂಲಕ ಇತ್ಯರ್ಥಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ವೀರಪ್ಪ ಸೂಚನೆ ನೀಡಿದ್ದಾರೆ.
ನವೆಂಬರ್ 23ರಂದು ಪಟ್ಲ ಸತೀಶ್ ಶೆಟ್ಟಿಯನ್ನ ಟ್ರಸ್ಟಿಗಳು ರಂಗಸ್ಥಳದಿಂದ ಕೆಳಗಿಳಿಸಿದ್ದರು. ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವು ವರ್ಷಗಳಿಂದ ಭಾಗವತರಾಗಿದ್ದ ಪಟ್ಲ ಅವರನ್ನು ಮೇಳದಿಂದ ಕೈಬಿಟ್ಟಿದ್ದು, ಯಕ್ಷಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಕಟೀಲು ಯಕ್ಷಗಾನ ಮೇಳದಿಂದ ಪಟ್ಲ ಸತೀಶ್ ಹೊರಕ್ಕೆ