ಉಪ​ ಚು​ನಾ​ವ​ಣೆ : ಬೇರೆ ಬೇರೆ ಮಾರ್ಗದಿಂದ ಸಂಚರಿಸಲಿವೆ ಬಸ್

Kannadaprabha News   | Asianet News
Published : Nov 02, 2020, 09:35 AM IST
ಉಪ​ ಚು​ನಾ​ವ​ಣೆ : ಬೇರೆ ಬೇರೆ ಮಾರ್ಗದಿಂದ ಸಂಚರಿಸಲಿವೆ ಬಸ್

ಸಾರಾಂಶ

ರಾಜ್ಯದಲ್ಲಿ ನಾಳೆ ಉಪ ಚುನಾವಣೆ ನಡೆಯಲಿದೆ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ

ತುಮ​ಕೂರು (ನ.02): ನವೆಂಬರ್‌ 3ರಂದು ನಡೆಯಲಿರುವ ಶಿರಾ ವಿಧಾನಸಭಾ ಉಪ ಚುನಾವಣೆಯ ಚುನಾವಣಾ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತುಮಕೂರು ನಗರ ಹಾಗೂ ಗುಬ್ಬಿ ಪಟ್ಟಣದಿಂದ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಮತಗಟ್ಟೆಅಧಿಕಾರಿ/ಸಿಬ್ಬಂದಿಗಳಿಗೆ ತುಮಕೂರು ನಗರದ ಬಿ.ಹೆಚ್‌.ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಿಂದ ಹಾಗೂ ಗುಬ್ಬಿ ಪಟ್ಟಣದಲ್ಲಿ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಿಂದ ಇಂದು ಬೆಳಿಗ್ಗೆ 6.30 ಗಂಟೆಗೆ ಬಸ್ಸುಗಳು ಹೊರಡಲಿವೆ.

ನವೆಂಬರ್ 5ಕ್ಕೆ ಬಂದ್ ಆಗುತ್ತಾ ಸಾರಿಗೆ ಸಂಪರ್ಕ? ...

ಬಸ್‌ ಹೊರಡುವ ಸಮಯದ ನಂತರ ಬರುವ ಮತಗಟ್ಟೆಅಧಿಕಾರಿ/ಸಿಬ್ಬಂದಿಗಳು ತಾವೇ ಸ್ವತಃ ಪ್ರಯಾಣದ ವ್ಯವಸ್ಥೆ ಮಾಡಿಕೊಂಡು ನಿಗಧಿತ ಸಮಯಕ್ಕೆ ಶಿರಾ ಮಸ್ಟರಿಂಗ್‌ ಕೇಂದ್ರವನ್ನು ತಲುಪಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ನೋಡಲ್‌ ಅಧಿಕಾರಿ ನಾಗೇಶ್‌ (ಮೊ.ಸಂ.9980807199) ಅವರನ್ನು ಸಂಪರ್ಕಿಸುವುದು ಎಂದು ಅವರು ತಿಳಿಸಿದ್ದಾರೆ.

PREV
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ