104 ರಿಂದ 106 ಅದಕ್ಕೆ 20 ಏನಿದು ಬಿಎಸ್‌ವೈ ಹೊಸ ಲೆಕ್ಕಾಚಾರ!

By Web DeskFirst Published May 10, 2019, 11:35 AM IST
Highlights

ಹುಬ್ಬಳ್ಳಿಯಲ್ಲಿ ಬಿಎಸ್ ಯಡಿಯೂರಪ್ಪ ಲೋಕಸಭಾ ಚುನಾವಣಾ ಫಲಿತಾಂಶದ ಭವಿಷ್ಯ ಹೇಳಿದ್ದು ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲಿದೆ ಎಂದಿದ್ದಾರೆ. ಆದರೆ ಅವರ ಲೆಕ್ಕಾಚಾರ ಏನು? 

ಹುಬ್ಬಳ್ಳಿ[ಮೇ. 10] ಸೋಲಿನ ಭಯದಿಂದ ಕುಮಾರಸ್ವಾಮಿ, ದೇವೇಗೌಡ ಕಂಗಾಲಾಗಿದ್ದಾರೆ. ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸಂಖ್ಯಾಬಲ 106 ಆಗಲಿದೆ. ಮೂರು ಜನ ಪಕ್ಷೇತರರು ಬಿಜೆಪಿ ಬೆಂಬಲಿಸ್ತಾರೆ. 20 ಕ್ಕೂ ಹೆಚ್ಚು ಶಾಸಕರು ಅತೃಪ್ತಿ ಹೊಂದಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಗೆ ಈಗ ಹೊಸ ಜವಾಬ್ದಾರಿ

ಹಾಗಾದರೆ ಬಿಎಸ್ ಯಡಿಯೂರಪ್ಲ ಈ ಮಾತು ಹೇಳಿರುವುದರ ಹಿಂದಿನ ಅರ್ಥ ಏನು? ಸಹಜವಾಗಿಯೇ ಕುತೂಹಲ ಮೂಡಿಸುವ ಪ್ರಶ್ನೆ. ಕಾಂಗ್ರೆಸ್ ನಲ್ಲಿ ಅಲ್ಲಿಲ್ಲಿ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ. 

224  ಕ್ಷೇತ್ರಗಳ ಪೈಕಿ ಸದ್ಯ 104 ಸ್ಥಾನಗಳು ಬಿಜೆಪಿ ಬಳಿ ಇವೆ. ಇಬ್ಬರು ಪಕ್ಷೇತರರಿದ್ದಾರೆ. 38 ಸ್ಥಾನ ಹೊಂದಿರುವ ಜೆಡಿಎಸ್ ಮತ್ತು 78 ಸ್ಥಾನ ಗಳಿಸಿದ್ದ ಕಾಂಗ್ರೆಸ್ ದೋಸ್ತಿಯಾಗಿ ಸರಕಾರ ನಿಭಾಯಿಸುತ್ತಿವೆ.  ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇದೆಲ್ಲವನ್ನು ಗಮನದಲ್ಲಿ  ಇಟ್ಟುಕೊಂಡು ಮಾಜಿ ಸಿಎಂ ಇಂಥ ಹೇಳಿಕೆ ನೀಡಿದ್ದಾರೆ.

click me!