* ಶಿವಸೇನೆ ಪುಂಡರಿಗೆ ಕಿರಣ್ ಜಾಧವ್ ಸಾಥ್
* ಬಿಜೆಪಿ ನಾಯಕನ ಒತ್ತಾಯಕ್ಕೆ ಮಣಿದು ಗೇಟ್ ಓಪನ್ ಮಾಡಿದ ಪೊಲೀಸರು
* ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಭಿಷೇಕ
ಬೆಳಗಾವಿ(ಡಿ.18): ಛತ್ರಪತಿ ಶಿವಾಜಿ ಮಹಾರಾಜ(Chhatrapati Shivaji Maharaj) ಪ್ರತಿಮೆಗೆ ಅಭಿಷೇಕ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಎಂಇಎಸ್(MES), ಶಿವಸೇನೆ(Shivsena) ಪುಂಡರು ಇಂದು(ಶನಿವಾರ) ನಗರದ ಉದ್ಯಾನವನ ಗೇಟ್ ಬಳಿ ಜಮಾವಣೆಗೊಂಡಿದ್ದಾರೆ. ಎಂಇಎಸ್, ಶಿವಸೇನೆ ಪುಂಡರಿಗೆ ಬಿಜೆಪಿ ಒಬಿಸಿ ರಾಜ್ಯ ಘಟಕದ ಕಾರ್ಯದರ್ಶಿ ಕಿರಣ್ ಜಾಧವ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರ ಜೊತೆ ಬಿಜೆಪಿ(BJP) ಮುಖಂಡ ಕಿರಣ್ ಜಾಧವ್(Kiran Jadhav) ವಾಗ್ವಾದಕ್ಕಿಳಿದಿದ್ದಾರೆ. ಬಿಜೆಪಿ ನಾಯಕನ ಒತ್ತಾಯಕ್ಕೆ ಮಣಿದು ಪೊಲೀಸರು(Police) ಗೇಟ್ ಓಪನ್ ಮಾಡಿದ್ದಾರೆ. ನಿಷೇಧಾಜ್ಞೆ ನಡುವೆಯೂ ಉದ್ಯಾನವನಕ್ಕೆ 20ಕ್ಕೂ ಹೆಚ್ಚು ಜನರು ನುಗ್ಗಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಎಂಇಎಸ್, ಶಿವಸೇನೆ ಪುಂಡರು ಅಭಿಷೇಕ ಸಲ್ಲಿಸಿದ್ದಾರೆ. ನಾಡದ್ರೋಹಿ ಎಂಇಎಸ್, ಶಿವಸೇನೆ ಪುಂಡರ ಬೆಂಬಲಕ್ಕೆ ಬಿಜೆಪಿ ನಾಯಕ ಕಿರಣ್ ಜಾಧವ್ ನಿಂತಿದ್ದಾರೆ. ಬೆಳಗಾವಿಯಲ್ಲಿ(Belagavi) ತಡರಾತ್ರಿ ಪುಂಡರ ಅಟ್ಟಹಾಸ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿರಣ್ ಜಾಧವ್, ಕಲ್ಲು ತೂರಾಟ ನಡೆದ ಬಗ್ಗೆ ಗೊತ್ತೇ ಇಲ್ಲ. ಅಮಾಯಕರನ್ನು ಬಂಧಿಸಿದ್ದಾರೆ. ನನಗೆ ಪಕ್ಷ ಆಮೇಲೆ, ಮೊದಲು ಮರಾಠಾ ಸಮುದಾಯವಾಗಿದೆ. ಬೆಂಗಳೂರಿನಲ್ಲಿ(Bengaluru) ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಮಾಡಿದವರನ್ನ ಬಂಧಿಸಬೇಕು. ಮುಂದಿನ ದಿನಗಳಲ್ಲಿ ಮರಾಠಾ ಸಮುದಾಯದವರೆಲ್ಲ(Maratha Community) ಒಗ್ಗೂಡಿ ಹೋರಾಟ ಮಾಡುತ್ತೇವೆ ಅಂತ ಹೇಳಿದ್ದಾರೆ.
undefined
ನಿಲ್ಲದ ಎಂಇಎಸ್, ಶಿವಸೇನೆ ಪುಂಡರ ಉದ್ಧಟತನ: ಪೊಲೀಸರಿಗೇ ನಿಂದಿಸಿದ ನಾಡದ್ರೋಹಿಗಳು
ಪುಂಡರ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ
ಎಂಇಎಸ್, ಶಿವಸೇನೆ ಪುಂಡಾಟಿಕೆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ(Koppal) ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಗಂಗಾವತಿ(Gangavati) ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಕರವೇ ಪ್ರತಿಭಟನೆ(Protest) ನಡೆಸಿದ್ದಾರೆ. ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ(Karnataka) ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನ ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ರಾಜ್ಯದ ಏಳು ಕೋಟಿ ಕನ್ನಡಿಗರ(Kannadigas) ಭಾವನೆಗಳಿಗೆ ಎಂಇಎಸ್ ಧಕ್ಕೆ ತಂದಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿದಕ್ಕೆ ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇಂತಹ ಕಿಡಿಗೇಡಿ ಸಂಘಟನೆಗಳನ್ನು ಮಹಾರಾಷ್ಟ್ರ ಸರ್ಕಾರವು ಬೆಂಬಲಿಸುತ್ತಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳಿಗೆ ಮಹಾರಾಷ್ಟ್ರ ಸರ್ಕಾರ(Government of Maharashtra) ಕುಮ್ಮಕ್ಕು ನೀಡುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಮೇಲೆ ಕಲ್ಲು ತೂರಿದ MES ಪುಂಡರು, ಪದೇ ಪದೇ ಉದ್ಧಟತನ
ಬೆಳಗಾವಿ: ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ಎಂಇಎಸ್ (MES) ಪುಂಡರು ಉದ್ಧಟತನ ತೋರಿದ್ದಾರೆ. ಡಿಸಿಪಿ ವಿಕ್ರಂ ಆಮಟೆ ಸಂಭಾಜೀ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಎಂಇಎಸ್ ಪುಂಡರು ಕಲ್ಲು ತೂರಾಟ ನಡೆಸಿದ್ದರು.
ಕರ್ನಾಟಕ ಧ್ವಜವನ್ನು ಸುಟ್ಟು ಹಾಕಿ ಅಪಮಾನಗೊಳಿಸಿದ ಶಿವಸೇನೆ ಮತ್ತು ಎಂಇಎಸ್ ಪುಂಡರಿಗೆ ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮತ್ತು ಕನ್ನಡಿಗರ ಮೇಲೆ ದಾಖಲಿಸಲಾಗಿರುವ ಕೊಲೆ ಪ್ರಯತ್ನ ಪ್ರಕರಣವನ್ನು ದೋಷ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಕೋಲಾರ ಜಿಲ್ಲಾಕಾರಿ ಡಾ.ಸೆಲ್ವಮಣಿ ಅವರ ಮುಖಾಂತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ಕರಾಳ ದಿನ, ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು
ಕನ್ನಡ ನೆಲದಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು
ಕನ್ನಡಿಗರ ಕೈಯಲ್ಲೇ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ ಎಂದು ಹೇಳುವ ಮೂಲಕ ಎಂಇಎಸ್ ಪುಂಡ ಶುಭಂ ಶೆಳ್ಕೆ(Shubham Shelke) ಮತ್ತೆ ನಾಲಿಗೆ ಹರಿಬಿಟ್ಟಿದ್ದನು.
ಎಂಇಎಸ್ ಎಮ್ ಪ್ಲಸ್ ಎಮ್ ಸೂತ್ರ ಬಗ್ಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman Savadi) ವ್ಯಂಗ್ಯ ವಿಚಾರದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶುಭಂ ಶೆಳ್ಕೆ, ಲೋಕಸಭಾ ಉಪಚುನಾವಣೆ ಬಳಿಕ ಇವರ ಢೋಂಗಿತನ ಮೂರ್ತಿ ಮುರಿದು ಬಿದ್ದಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮುಸ್ಲಿಂ(Muslim) ಅಷ್ಟೇ ಅಲ್ಲ ಇಬ್ಬರು ಕನ್ನಡಿಗರು ಎಂಇಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇವರ ಕೈಯಲ್ಲೇ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ ಎಂದು ಹೇಳುವ ಮೂಲಕ ಉದ್ಧಟತನ ಮೆರೆದಿದ್ದನು.