‘ಲೋಕಸಭಾ ಚುನಾವಣೆಗೂ ಮುನ್ನ ಮೈತ್ರಿ ಸರ್ಕಾರ ಪತನ’

By Web Desk  |  First Published Jul 26, 2018, 3:46 PM IST

ಮಾಜಿ ಸಚಿವ ರೇಣುಕಾಚಾರ್ಯ ಮತ್ತೆ ಭವಿಷ್ಯ ನುಡಿದಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೇ ಕುಮಾರಸ್ವಾಮಿ ಅಧಿಕಾರದಿಂದ ಕೆಳಗೆ ಇಳಿಯುತ್ತಾರೆ ಎಂದಿದ್ದಾರೆ.


ರಾಮನಗರ[ಜು.25]  ಈಗಾಗಲೆ ಧರ್ಮ ಯುದ್ಧ ಸಾರಿದ್ದೇವೆ. ಯುದ್ಧ ಆರಂಭವಾಗಿದೆ, ಬಿ.ಎಸ್ ಯಡಿಯೂರಪ್ಪ ಸಿ.ಎಂ ಆಗುವರೆಗೆ ಹೋರಾಟ‌ ಮಾಡುತ್ತೇನೆ ನಮ್ಮ ಹೋರಾಟ ನಿರಂತರ ಎಂದು  ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ರಾಜ್ಯದ ಜನ ಭರವಸೆ ಇಟ್ಟಿದ್ರು. ರಾಜ್ಯ ಅಭಿವೃದ್ಧಿಯಾಗಬೇಕಾದ್ರೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಒಂದು ಭಾಗಕ್ಕೆ ಮಾತ್ರ ಸೀಮಿತವಾಗದೇ, ಇಡೀ ರಾಜ್ಯಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

Tap to resize

Latest Videos

ದಾವಣಗೆರೆ ಕಡೆಯಲ್ಲೂ‌ ಯಾವುದೇ ಅಭಿವೃದ್ಧಿಯಾಗಿಲ್ಲ. ಕುಮಾರಸ್ವಾಮಿ ಅವರ ಅಧಿಕಾರ ಶಾಶ್ವತವಾಗಿ ಇರೋದಿಲ್ಲ ಮುಂದಿನ ದಿನದಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಕುಮಾರಸ್ವಾಮಿ ಅಧಿಕಾರ ಅಂತ್ಯವಾಗುವವರೆಗೆ ಹೋರಾಟ ಮಾಡುತ್ತೇವೆ ಎಂದರು.

click me!