ವ್ಯಾಲಂಟೈನ್ ಡೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಕಂಡ್ರೆ ಹುಶಾರ್, ಮದುವೆ ಮಾಡಿಸಿ ಬಿಡ್ತೇವೆ- ಪ್ರೇಮಿಗಳಿಗೆ ಹಿಂದು ಜಾಗೃತಿ ಸೇನೆ ಎಚ್ಚರಿಕೆ
ಕಲಬುರಗಿ, (ಫೆ.12): ವ್ಯಾಲಂಟೈನ್ ಡೇ ಭಾರತೀಯ ಸನಾತನ ಧರ್ಮ, ಸಂಸ್ಕಂತಿಗೆ ವಿರೋಧವಾಗಿರುವಂತಹ ಆಚರಣೆ ಎಂದು ಉಗ್ರವಾಗಿ ಖಂಡಿಸಿರುವ ಹಿಂದೂ ಜಾಗೃತಿ ಸೇನೆ ಕಲಬುರಗಿ ಘಟಕದ ಪದಾಧಿಕಾರಿಗಳು ಫೆ. 14 ರಂದು ನಡೆಯುವ ಪ್ರೇಮಿಗಳ ದಿನದಂದು ಯಾರಾದರೂ ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಯಾಗಿ ಕಂಡಲ್ಲಿ ಮದುವೆ ಮಾಡಿಸುವ ಎಚ್ಚರಿಕೆ ನೀಡಿದ್ದಾರೆ.
ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಕಾರ್ಯದರ್ಶಿ ಅಶೋಕ ಹರಸೂರ್ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ತಮ್ಮ ಹೋರಾಟ ಪ್ರೇಮದ ವಿರುದ್ಧವಲ್ಲ, ಆದರೆ ಪ್ರೇಮಿಗಳ ದಿನದ ಹೆಸರಲ್ಲಿನ ಬೇಕಾಬಿಟ್ಟಿತನ ವಿರೋಧಿಸುತ್ತೇವೆ, ಈ ದಿನದಂದು ಪ್ರೇಮಿಗಳು ಯಾರಾದರೂ ಹೊರಗಡೆ ಜೋಡಿ ಕಂಡಲ್ಲಿ ಸೇನೆಯ ಕಾರ್ಯಕರ್ತರು ಅವರ ಮದುವೆಯನ್ನೇ ಮಾಡಲಿದ್ದೇವೆ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾಗಿ ಹೇಳಿದರು.
ವ್ಯಾಲೆಂಟೈನ್‌ಗೆ ಗಿಫ್ಟ್ ಕೊಡೋಕೆ ಸೂಪರ್ ಸ್ಪಾಟ್, ಇಲ್ಲಿದೆ ಹಲವು ಆಯ್ಕೆ
ಪ್ರೇಮಿಗಳ ದಿನದ ನೆಪದಲ್ಲಿ ಸಾರ್ವಜನಿಕವಾಗಿ ಸ್ವೇಚ್ಚಾಚಾರ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ಹೊರಹಾಕಿರುವ ಅವರು ಪಾಶ್ಚಾತ್ಯ ಸಂಸೃತಿಯನ್ನು ಬಿಟ್ಟು ಭಾರತೀ ಅಪ್ಪಟ ಸಂಸ್ಕಂತಿ ಯುವಕರು ತಮ್ಮದಾಗಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರೇಮಿಗಳ ದಿನ, ಮುತ್ತು ಕೊಡುವ ದಿನ, ಅಪ್ಪಿಕೊಳ್ಳುವ ದಿನವೆಂದು ಹೊರ ದೇಶಗಳಲ್ಲಿನ ಸಂಸ್ಕಂತಿ ಬಾರತೀಯರಾದ ನಾವು ಅನುಕರಿಸೋದು ತಪ್ಪು. ಹಿಂದು ಜಾಗೃತಿ ಸೇನೆ ಇಂತಹ ಆಚರಣೆಗಳನ್ನು ವಿರೋಧಿಸುತ್ತದೆ.ನಮ್ಮ ಹೋರಾಟ ಪ್ರೇಮಿಗಳ ವಿರುದ್ಧವಲ್ಲ. ಫೆ. 14 ರ ವ್ಯಾಲಂಟೈನ್ ಡೇ ವಿರುದ್ಧವಾಗಿದೆ ಎಂದು ಲಕ್ಷ್ಮೀಕಾಂತ ಸ್ಪಷ್ಟಪಡಿಸಿದರು.
ಫೆ. 14 ರಂದೇ ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ದಾಳಿ ಖಂಡಿಸುತ್ತೇವೆ. ಈ ದಾಳಿಗೂ 1 ವರ್ಷ ತುಂಬಿದೆ. ಈ ದಿನ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ವೃತ್ತದಲ್ಲಿ ಸಂಜೆ 6 ಗಂಟೆಗೆ ಕ್ಯಾಂಡಲ್ ಲೈಟ್ ಮೆರವಣಿಗೆ ಜಾಗೃತಿ ಸೇನೆಯಿಂದ ನೆಡಸಲಾಗುತ್ತದೆ ಎಂದು ತಿಳಿಸಿದರು.