ಶೀಘ್ರದಲ್ಲೇ ಹಲವು ಮುಖಂಡರು ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ. ವಲಸೆ ಹಕ್ಕಿಗಳೆಂದೇ ಕರೆಸಿಕೊಳ್ಳುವ ಅನೇಕರು ಇದೀಗ ಮತ್ತೊಂದು ಪಕ್ಷದತ್ತ ಮುಖ ಮಾಡಲು ತುದಿ ಗಾಲಲ್ಲಿ ನಿಂತಿದ್ದಾರೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಫೆ.12): ಜಿಲ್ಲೆಯಲ್ಲಿ ಪಕ್ಷಾಂತರಿಗಳು ಹಾಗೂ ವಲಸಿಗರು ಆಡಳಿತರೂಢ ಬಿಜೆಪಿ ಪಕ್ಷದತ್ತ ಹಾರಲು ಮತ್ತೊಮ್ಮೆ ಸಜ್ಜಾಗುತ್ತಿದ್ದಾರೆ.
undefined
ಈ ಮೊದಲು ಬಿಜೆಪಿ ನಾಯಕರು ಪಕ್ಷ ಸಂಘಟನೆ ಉದ್ದೇಶದಿಂದ ಆಪರೇಷನ್ ಕಮಲ ನಡೆಸುತ್ತಿದ್ದರು. ಆದರೀಗ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿರುವ ಪಕ್ಷಾಂತರಿಗಳು ಮತ್ತು ವಲಸಿಗರು ಖುದ್ಧಾಗಿ ಕಮಲ ಪಾಳಯಕ್ಕೆ ಜಿಗಿಯಲು ಸಿದ್ಧರಾಗಿದ್ದಾರೆ.
ಈಗಾಗಲೇ ಮಾಗಡಿಯಲ್ಲಿ ಎಚ್.ಎಂ.ಕೃಷ್ಣಮೂರ್ತಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾದ ಕಾಂಗ್ರೆಸ್ ಮುಖಂಡ ಶ್ರೀಕಂಠು ಅವರಿಗೆ ಸಚಿವ ಸಿ.ಪಿ.ಯೋಗೇಶ್ವರ್ ಖುದ್ದಾಗಿ ಭೇಟಿ ಮಾಡಿ ಗಾಳ ಹಾಕಿ ಬಂದಿದ್ದಾರೆ.
ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದ ಹಳ್ಳಿಹಕ್ಕಿ; ಹೊಸ ಅಸ್ತ್ರಕ್ಕೆ ಸಿಎಂ ದಂಗು
ಇನ್ನು ರಾಮಗರದಲ್ಲಿ ಆಡಳಿತರೂಢ ಪಕ್ಷದತ್ತ ಹಾರುವುದನ್ನೇ ರೂಢಿ ಮಾಡಿಕೊಂಡಿರುವ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ನಲ್ಲಿರುವ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರೊಬ್ಬರು ಸಹ ಕಮಲ ಪಾಳಯದತ್ತ ಒಲವು ತೋರಿದ್ದಾರೆ ಎನ್ನಲಾಗಿದೆ.
ಕಮಲದಲ್ಲಿ ತೀವ್ರ ವಿರೋಧ:
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಪಕ್ಷಾಂತರಿಗಳು ಹಾಗೂ ವಲಸಿಗರಿಗೆ ಬಿಜೆಪಿ ಹಕ್ಕಿ ಗೂಡಿನಂತಾಗಿರುತ್ತದೆ. ಅಧಿಕಾರದಿಂದ ಪಕ್ಷ ಕೆಳಗಿಳಿಯುತ್ತಿದ್ದಂತೆ ಪಕ್ಷಾಂತರಿಗಳು - ವಲಸಿಗರು ಮತ್ತೆ ಅನ್ಯಪಕ್ಷಗಳತ್ತ ಮುಖ ಮಾಡುತ್ತಾರೆ. ಅನ್ಯ ಪಕ್ಷಗಳಿಂದ ಬಿಜೆಪಿಗೆ ಬಂದವರಲ್ಲಿ ಹೆಚ್ಚಿನವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಅಧಿಕಾರ ಅನುಭವಿಸಲಷ್ಟೇ ಸೀಮಿತವಾಗಿದ್ದಾರೆ. 10-12 ವರ್ಷಗಳಲ್ಲಿ ನಡೆದಿರುವ ಲೋಕಸಭಾ, ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿದ್ಯಾಮಾನಗಳನ್ನು ಅವಲೋಕಿಸಿದರೆ ಇದು ಸತ್ಯವೂ ಹೌದು ಎಂಬುದು ತಿಳಿಯುತ್ತದೆ.
ಆಗ ಏನೆಲ್ಲ ಆಯ್ತು ಎಂದು ಹೇಳಲೇ: ಡಿಕೆಶಿ, ಸಿದ್ದುಗೆ ಎಚ್ಚರಿಕೆ ಕೊಟ್ಟ ಮಾಜಿ ಕಾಂಗ್ರೆಸ್ ಲೀಡರ್ .
ಜಿಲ್ಲೆಯಲ್ಲಿ ಬಿಜೆಪಿ ಅನ್ಯ ಪಕ್ಷಗಳ ಅತೃಪ್ತರಿಗೆ ಅಧಿಕಾರ ಸವಿಯುಣಿಸಿತೇ ಹೊರತು ಅವರಿಂದ ಪಕ್ಷ ಸಂಘಟನೆಯಾಗಲಿಲ್ಲ. ಚುನಾವಣೆಗೆ ಸ್ಪರ್ಧಿಸಲು ಪುಕ್ಕಟ್ಟೆಯಾಗಿ ‘ಬಿ‘ ಫಾರಂ ಸಿಗುತ್ತದೆ ಎಂದು ಬಿಜೆಪಿಗೆ ಬೇರೆ ಪಕ್ಷಗಳಿಂದ ನಾ ಮುಂದು, ತಾ ಮುಂದು ಎಂದು ಬರುತ್ತಾರೆಯೇ ಹೊರತು ಅವರಿಂದ ಸಂಘಟನೆಗೆ ಕಿಂಚಿತ್ತೂ ಉಪಯೋಗವಿಲ್ಲ.
ಇಂತಹ ಪಕ್ಷಾಂತರಿಗಳಿಂದಲೇ ಬಿಜೆಪಿ ಜಿಲ್ಲೆಯಲ್ಲಿ ಹಿಂದುಳಿದಿದೆ. ಪಕ್ಷ ಸಂಘಟನೆಗಾಗಿ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರು ಅಧಿಕಾರ ಸಿಗದಿದ್ದರೂ ದುಡಿಯುತ್ತಲೇ ಇದ್ದಾರೆ. ಅವರೆಲ್ಲರ ಪರಿಶ್ರಮದಿಂದಾಗಿಯೇ ಜೆಡಿಎಸ್-ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಕಮಲ ನಿಧಾನವಾಗಿ ಅರಳಲು ಸಾಧ್ಯವಾಗುತ್ತಿದೆ ಎಂಬುದು ಬಹುತೇಕ ಮೂಲ ಬಿಜೆಪಿಗರ ಅಭಿಪ್ರಾಯವಾಗಿದೆ.
ಈ ಕಾರಣಕ್ಕಾಗಿಯೇ ಬಿಜೆಪಿಯೊಳಗೆಯೇ ಪಕ್ಷಾಂತರಿಗಳು ಹಾಗೂ ವಲಸಿಗರ ಸೇರ್ಪಡೆಗೆ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿನ ಪ್ರಭಾವಿ ಮುಖಂಡರನ್ನು ಬಿಜೆಪಿಗೆ ಕರೆತರಲು ನಿರಂತರವಾಗಿ ಸಂಪರ್ಕದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ.
ಮತ್ತೆ ವಲಸೆ ಹಕ್ಕಿ ನಾಗರಾಜು ಬಿಜೆಪಿಯತ್ತ
ರಾಜಕಾರಣದಲ್ಲಿ ವಲಸೆ ಹಕ್ಕಿ ಎಂದೇ ಕರೆಯಲ್ಪಡುವ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಆಡಳಿತರೂಢ ಪಕ್ಷದತ್ತ ಜಿಗಿಯುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಇದೀಗ ತೆನೆ ಭಾರ ಇಳಿಸಿ ಕಮಲ ಮುಡಿಯಲು ಸನ್ನದ್ಧರಾಗಿದ್ದಾರೆ.
2008ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪಿ.ನಾಗರಾಜು ಬಿಜೆಪಿ ಸೇರಿದರು. ಆಗ ಅವರಿಗೆ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ ಕಣಕ್ಕಿಳಿಸಲಾಯಿತು. ಚುನಾವಣೆಯಲ್ಲಿ ಪರಾಭವಗೊಂಡ ಪಿ.ನಾಗರಾಜು ನಂತರ ಮಾಗಡಿ ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷರಾಗಿ, ತದನಂತರ ರಾಮನಗರಕ್ಕೆ ವಲಸೆ ಬಂದು ಇಲ್ಲಿಯೂ ತಾಲೂಕು ಅಧ್ಯಕ್ಷರಾದರು. ನಂತರದ ಬೆಳವಣಿಗೆಯಲ್ಲಿ ಕೆಎಂಎಫ್‌ಗೆ ನಾಮನಿದೇರ್ಶನ ಮಾಡಿಸಿಕೊಂಡು ಪಕ್ಷ ಸಂಘಟನೆ ಮಾಡದೆ ಬಿಜೆಪಿಗೆ ಕೈಕೊಟ್ಟು ಕೈ ಪಾಳಯ ಸೇರಿದರು. ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ಅಧಿಕಾರ ಹಂಚಿಕೆ ಸೂತ್ರದಡಿ ಕೆಎಂಎಫ್ ಅಧ್ಯಕ್ಷರಾದರೂ ಮಾತಿಗೆ ತಪ್ಪಿದರು. ಆನಂತರ ಕಾಂಗ್ರೆಸ್‌ನಿಂದ ಜೆಡಿಎಸ್ಗೆ ಜಿಗಿದರು. ಈಗ ಆಡಳಿತರೂಢ ಬಿಜೆಪಿ ಬಾಗಿಲಲ್ಲಿ ನಿಂತಿದ್ದಾರೆ.
ಸಚಿವ ಸಿ.ಪಿ.ಯೋಗೇಶ್ವರ್ ಮೂಲಕ ಕಮಲ ಪಕ್ಷ ಸೇರಲು ಪಿ.ನಾಗರಾಜು ಕಸರತ್ತು ನಡೆಸುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು ಅವರ ಸ್ವಗ್ರಾಮ ಮಾಯಗಾನಹಳ್ಳಿ ಗ್ರಾಪಂ ವರಿಷ್ಠ ಸ್ಥಾನದ ಚುನಾವಣೆಯಲ್ಲಿಯೇ ಪಿ.ನಾಗರಾಜು ತೀವ್ರ ಮುಖಭಂಗ ಅನುಭವಿಸುಂತೆ ಮಾಡಿದ್ದಾರೆ