ಕಾರ್ಗಿಲ್ ಯುದ್ಧ ಗೆದ್ದು 25 ವರ್ಷ. ಹೀಗಾಗಿಯೇ ನಾವೆಲ್ಲ ಸೇರಿ ಕಾರ್ಗಿಲ್ ಗೆದ್ದಾಯ್ತು, ಇನ್ನೀಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನಲ್ಲಿ ಬೈಕ್ ರ್‍ಯಾಲಿ ಹಾಗೂ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಬಹಿರಂಗ ಸಮಾವೇಶ ರಾಜ್ಯಾದ್ಯಂತ ಮಾಡುತ್ತಿದ್ದೇವೆ.
ಸವಣೂರು (ಆ.02): ಕಾರ್ಗಿಲ್ ಯುದ್ಧ ಗೆದ್ದು 25 ವರ್ಷ. ಹೀಗಾಗಿಯೇ ನಾವೆಲ್ಲ ಸೇರಿ ಕಾರ್ಗಿಲ್ ಗೆದ್ದಾಯ್ತು, ಇನ್ನೀಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನಲ್ಲಿ ಬೈಕ್ ರ್‍ಯಾಲಿ ಹಾಗೂ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಬಹಿರಂಗ ಸಮಾವೇಶ ರಾಜ್ಯಾದ್ಯಂತ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ನಮ್ಮ ಸೈನಿಕರ ಸಾಹಸಕ್ಕೆ, ತ್ಯಾಗ ಬಲಿದಾನಗಳಿಗೆ ನಮ್ಮದೊಂದು ಗೌರವವನ್ನು ಸಲ್ಲಿಸೋಣ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಸವಣೂರು ಪಟ್ಟಣದ ದಂಡಿನ ಪೇಟೆಯ ದೇವಸ್ಥಾನದ ಮುಂಭಾಗದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯದ 25ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಶೀರ್ಷಿಕೆಯಡಿ ಉಪನ್ಯಾಸ ಹಾಗೂ ವಚನ ದರ್ಶನ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗದಗದ ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ವಚನ ದರ್ಶನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಜಗತ್ತಿನ 46 ರಾಷ್ಟ್ರಗಳಲ್ಲಿ ಭಾರತ ದೇಶದ ಪ್ರಾಚೀನ ಸಾರ್ವಭೌಮತ್ವದ ಕುರುಹುಗಳು ಕಾಣಸಿಗುತ್ತವೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಿಲ್ಲಿಸದಿದ್ದರೆ ಉಗ್ರ ಹೋರಾಟ: ಮಾಜಿ ಸಚಿವ ಆರ್.ಶಂಕರ್
ಸಾಂಸ್ಕೃತಿಕ ಸಾರ್ವಭೌಮತ್ವ ಗಳಿಸಿದ ಭಾರತ ಇಂದು ಸ್ವಾರ್ಥದ ನಡುವೆ ಜಾತಿಗಳ ನಡುವೆ ಕಳೆದು ಹೋಗಿದೆ. ಮಳೆ ಇದ್ದರೂ ಕೂಡಾ 25 ವರ್ಷದ ಹಿಂದೆ ಈ ದೇಶವನ್ನು ಉಳಿಸಿಲು ನಮ್ಮ ಸೈನಿಕರು ತಮ್ಮ ಅಮೂಲ್ಯ ಜೀವವನ್ನು ಮುಡಿಪಾಗಿಟ್ಟ ಯುದ್ಧದ ಕಥನವನ್ನು ಕೇಳಲು ಆಗಮಿಸಿರುವ ಪ್ರೇಕ್ಷರರು ನಿಜವಾದ ದೇಶ ಭಕ್ತರು ಎಂದರು. ನಿಜವಾಗಿಯೂ ಭಾರತಕ್ಕೆ ಶಕ್ತಿ ಇದೆ. ಆಂತರಿಕವಾಗಿ ಭಾರತವನ್ನು ಹಾಳು ಮಾಡುವ ಪ್ರಯೋಗಗಳು ಬಹಳ ನಡೆದಿವೆ. ಅದನ್ನು ಸರಿಪಡಿಸುವ ವಿಶೇಷ ಪ್ರಯೋಗ ವಚನ ದರ್ಶನ ಪುಸ್ತಕದಲ್ಲಿದೆ ಎಂದರು.
ಸುಬೇದಾರ ಮೆ. ಚಂದ್ರಶೇಖರ ಬೆಳಗಲಿ, ಯುವಾ ಬ್ರಿಗೇಡ್ ಅಮೃತಕುಂಭ ಸಂಚಾಲಕ ಕಿರಣರಾಮ್ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಯೋಧರಾದ ಎಂ.ಪಿ. ಚರಂತಿಮಠ, ಬಸವಣ್ಣಪ್ಪ ಹೊಂಬಳಿ, ಗಣಪತಿ ಉಪ್ಪಾರ, ಕೆ.ಆರ್. ಮುಂದಿನಮನಿ, ಎಚ್.ಎನ್. ಪಾಟೀಲ, ಮಂಜುನಾಥ ಅಣ್ಣಿಗೇರಿ, ಸಿದ್ದಪ್ಪ ಅಂಗಡಿ, ಸುರೇಶ ದೇಸಾಯಿ, ಶರಣಪ್ಪ ಹುಬ್ಬಳ್ಳಿ, ಸಿ.ಎಸ್. ಕುಲಕರ್ಣಿ ಹಾಗೂ ಗದಿಗೆಪ್ಪ ಹುಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು.
ಒಳ ಮೀಸಲಾತಿ: ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ: ಸಂಸದ ಗೋವಿಂದ ಕಾರಜೋಳ
ಯುವಾ ಬ್ರಿಗೇಡ್ ಸವಣೂರಿನ ಪದಾಧಿಕಾರಿಗಳಾದ ಅಕ್ಷಯ ಕಲಾಲ, ಪ್ರವೀಣ ಚರಂತಿಮಠ, ಮಹೇಶ ಮುದಗಲ್, ಶ್ರೀಶೈಲ್ ತೆಗ್ಗಿಹಳ್ಳಿ, ವಿನಾಯಕ ಕುಲಕರ್ಣಿ, ಸಂತೋಷಗೌಡ ಕೆಂಚಣ್ಣನಗೌಡ್ರ, ರಾಜು ಮುಳಗುಂದ, ಶ್ರೀನಿವಾಸ ಗಿತ್ತೆ, ಮಾಲತೇಶ ರಾಗಿ, ಪ್ರದೀಪ ತೆಂಬದಮನಿ, ಸಚಿನ್ ಕಲಾಲ್, ಕುಮಾರ ಬೆನ್ನೂರ, ಈರಣ್ಣ ಶಿಗ್ಗಾಂವಿ ಹಾಗೂ ಇತರರು ಪಾಲ್ಗೊಂಡಿದ್ದರು. ಪತ್ರಕರ್ತ ಕಿರಣಕುಮಾರ ವಿವೇಕವಂಶಿ ಕಾರ್ಯಕ್ರಮ ನಿರ್ವಹಿಸಿದರೆ, ಪ್ರವೀಣ ಬಾಲೇಹೊಸೂರ ಸ್ವಾಗತಿಸಿದರು.