ಭಾರೀ ಹಿಮಪಾತ: ಕಾಶ್ಮೀರದಲ್ಲಿ ಸಿಕ್ಕು ಕನ್ನಡಿಗರ ಪರದಾಟ

By Kannadaprabha News  |  First Published Mar 13, 2021, 2:25 PM IST

ಹೊಸ​ಪೇಟೆ, ಹುಬ್ಬಳ್ಳಿ ಮೂಲದ 10 ಮಂದಿ ಅತಂತ್ರ| ಆಕ್ಸಿಜನ್‌ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸಿಗರು| ಕಾಶ್ಮೀರದಲ್ಲಿ ಮೂರು ದಿನಗಳಿಂದ ವಿಪರೀತ ಚಳಿ| ಹೋಟೆಲ್‌ನ ಹೊರಗಡೆ ಭಾರೀ ಗಾತ್ರದ ಹಿಮದ ರಾಶಿ ಸಂಗ್ರಹ| 


ಹೊಸ​ಪೇಟೆ/ಹುಬ್ಬಳ್ಳಿ(ಮಾ.13): ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದ ಹೊಸಪೇಟೆ ಹಾಗೂ ಹುಬ್ಬಳ್ಳಿ ಮೂಲದ 10 ಮಂದಿ ಹಿಮಪಾತದ ಪರಿಣಾಮ ಮೂರು ದಿನಗಳಿಂದ ಹೋಟೆಲ್‌ ಕೊಠಡಿಯೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಆಕ್ಸಿಜನ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ನಗರದ ಬಳ್ಳಾರಿ ರಸ್ತೆ ಭುವನೇಶ್ವರಿ ನಗರದ ನಿವಾಸಿ ಪ್ರಕಾಶ್‌ ಮೆಹರವಾಡಿ ಮತ್ತು ಅವರ ಪತ್ನಿ ಸುಧಾ ಮೆಹರವಾಡಿ ಸೇರಿ ಹುಬ್ಬಳ್ಳಿ ಮೂಲದ ಆನಂದ ಬಸವ, ವಂದನಾ ಬಸವ, ವೆಂಕಟೇಶ್‌ ದಲಬಂಜನ್‌, ಪ್ರೀತಿ ದಲಂಬಜನ್‌, ಮಂಜು ಬದ್ದಿ, ಗೀತಾ ಬದ್ದಿ, ಗೋಪಾಲ ಕಲ್ಬುರ್ಗಿ, ವೀಣಾ ಕಲ್ಬುರ್ಗಿ ಮತ್ತಿತರರು ಕಾಶ್ಮೀರದಲ್ಲಿ ಸಿಕ್ಕಿಹಾಕಿಕೊಂಡಿರುವವರು. ಮಾ.5ರಂದು ಇವರು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಕಾಶ್ಮೀರದ ಸೋನಾಮಾರ್ಗದ ಹೋಟೆಲ್‌ನ ಕೊಠಡಿಯಲ್ಲಿ ಬುಧವಾರದಿಂದ ಸಿಕ್ಕಿ ಹಾಕಿಕೊಂಡಿದ್ದಾರೆ. 

Tap to resize

Latest Videos

ಕುರುವತ್ತಿ ಬಸವೇಶ್ವರ ಜಾತ್ರೆಗೆ ಕಾಡಿದ ಕೊರೋನಾ: ಭಕ್ತರನ್ನು ತಡೆಯಲು ಚೆಕ್‌ ಪೋಸ್ಟ್‌ ನಿರ್ಮಾಣ

ಮೂರು ದಿನಗಳಿಂದ ವಿಪರೀತ ಚಳಿಯಿಂದ ಆರೋಗ್ಯ ಸಮಸ್ಯೆ ಎದುರಾಗಿದೆ. ವಿದ್ಯುತ್‌ ಸಂಪರ್ಕ ಕಡಿತವಾಗಿ ಆಕ್ಸಿಜನ್‌ ಕೊರತೆ ಕಾಡುತ್ತಿದೆ. ಹೋಟೆಲ್‌ನ ಹೊರಗಡೆ ಭಾರೀ ಗಾತ್ರದ ಹಿಮದ ರಾಶಿಯೇ ಸಂಗ್ರಹವಾಗಿರುವುದರಿಂದ ಎಲ್ಲೂ ಹೋಗಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಆನಂದ್‌ ಸಿಂಗ್‌ರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿರುವ ಅವರು, ಮರಳಿ ಊರಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಸಚಿವರು, ಅವರಿಗೆ ಧೈರ್ಯ ತುಂಬಿ, ನೆರವು ನೀಡುವ ಭರವಸೆ ನೀಡಿದ್ದಾರೆ.
 

click me!