ಮೋದಿ ಮತ್ತೆ ಪ್ರಧಾನಿಯಾಗಲೆಂದು ಬಾಗಲಕೋಟೆಯಿಂದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ಕನ್ನಡಿಗ

By Sathish Kumar KH  |  First Published May 30, 2024, 5:54 PM IST

ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲೆಂದು ಹರಕೆಯೊತ್ತ ಯುವಕ ಮುತ್ತು ಬಾಗಲಕೋಟೆಯಿಂದ ಅಯೋಧ್ಯವರೆಗೆ ಪಾದಯಾತ್ರೆ ಮಾಡಿದ್ದಾನೆ.


ಬಾಗಲಕೋಟೆ (ಮೇ 30): ದೇಶದಲ್ಲಿ ನರೇಂದ್ರ ಮೋದಿ 3ನೇ ಬಾರಿಗೆ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲೆಂಬ ಹರಕೆಯನ್ನು ಹೊತ್ತು ಬಾಗಲಕೋಟೆ ಯುವಕನೊಬ್ಬ ಜಿಲ್ಲೆಯ ಇಳಕಲ್‌ನಿಂದ ಅಯೋಧ್ಯೆವರೆಗೆ ಪಾದಯಾತ್ರೆ ಮಾಡಿದ್ದಾರೆ. ಸುಮಾರು 2 ತಿಂಗಳ ಬಳಿಕ ಅಯೋಧ್ಯೆ ತಲುಪಿ ಮೋದಿ ಪ್ರಧಾನಿಯಾಗುವ ಬಗ್ಗೆ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾನೆ.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಹರಕೆ ಹೊತ್ತ ಶ್ರೀ ರಾಮ ಭಕ್ತ ಹರಕೆ ಹೊತ್ತಿದ್ದಾನೆ. ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದ ಮುತ್ತು ಕರಮುಡಿ ಎನ್ನುವ ಯುವಕ ಬಾಗಲಕೋಟೆ ಜಿಲ್ಲೆಯಿಂದ ಅಯೋಧ್ಯೆಗೆ ಕಾಲ್ನಡಿಗೆ ನಡೆಸಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಏ.1ನೇ ತಾರೀಖಿನಂದು ಬಾಗಲಕೋಟೆಯಿಂದ ಕಾಲ್ನಡಿಗೆ ಆರಂಭಿಸಿದ್ದ ಮುತ್ತು ಅಂದಾಜು 2,000 ಕಿ.ಮೀ. ಕಾಲ್ನಡಿಗೆ ನಡೆಸಿದ್ದಾನೆ. ಏಪ್ರಿಲ್‌ 1ರಂದು ಇಳಕಲ್ ಪಟ್ಟಣದಿಂದ ಆಂಜನೇಯ ದೇವಸ್ಥಾನದಲ್ಲಿ ಕೈ ಮುಗಿದು ಪಾದಯಾತ್ರೆ ಆರಂಭಿಸಿದ್ದಾನೆ. 

Tap to resize

Latest Videos

undefined

ದೇಶದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದರೆ ಕಾಲ್ನಡಿಗೆಯಲ್ಲೇ ಹೋಗುವ ಹರಕೆ ಹೊತ್ತುಕೊಂಡಿದ್ದನು. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಅದನ್ನು ಉದ್ಘಾಟನೆಯನ್ನೂ ಮಾಡಿದರು. ಇನ್ನು ರಾಮಮಂದಿರ ನಿರ್ಮಾಣದ ಸಂಕಲ್ಪ ಈಡೇರಿಸಿದ ನರೇಂದ್ರ ಮೋದಿ ಅವರು ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಹರಕೆ ಹೊತ್ತುಕೊಂಡು ಪಾದಯಾತ್ರೆಗೆ ಆರಂಭಿಸಿದ್ದನು. ಪಾದಯಾತ್ರೆಯನ್ನು ಇಲಕಲ್ ಪಟ್ಟಣದಿಂದ ಆರಂಭಿಸಿ ಬಾಗಲಕೋಟೆ ಮಾರ್ಗವಾಗಿ ಫಂಡರಾಪೂರ, ತುಳಜಾಪೂರ, ನಾಂದೇಡ, ರೇವಾ, ಪ್ರಯಾಗ ರಾಜ್ ಮಾರ್ಗವಾಗಿ ಶ್ರೀರಾಮ ಜನ್ಮಭೂಮಿ ಅಯೋಧ್ಯೆ ನಗರಕ್ಕೆ ತಲುಪಿದ್ದಾನೆ.

ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನೂ ಆಗಿರುವ ಮುತ್ತು ಪ್ರತಿನಿತ್ಯ 40 ರಿಂದ 60 ಕಿ.ಮೀ. ಪಾದಯಾತ್ರೆ ಮಾಡಿದ್ದಾನೆ. ಇನ್ನು ನಿತ್ಯದ ಆಹಾರಕ್ಕಾಗಿ ಯಾವುದೇ ಸಾಮಾಗ್ರಿಗಳನ್ನು ಕೊಂಡೊಯ್ಯದೇ ದಾರಿಯುದ್ದಕ್ಕೂ ಜನರಿಂದಲೇ ಸ್ವೀಕರಿಸಿದ ಆಹಾರವನ್ನು ಸೇವಿಸುತ್ತಾ ಪಾದಯಾತ್ರೆ ಮುಂದುವರೆಸಿದ್ದಾನೆ. ಇನ್ನು ಪಾದಯಾತ್ರೆ ಸಮಯದಲ್ಲಿ ಕೆಲವರು ಸ್ವಯಂ ಪ್ರೇರಿತವಾಗಿ ಅನ್ನ, ಆಹಾರ, ವಾಸ್ತವ್ಯ ವ್ಯವಸ್ಥೆ ಮಾಡಿದ್ದಾರೆ. ಜನರು ನೀಡುವ ಆಹಾರ ಸೇವಿಸಿದ್ದನು.

ಯುವಕ ಮುತ್ತು ಹೊಲ ಮನೆ ಕೆಲಸ ಮಾಡಿಕೊಂಡಿರುವ ಅಪ್ಪಟ ರಾಮಭಕ್ತನಾಗಿದ್ದಾನೆ. ಸದ್ಯ ದೇಶದಲ್ಲಿ ಚುನಾವಣೆ ಹಿನ್ನೆಲೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಹರಕೆ ಹೊತ್ತುಕೊಂಡಿದ್ದನು. ಇತ್ತ ರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಪಾದಯಾತ್ರೆ ಹೋಗಿದ್ದಾನೆ. ಇಲಕಲ್ ಮತ್ತು ಬಂಡರಗಲ್ ಗ್ರಾಮಸ್ಥರು ಕೂಡ ಮುತ್ತುಗೆ ಬೆಂಬಲ ನೀಡಿದ್ದಾರೆ. ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ, ರಾಜ್ಯಕ್ಕೆ ಯೋಗಿಯಂತಹ ಸಿಎಂ ಬೇಕೆಂಬ ಕನಸು ಹೊತ್ತಿರುವುದಾಗಿ ಯುವಕ ಮುತ್ತು ಹೇಳಿದ್ದಾನೆ.

click me!