ಹಾವೇರಿ ಅಕ್ಷರ ಜಾತ್ರೆ: ಐತಿಹಾಸಿಕ ಏಲಕ್ಕಿ ಮಾಲೆ ಖರೀದಿಗೆ ಮನಸು ಮಾಡದ ಜಿಲ್ಲಾಡಳಿತ!

By Ravi Janekal  |  First Published Dec 28, 2022, 11:48 PM IST

ಸಂತ ಶರಣರ ನಾಡು,  ಏಲಕ್ಕಿ ಕಂಪಿನ ನಗರ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಹಬ್ಬದ ವಾತಾವರಣ. ನುಡಿ ಜಾತ್ರೆಗೆ  ಎಲ್ಲ ರೀತಿಯ ಸಿದ್ದತೆಗಳು ವೇಗ ಪಡೆದುಕೊಂಡಿವೆ. ಈ ಮಧ್ಯೆ ಸಾಹಿತ್ಯ ಸಮ್ಮೇಳನಕ್ಕೆ ಕೊರಳೇರಲು ಏಲಕ್ಕಿ ಮಾಲೆಗಳು ಜಬರ್ದಸ್ತ್ ರೆಡಿಯಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಐತಿಹಾಸಿಕ ಏಲಕ್ಕಿ ಮಾಲೆ ಖರೀದಿಗೆ ಮನಸ್ಸು ತೋರಿಲ್ಲ


ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ (ಡಿ.28) : ಸಂತ ಶರಣರ ನಾಡು,  ಏಲಕ್ಕಿ ಕಂಪಿನ ನಗರ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಹಬ್ಬದ ವಾತಾವರಣ. ನುಡಿ ಜಾತ್ರೆಗೆ  ಎಲ್ಲ ರೀತಿಯ ಸಿದ್ದತೆಗಳು ವೇಗ ಪಡೆದುಕೊಂಡಿವೆ. ಈ ಮಧ್ಯೆ ಸಾಹಿತ್ಯ ಸಮ್ಮೇಳನಕ್ಕೆ ಕೊರಳೇರಲು ಏಲಕ್ಕಿ ಮಾಲೆಗಳು ಜಬರ್ದಸ್ತ್ ರೆಡಿಯಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಐತಿಹಾಸಿಕ ಏಲಕ್ಕಿ ಮಾಲೆ ಖರೀದಿಗೆ ಮನಸ್ಸು ತೋರಿಲ್ಲ

Tap to resize

Latest Videos

undefined

ಕನಕದಾಸರ ನೆಲೆ, ಶಿಶುನಾಳ ಷರೀಪರ ಪುಣ್ಯಭೂಮಿ, ಸರ್ವಜ್ಞ ಕವಿಯ ತವರೂರು ಹಾವೇರಿ(Haveri) ಜಿಲ್ಲೆ ಅಕ್ಷರ ಜಾತ್ರೆಗೆ ಸಿದ್ದವಾಗ್ತಿದೆ. 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ(kannada sahitya sammelana) ಇದೇ ಜನವರಿ 6,7 ಮತ್ತು 8 ರಂದು ನಡೆಯಲಿದೆ. ಇದೇ ಪ್ರಥಮ ಬಾರಿಗೆ ಹಾವೇರಿ ನಗರದಲ್ಲಿ ಸಮ್ಮೇಳನ ನಡೆಯುತ್ತಿರುವುದು ಏಲಕ್ಕಿ ಮಾಲೆ(Cardamom garland) ತಯಾರಕರೂ ಖುಷಿಯಾಗಿದ್ದಾರೆ. ಸಾಹಿತಿಗಳು, ಮಠಾಧೀಶರು, ಜನಪ್ರತಿನಿಧಿಗಳ ಕೊರಳನ್ನೇರಲು ಏಲಕ್ಕಿ ಮಾಲೆಗಳು ಸಿದ್ದವಾಗುತ್ತಿವೆ. ಹಾವೇರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಟವೇಗಾರ ಕುಟುಂಬ(patavegar family) ಏಲಕ್ಕಿ ಮಾಲೆಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆ

Kannada sahitya sammelana: 28ರಂದು ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನ

ಮುಂಬೈ, ಸಕಲೇಶಪುರ, ತಮಿಳುನಾಡಿನಿಂದ ಸಾಮಗ್ರಿ ತರಿಸಿಕೊಂಡು ಮಾಲೆ ಮಾಡುವ ಕಾಯಕದಲ್ಲಿ ತೊಡಗಿದೆ ಪಟವೇಗಾರ ಕುಟುಂಬ.ಕುಟುಂಬದ 5 ಸದಸ್ಯರು ಏಲಕ್ಕಿ ಮಾಲೆ ತಯಾರಿಕೆ ಮಾಡ್ತಾರೆ. ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ(Jawaharlal Nehru)ರವರ ಕೊರಳು ಅಲಂಕರಿಸಿದ ಇತಿಹಾಸ ಈ ಏಲಕ್ಕಿ ಮಾಲೆಗಳಿಗಿದೆ. ಹಾವೇರಿಯ ಸ್ವಾತಂತ್ರ್ಯ ಹೋರಾಟಗಾರ(freedom fighter) ಹೊಸಮನಿ ಸಿದ್ದಪ್ಪ(Hosamani siddappa)ನವರು ನೆಹರೂರವರ ಕೊರಳಿಗೆ ಈ ಏಲಕ್ಕಿ ಮಾಲೆ ಹಾಕಿ ಸನ್ಮಾನಿಸಿದ್ದರಂತೆ.

ಶುಭ ಸಮಾರಂಭಗಳಲ್ಲಿ ಏಲಕ್ಕಿ ಮಾಲೆ ಬಳಸಲಾಗುತ್ತದೆ. ಹಾವೇರಿಯ ಏಲಕ್ಕಿ ಮಾಲೆಗಳ ಕಂಪು ದೇಶ ವಿದೇಶಗಳಲ್ಲೂ ಹರಡಿದೆ. ಕಳೆದ ಕೆಲ ದಿನಗಳಿಂದ ಬ್ರಿಟನ್ ಪ್ರಧಾನಿ ರಿಷಿ ಸುನಕ್(britain prime minister Rishi Sunak) ಕೊರಳನ್ನು ಸಹ ಹಾವೇರಿ ಏಲಕ್ಕಿ ಮಾಲೆ ಅಲಂಕರಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ(President Draupadi Murma) ಕೊರಳನ್ನು ಸಹ ಹಾವೇರಿ ಏಲಕ್ಕಿ ಮಾಲೆ ಅಲಂಕರಿಸಿರುವುದು ಇಲ್ಲಿನ ಏಲಕ್ಕಿ ಮಾಲೆ ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಸೇರಿದಂತೆ ಅತಿಗಣ್ಯ ವ್ಯಕ್ತಿಗಳನ್ನು ಹಾವೇರಿಯ ಏಲಕ್ಕಿ ಮಾಲೆ ತಲುಪಿರುವುದು ಜಿಲ್ಲೆ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಆದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲೇ ನಡೆದರೂ ಇದುವರೆಗೂ ಏಲಕ್ಕಿ ಮಾಲೆ ತಯಾರಕರಿಗೆ ಹಾವೇರಿ ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ ಪ್ರೋತ್ಸಾಹವೇ ಸಿಕ್ಕಿಲ್ಲ. ಈ ಕುರಿತು ತಮ್ಮ ಬೇಸರ ಹೊರ ಹಾಕ್ತಾರೆ  ಮಾಲೆ ತಯಾರಕರಾದ ಉಸ್ಕಾನ್ ಸಾಬ್ ಪಟವೇಗಾರ(Uscon Saab Patavegara).

ಹಾವೇರಿಯಲ್ಲಿ ಬೆರಳೆಣಿಕೆಯ ಕುಟುಂಬಗಳು ಮಾತ್ರ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ. ಅದರಲ್ಲಿ ಪಟವೇಗಾರ ಕುಟುಂಬ ಕಳೆದ ಒಂದು ಶತಮಾನದಿಂದ ಏಲಕ್ಕಿ ಮಾಲೆ ತಯಾರಿಸುತ್ತಿದ್ದು, ಪ್ರಸಿದ್ಧಿ ಪಡೆದಿದೆ. ಆದರೆ ನುಡಿ ಜಾತ್ರೆಗೆ ಇದುವರೆಗೂ ಯಾವುದೇ ಆರ್ಡರ್ ಬಂದಿಲ್ಲ. ಹೊರ ದೇಶಗಳಿಗೆ ರಪ್ತಾಗುವ ಏಲಕ್ಕಿ ಮಾಲೆಗಳು  ಕನ್ನಡ ಸಾಹಿತ್ಯ ಸಮ್ಮೇಳನಕ್ಕೇ ಖರೀದಿಸೋರಿಲ್ಲ ಅಂದರೆ ಹೇಗೆ ಅಂತಾರೆ ಮಾಲೆ ತಯಾರಕ ಹೈದರ್ ಅಲಿ.

Kannada Sahitya Sammelana: ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ 33 ಗೋಷ್ಠಿಗಳು

ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನ ಏಲಕ್ಕಿ ಮಾಲೆ ಖರೀದಿ ಮಾಡ್ತಿದ್ದಾರೆ. ಸಮ್ಮೇಳನಕ್ಕೆ ಇಂತಿಷ್ಟು ಏಲಕ್ಕಿ ಮಾಲೆ ಬೇಕು ಎಂಬ ಬೇಡಿಕೆ ಸಲ್ಲಿಸದೇ ಜಿಲ್ಲಾಡಳಿತ, ಕಸಾಪ ನಿರ್ಲಕ್ಷ್ಯ ಮಾಡಿದೆ. ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಬರೋ ಗಣ್ಯರಿಗೆ ಏಲಕ್ಕಿ ಕಂಪು ಮೂಗಿಗೆ ತಾಗದಿದ್ದರೆ ಹೇಗೆ? ಎಂಬ ಚರ್ಚೆ  ಹಾಗೂ ಬೇಸರ ಏಲಕ್ಕಿ ಮಾಲೆ ತಯಾರಿಸುತ್ತಿರುವ  ವ್ಯಾಪಾರಿಗಳದ್ದಾಗಿದೆ. 

click me!