ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ, ಮಹೇಶ್ ಜೋಶಿ ಆಕ್ರೋಶ..!

By Suvarna News  |  First Published Mar 31, 2022, 10:11 PM IST

⦁ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ ವಿಚಾರ..!
⦁ ವಿಜಯಪುರ ಕ.ಸಾ.ಪ ಜಿಲ್ಲಾಧ್ಯಕ್ಷನಿಗೆ ಪತ್ರದ ಮೂಲಕ ರಾಜ್ಯಾಧ್ಯಕ್ಷರ ಲೆಫ್ಟ್-ರೈಟ್‌..!
⦁ ಕಸಾಪ ಜಿಲ್ಲಾಧ್ಯಕ್ಷನ ಮರಾಠಿ ಪ್ರೇಮಕ್ಕೆ ನಾಡೋಜ ಡಾ. ಮಹೇಶ ಜೋಶಿ ಆಕ್ರೋಶ..!
⦁ ಸಮ್ಮೇಳನದ ವೇದಿಕೆ ಮೇಲೆ ಮುಖಂಡ ಎದುರಲ್ಲೆ ವಿಜೃಂಭಿಸಿದ್ದ ಮರಾಠಿ ನೃತ್ಯ..!


ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ (ಮಾರ್ಚ್31) : ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ ಆಯೋಜಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಕಸಾಪ ಜಿಲ್ಲಾಧ್ಯಕ್ಷನಿಗೆ ನಾಡೋಜ ಡಾ. ಮಹೇಶ ಜೋಶಿ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮ್ಮೇಳನ ವೇದಿಕೆಯಲ್ಲೆ ಅದ್ರಲ್ಲು ಮುಖಂಡರ ಎದುರೇ ಮರಾಠಿ ನೃತ್ಯ ನಡೆದಿರೋದನ್ನ ಡಾ. ಮಹೇಶ ಜೋಶಿ ಖಂಡಿಸಿದ್ದಾರೆ. ಪತ್ರದ ಪ್ರತಿ ವಾಕ್ಯಗಳಲ್ಲು ಕನ್ನಡ ಸಮ್ಮೇಳನದಲ್ಲಿ ಮರಾಠಿ ಭಾಷೆ ವಿಜೃಂಭಿಸಲು ಕಾರಣರಾದವರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ..

Tap to resize

Latest Videos

undefined

ಕಸಾಪ ಜಲ್ಲಾಧ್ಯಕ್ಷನಿಗೆ ರಾಜ್ಯಾಧ್ಯಕ್ಷರ ಲೆಫ್ಟ್‌-ರೈಟ್..!‌


ಕಳೆದ ಮಾ. 26,27 ರಂದು ವಿಜಯಪುರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಭಾಷೆ ವಿಜೃಂಭಿಸಿತ್ತು. ಕನ್ನಡ ಸಮ್ಮೇಳನದ ವೇದಿಕೆ ಮೇಲೆ ಜಿಲ್ಲಾಧ್ಯಕ್ಷ ಹಾಸಿಂ ಪೀರ್‌ ವಾಲಿಕಾರರ ಮರಾಠಿ ಭಾಷೆ  ಪ್ರೇಮ ಉಕ್ಕಿ ಹರಿದಿತ್ತು. ಬಳಿಕ ಈ ಘಟನೆಗೆ ಕನ್ನಡಿಗರು ಆಕ್ರೋಶ ಹೊರಹಾಕಿದ್ರು.

Vijayapura: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಕ್ಕಿ ಹರಿದ ಮರಾಠಿ ಪ್ರೇಮ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವೆಬ್‌ ನಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಈಗ ಸ್ವತಃ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಇಡೀ ಘಟನೆಯನ್ನ ಖಂಡಿಸಿ ಜಿಲ್ಲಾಧ್ಯಕ್ಷ ಹಾಸಿಂ ಪೀರ್ ವಾಲಿಕಾರ್‌ ಗೆ ಪತ್ರ ಬರೆದಿದ್ದಾರೆ. ಪತ್ರದ ಉದ್ದಕ್ಕು ತಮ್ಮ ಅಸಮಧಾನ ಹೊರ ಹಾಕಿರುವ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮ್ಮೇಳನ ವೇದಿಕೆಯ ಮೇಲೆ ಮರಾಠಿ ನೃತ್ಯ ನಡೆಯುತ್ತಿದ್ದರೇ ಅದನ್ನ ತಡೆಯಲು ವೇದಿಕೆ ಮೇಲಿದ್ದ ಯಾವೊಬ್ಬ ಮುಖಂಡನು ಮುಂದಾಗಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ. ವಾಟ್ಸಾಪ್‌, ಪೇಸ್ಬುಕ್‌ ಗಳಲ್ಲಿ ವಿಡಿಯೋ ವೀಕ್ಷಣೆ ಮಾಡಿದ್ದೇನೆ ಇದು ಪರಿಷತ್ತಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ ಎಂದು ನಾಡೋಜ ಮಹೇಶ ಜೋಶಿ ಕಿಡಿಕಿಡಿಯಾಗಿದ್ದಾರೆ..

ಶತಮಾನದಲ್ಲೆ ಪರಿಷತ್ತಿಗೆ ಕಪ್ಪು ಚುಕ್ಕೆ ಇದು..!


ಇನ್ನು ಕನ್ನಡ ಸಮ್ಮೇಳನದಲ್ಲಿ ಮರಾಠಿ ವಿಜೃಂಭಿಸಲು ಅವಕಾಶ ಮಾಡಿಕೊಟ್ಟ ಜಿಲ್ಲಾಧ್ಯಕ್ಷ ಹಾಸಿಂ ಪೀರ್‌ ವಾಲಿಕಾರ್‌ ವಿರುದ್ಧ ಪತ್ರದಲ್ಲಿ ತೀವ್ರ ಆಕ್ರೋಶ ಹೊರ ಹಾಕಿರುವ ನಾಡೋಜ ಮಹೇಶ್‌ ಜೋಶಿ ಶತಮಾನದಲ್ಲೆ ಇದೊಂದು ಕಪ್ಪು ಚುಕ್ಕೆ ಎಂದಿದ್ದಾರೆ. ಪರಿಷತ್ತಿಗೆ ಶತಮಾನಗಳ ಇತಿಹಾಸವಿದೆ. ಹಿಂದೆಂದು ಹೀಗೆ ಆಗಿರಲಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮರಾಠಿ ನೃತ್ಯ ಆಯೋಜನೆ ಮಾಡಿದ್ದು ಪರಿಷತ್ತಿನ ಶತಮಾನದ ಇತಿಹಾಸದಲ್ಲೆ ಇದೊಂದು ಕಪ್ಪು ಚುಕ್ಕೆ ಎಂದು ನಾಡೋಜ ಡಾ. ಮಹೇಶ ಜೋಶಿ ತಮ್ಮ ಅಸಮಧಾನ ಹೊರಹಾಕಿದ್ದಾರೆ..

ತಕ್ಷಣವೇ ಮಾಧ್ಯಮಗಳ ಎದುರು ವಿಷಾದ
ಈ ಘಟನೆ ನಡೆದು ನಾಲ್ಕು ದಿನಗಳು ಕಳೆದರು ಯಡವಟ್ಟಿಗೆ ಕಾರಣರಾದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ್‌ ವಾಲಿಕಾರ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜೊತೆಗೆ ಪತ್ರಿಕಾ ಪ್ರಕಟಣೆ ಮೂಲಕವು ವಿಷಾದ ವ್ಯಕ್ತ ಪಡೆಸಿರಲಿಲ್ಲ. ಕನಿಷ್ಠ ಪಕ್ಷ ಪಾಪಪ್ರಜ್ಞೆಯನ್ನು ಸಹ ಪ್ರದರ್ಶನ ಮಾಡಿರಲಿಲ್ಲ. ಇದರಿಂದ ಬೇಜಾರಾದ ರಾಜ್ಯಾಧ್ಯಕ್ಷ ನಾಡೋಜ ಮಹೇಶ್‌ ಜೋಶಿ ತಕ್ಷಣವೇ ಮಾಧ್ಯಮಗಳ ಎದುರು ವಿಷಾದ ವ್ಯಕ್ತಪಡೆಸುವಂತೆ ಎಚ್ಚರಿಸಿದ್ದಾರೆ.

ಘಟನೆಯ ಸುದೀರ್ಘ ಮಾಹಿತಿ ಕೇಳಿದ ರಾಜ್ಯಾಧ್ಯಕ್ಷರು..!
ಇಡೀ ಘಟನಾವಳಿ ಕುರಿತಂತೆ ತತ್‌ಕ್ಷಣವೇ ಸುದೀರ್ಘ ಮಾಹಿತಿ ನೀಡುವಂತೆ ರಾಜ್ಯಾಧ್ಯಕ್ಷರು ಪತ್ರದಲ್ಲಿ ತಾಕೀತು ಮಾಡಿದ್ದಾರೆ. ಘಟನೆ ನಡೆದು ನಾಲ್ಕು ದಿನ ಕಳೆದರು ಕನಿಷ್ಟ ತಪ್ಪಿನ ಅರಿವು ಮಾಡಿಕೊಳ್ಳದ ಜಿಲ್ಲಾಧ್ಯಕ್ಷರಿಗೆ ಈ ಮೂಲಕ ಲೆಫ್ಟ್‌ ರೈಟ್‌ ತೆಗೆದುಕೊಂಡಿದ್ದಾರೆ. ಅಲ್ಲದೆ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ನಡೆಸುವ ದೌರ್ಜನ್ಯದ ಅರಿವಾದ್ರು ಇದೇಯಾ ಎಂದು ಹಾಸಿಂಪೀರ್‌ ವಾಲಿಕಾರ್ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ..

ಮರಾಠಿ ಕುಣಿತಕ್ಕೆ ಕಸಾಪ ಅಧ್ಯಕ್ಷ ಚಪ್ಪಾಳೆ ತಟ್ಟಿದ್ದೆ ತಟ್ಟಿದ್ದು..!!
ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಮರಾಠಿ ಮೆರೆಯಲು ಅನುವು ಮಾಡಿಕೊಟ್ಟ ಜಿಲ್ಲಾಧ್ಯಕ್ಷನ ಮೇಲೆ ಸ್ವತಃ ರಾಜ್ಯಾಧ್ಯಕ್ಷರು ಈ ಮಟ್ಟಿಗೆ ಆಕ್ರೋಶ ಹೊರಹಾಕೊದಕ್ಕು ಕಾರಣ ಇದೆ.. ವೇದಿಕೆ ಮೇಲೆ ಮುಂದೆ ಮರಾಠಿ ದ್ವಂದಾರ್ಥದ ನೃತ್ಯ ಭರ್ಜರಿಯಾಗಿ ಸಾಗ್ತಿದ್ರೆ, ಇತ್ತ ಹಿಂದೆ ಕುಳಿತ ಇದೆ ಹಾಸಿಂಪೀರ್‌ ವಾಲಿಕಾರ್‌ ಚಪ್ಪಾಳೆ ಮೇಲೆ ಚಪ್ಪಾಳೆ ತಟ್ಟಿ ಮರಾಠಿ ಪ್ರೇಮವನ್ನ ಎಲ್ಲೆಂದರಲ್ಲಿ ಹರಿಸಿ ಬಿಟ್ಟಿದ್ದರು. ಇದೆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆ ಮಾಡಿರುವ ಸರಳಸಜ್ಜನಿಕೆಯ ಕನ್ನಡ ಕಟ್ಟಾಳು ನಾಡೋಜ ಡಾ. ಮಹೇಶ ಜೋಶಿ ಅವರಿಗೆ ಸಹಜವಾಗಿಯೇ ಆಕ್ರೋಶ ಉಂಟಾಗಿದೆ ಎನ್ನಲಾಗ್ತಿದೆ..!

click me!