
ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಹೆಮ್ಮೆಯ ಹಬ್ಬವೇ ಕನ್ನಡ ರಾಜ್ಯೋತ್ಸವ. ಪ್ರತಿ ವರ್ಷ ನವೆಂಬರ್ 1ರಂದು ಕನ್ನಡಿಗರು ಎಲ್ಲೆಡೆ ಕೆಂಪು-ಹಳದಿ ಬಾವುಟ ಹಾರಿಸಿ, ಕನ್ನಡಾಂಬೆಗೆ ನಮನ ಸಲ್ಲಿಸುವ ಮೂಲಕ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಕರ್ನಾಟಕ ಏಕೀಕರಣದ ಸ್ಮರಣೆಯ ಈ ದಿನವು ಕೇವಲ ಒಂದು ಆಚರಣೆಯಲ್ಲ. ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಭಾವನಾತ್ಮಕ ಕ್ಷಣವೂ ಹೌದು.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ನಾಡಿನ ಹೆಮ್ಮೆ, ನುಡಿಯ ಗೌರವ ಸದಾ ಹೀಗೆ ಬೆಳಗಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಕೆಂಪು-ಹಳದಿಯ ಬಣ್ಣಗಳಲ್ಲಿ ಕನ್ನಡದ ಪ್ರೀತಿ, ಕನ್ನಡಿಗರ ಹೃದಯಗಳಲ್ಲಿ ನಾಡಿನ ಹೆಮ್ಮೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡದ ಕಂಪನ್ನು ಪಸರಿಸೋಣ. ನಮ್ಮ ಭಾಷೆಯನ್ನು ಪ್ರೀತಿಸೋಣ, ಉಳಿಸೋಣ ಮತ್ತು ಮುಂದಿನ ಪೀಳಿಗೆಗೂ ಅದರ ಶ್ರೀಮಂತಿಕೆಯನ್ನು ಪರಿಚಯಿಸೋಣ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
ನಮ್ಮ ನುಡಿ, ನಮ್ಮ ಹೆಮ್ಮೆ, ನಮ್ಮ ಗುರುತು.
ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
ಈ ಕನ್ನಡ ರಾಜ್ಯೋತ್ಸವವು ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ಸಮೃದ್ಧಿ ಮತ್ತು ಹೊಸ ಭರವಸೆಯನ್ನು ತರಲಿ. ಕನ್ನಡದ ದೀಪ ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲಿ ಎಂಬ ಆಶಯದೊಂದಿಗೆ—
ಜೈ ಕರ್ನಾಟಕ ಮಾತೆ!
ಜೈ ಕನ್ನಡಾಂಬೆ!
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ಇದು ನಮ್ಮೆಲ್ಲರ ಹೆಮ್ಮೆಯ ದಿನ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ನೀ ಮೆಟ್ಟುವ ನೆಲ – ಅದೆ ಕರ್ನಾಟಕ;
ನೀನೇರುವ ಮಲೆ – ಸಹ್ಯಾದ್ರಿ.
ನೀ ಮುಟ್ಟುವ ಮರ – ಶ್ರೀಗಂಧದ ಮರ;
ನೀ ಕುಡಿಯುವ ನೀರ್ – ಕಾವೇರಿ.
ಇಂತಹ ಪವಿತ್ರ ಮಣ್ಣಲ್ಲಿ ಜನಿಸಿದ ನಾವೇ ಧನ್ಯರು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ನಮ್ಮ ರಾಜ್ಯ ರಚನೆಯಾದ ದಿನವನ್ನು ಅತ್ಯಂತ ವೈಭವದಿಂದ ಆಚರಿಸೋಣ. ಕನ್ನಡಮ್ಮನ ಸೇವೆಗೆ ಬದುಕನ್ನು ಮುಡಿಪಾಗಿಡೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಈ ಸಂತೋಷದಾಯಕ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಎಲ್ಲರಿಗೂ ಹರಸಲಿ, ಕರುನಾಡು ಇನ್ನಷ್ಟು ಸಂಪತ್ಭರಿತವಾಗಲಿ ಎಂಬ ಹಾರೈಕೆ ನನ್ನದು. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು