ಅಪಘಾತ ಮಾಡಿ ಎಸ್ಕೇಪ್: ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿದ್ದೇನೆ, ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ, ನಟ ಚಂದ್ರಪ್ರಭ

By Girish Goudar  |  First Published Sep 7, 2023, 12:00 AM IST

ಮೂಡಿಗೆರೆ ಸುತ್ತಮುತ್ತ ಶೂಟಿಂಗ್  ಮುಗಿಸಿ ವಾಪಸ್‌ ಬರುವಾಗ ಅಪಘಾತ ನಡೆದಿತ್ತು. ತಕ್ಷಣವೇ ಕಾರಿನಿಂದ ಕೆಳಗೆ ಇಳಿದು ನೋಡಿದೆ. ಕಾರು ನಾನೇ ಡ್ರೈವ್ ಮಾಡ್ತಾ ಇದ್ದೆ, ನನ್ನ ಜೊತೆಗೆ ಸ್ನೇಹಿತ ಕೂಡ ಇದ್ದರು. ತಕ್ಷಣ ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಲಾಯಿತು ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆ: ಹಾಸ್ಯನಟ ಚಂದ್ರಪ್ರಭ 


ಚಿಕ್ಕಮಗಳೂರು(ಸೆ.07):  ಕನ್ನಡ ಕಿರುತೆರೆಯ ಹಾಸ್ಯನಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕಾಮಿಡಿ ನಟ ಚಂದ್ರಪ್ರಭ ಅಪಘಾತ ಮಾಡಿ ಎಸ್ಕೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. 

ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ‌ಚಂದ್ರಪ್ರಭ ಅವರು, ಮೂಡಿಗೆರೆ ಸುತ್ತಮುತ್ತ ಶೂಟಿಂಗ್  ಮುಗಿಸಿ ವಾಪಸ್‌ ಬರುವಾಗ ಅಪಘಾತ ನಡೆದಿತ್ತು. ತಕ್ಷಣವೇ ಕಾರಿನಿಂದ ಕೆಳಗೆ ಇಳಿದು ನೋಡಿದೆ. ಕಾರು ನಾನೇ ಡ್ರೈವ್ ಮಾಡ್ತಾ ಇದ್ದೆ, ನನ್ನ ಜೊತೆಗೆ ಸ್ನೇಹಿತ ಕೂಡ ಇದ್ದರು. ತಕ್ಷಣ ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಲಾಯಿತು ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಕಾರಿನಲ್ಲಿ ಬಂದು ಗುದ್ದೋಡಿದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ: ಮಾನವೀಯತೆಗೂ ಕಾರು ನಿಲ್ಲಿಸದೇ ಪರಾರಿ

ಆತ ಕುಡಿದು ಬಂದು ಕಾರಿಗೆ ಡಿಕ್ಕಿ ಹೊಡೆದ. ಅಲ್ಲಿದ್ದಂತ ಸ್ಥಳೀಯರು ಆತ ಕುಡಿದಿದ್ದಾನೆ ನೀವು ಹೋಗಿ ಸರ್ ಅಂತ ಹೇಳಿದ್ರು. ಬೆಳಿಗ್ಗೆ ಚಿಕ್ಕಮಗಳೂರಿನ ಪೊಲೀಸರು ಫೋನ್ ಮಾಡಿದ್ದರು, ಆ ವ್ಯಕ್ತಿಗೆ ಗಂಭೀರವಾದ ಗಾಯವಾಗಿದೆ ಅಂತ ತಿಳಿಸಿದ್ದರು. 

ಕಾನೂನಿನ ಪ್ರಕಾರ ಪೊಲೀಸರು ಏನು ಹೇಳ್ತಾರೋ ಅದನ್ನ ಕೇಳುವುದಕ್ಕೆ ರೆಡಿ ಇದ್ದೇನೆ. ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವಾಗಲೂ ಕೂಡ ಪೊಲೀಸರು ನನ್ನ ಜೊತೆಗಿದ್ದರು ಎಂದು ಚಂದ್ರಪ್ರಭ ಹೇಳಿದ್ದಾರೆ. 

click me!