'ಹಣ ಕೊಡಿ ಅಂದ್ರೆ ಬರಬೇಕಾದ್ದು ಬರಲಿ ಅಂತಾರಂತೆ ಈಶ್ವರಪ್ಪ'

By Suvarna NewsFirst Published Jun 24, 2021, 11:35 PM IST
Highlights

* ಎಲ್ಲ ಕೆಲಸಕ್ಕೆ ಸಚಿವ ಈಶ್ವರಪ್ಪ ಅವರಿಗೆ ಕಮಿಷನ್ ಕೊಡಬೇಕು ಇಲ್ಲಾಂದ್ರೇ ಕೆಲಸ ಮಾಡೋಕೆ ಬಿಡಲ್ಲ

* ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಗಂಭೀರ ಆರೋಪ

* ಹಣ ಬಿಡುಗಡೆ ಮಾಡೋಕೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕಮೀಷನ್ ಕೇಳುತ್ತಿದ್ದಾರೆ.

* ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಪ್ರತಿ ತಾಲೂಕಿಗೆ ಸಿಎಂ ಯಡಿಯೂರಪ್ಪ ಬಿಡುಗಡೆ ಮಾಡಿದ ಹಣ ತಡೆದಿದ್ದಾರೆ

ಬಳ್ಳಾರಿ(ಜೂ. 24) ಎಲ್ಲ ಕೆಲಸಕ್ಕೆ ಸಚಿವ ಈಶ್ವರಪ್ಪ ಅವರಿಗೆ ಕಮಿಷನ್ ಕೊಡಬೇಕು ಇಲ್ಲಾಂದ್ರೇ ಕೆಲಸ ಮಾಡೋಕೆ ಬಿಡಲ್ಲ ಎಂದು  ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ.

ಹಣ ಬಿಡುಗಡೆ ಮಾಡೋಕೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕಮೀಷನ್ ಕೇಳುತ್ತಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಪ್ರತಿ ತಾಲೂಕಿಗೆ ಸಿಎಂ ಯಡಿಯೂರಪ್ಪ ಐದು ಕೋಟಿ ಹಣ ಕೊಡುವಂತೆ ಆದೇಶ ಮಾಡಿದ್ದರು ಆದರೆ ಸಚಿವ ಈಶ್ವರಪ್ಪ ಅದನ್ನ ತಡೆಹಿಡಿದ್ದಾರೆ. ಕೇಳಿದರೆ ನಮಗೇನು ಬರಬೇಕು ಅದು ಇನ್ನೂ ಬಂದಿಲ್ಲ ಅಂತಾರೆ ಎಂದು ಗಣೇಶ್ ಆರೋಪಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ ರಾಜಕಾರಣ

ಕಂಪ್ಲಿ ತಾಲೂಕಿನಲ್ಲಿ ಈಗಾಗಲೇ ರಸ್ತೆ ಅಭಿವೃದ್ದಿಗಾಗಿ ಎಸ್ಟಿಮೇಟ್ ಮಾಡಿ ಕಳಿಸಲಾಗಿದೆ. ಮೂರು ತಿಂಗಳಾದರೂ ಸಚಿವ ಈಶ್ವರಪ್ಪ ಪರ್ಸೆಂಟೇಜ್ ಬಂದಿಲ್ಲ ಅಂತಾ ತಡೆ ಹಿಡಿದಿದ್ದಾರೆ ಈಶ್ವರಪ್ಪಗೆ 10 ಪರ್ಸೆಂಟೇಜ್ ನೀಡಿ ಅನುದಾನ ಪಡೆಯಬೇಕು ಎನ್ನುತ್ತಿದ್ದಾರೆ ಗುತ್ತಿಗೆದಾರರು . ಅಭಿವೃದ್ಧಿ ವಿಚಾರದಲ್ಲಿ ಹೀಗೆಲ್ಲ ಮಾಡೋದು ಸರಿಯಲ್ಲ. ಗ್ರಾಮಗಳ ಅಭಿವೃದ್ದಿ ದೃಷ್ಟಿಯಿಂದ ಕೂಡಲೇ ಹಣ ಬಿಡುಗಡೆಗೊಳಿಸಿ ಎಂದು ಗಣೇಶ್ ಒತ್ತಾಯಿಸಿದ್ದಾರೆ. 

 

click me!