Kalyana Karnataka Utsav: ಇಂದಿನಿಂದ ಅದ್ಧೂರಿಯಾಗಿ ಕಲ್ಯಾಣ ಕರ್ನಾಟಕ ಉತ್ಸವ

By Kannadaprabha News  |  First Published Feb 24, 2023, 12:58 PM IST

 ಕಲ್ಯಾಣ ಕರ್ನಾಟಕ ಉತ್ಸವ-2023ರ ಅಂಗವಾಗಿ ಫೆ.24ರಿಂದ 26ರ ವರೆಗೆ ಮೂರು ದಿನಗಳ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಧಾನ ವೇದಿಕೆಯಲ್ಲಿ ವಿವಿಧ ಕಲಾವಿದರಿಂದ ಸಾಂಸ್ಕೃತಿಕ, ಸುಗಮ ಸಂಗೀತ, ನೃತ್ಯರೂಪಕ, ಕನ್ನಡ ಮತ್ತು ಹಿಂದಿ ರಸಮಂಜರಿ ಹಾಗೂ ಸಂಗೀತ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಕಲಬುರಗಿ (ಫೆ.24) : ಕಲ್ಯಾಣ ಕರ್ನಾಟಕ ಉತ್ಸವ-2023ರ ಅಂಗವಾಗಿ ಫೆ.24ರಿಂದ 26ರ ವರೆಗೆ ಮೂರು ದಿನಗಳ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಧಾನ ವೇದಿಕೆಯಲ್ಲಿ ವಿವಿಧ ಕಲಾವಿದರಿಂದ ಸಾಂಸ್ಕೃತಿಕ, ಸುಗಮ ಸಂಗೀತ, ನೃತ್ಯರೂಪಕ, ಕನ್ನಡ ಮತ್ತು ಹಿಂದಿ ರಸಮಂಜರಿ ಹಾಗೂ ಸಂಗೀತ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಫೆ 24ರಂದು ಮ.3ರಿಂದ ಸಂಜೆ 4 ಗಂಟೆಯವರೆಗೆ ಸ್ಥಳೀಯ ಕಲಾವದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿಯ ಮಾಲಾಶ್ರೀ ಕಣವಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ, ಸಂಜೆ 5.30ರಿಂದ ಸಂಜೆ 6 ಗಂಟೆಯವರೆಗೆ ಓರಿಸ್ಸಾ ಪ್ರಿನ್ಸ್‌ ಡಾನ್ಸ್‌ ಗ್ರೂಪ್‌ದಿಂದ ನೃತ್ಯ ರೂಪಕ, ಸಂಜೆ 6ರಿಂದ ರಾತ್ರಿ 8ರ ವರೆಗೆ ಬೆಂಗಳೂರಿನ ವಿಜಯ ಪ್ರಕಾಶ ಮತ್ತು ತಂಡದಿಂದ ಕನ್ನಡ ರಸಮಂಜರಿ ಹಾಗೂ ರಾತ್ರಿ 8ರಿಂದ ರಾತ್ರಿ 10ರ ವರೆಗೆ ಮುಂಬಯಿನ ಸಲೀಮ್‌ ಸುಲೇಮಾನ್‌ ಮತ್ತು ತಂಡದಿಂದ ಹಿಂದಿ ರಸಮಂಜರಿ ಕಾರ್ಯಕ್ರಮ.

Tap to resize

Latest Videos

undefined

Kalyana Karnataka Utsava: ಕಲಬುರಗಿಯಲ್ಲಿ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನಗಳ ಉತ್ಸವ

ಫೆ.25ರಂದು ಮಧ್ಯಾಹ್ನ 3ರಿಂದ ಸಂಜೆ 4 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 4 ರಿಂದ ಸಂಜೆ 4.30 ಗಂಟೆಯವರೆಗೆ ಬೀದರ ವೀರ ಸಮರ್ಥ ಇವರಿಂದ ಕನ್ನಡ ರಸಮಂಜರಿ, ಸಂಜೆ 4.30 ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಆಕ್ಸೀಜನ್‌-2 ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮ, ಸಂಜೆ 5 ರಿಂದ ಸಂಜೆ 7 ಗಂಟೆಯವರೆಗೆ ಬೆಂಗಳೂರಿನ ಅರ್ಜುನ್‌ ಜನ್ಯ ಮತ್ತು ತಂಡದಿಂದ ಸಂಗೀತ ವೈವಿಧ್ಯ ಹಾಗೂ ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೆ ಮುಂಬಯಿನ ಶಾನ್‌ ಮತ್ತು ತಂಡದಿಂದ ಹಿಂದಿ ರಸಮಂಜರಿ ಕಾರ್ಯಕ್ರಮ.

ಫೆ.26ರಂದು ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ರಿಂದ ಸಂಜೆ 5.30 ಗಂಟೆಯವರೆಗೆ ಕಲಬುರಗಿಯ ಸೀಮಾ ಪಾಟೀಲ ಮತ್ತು ವೃಂದದಿಂದ ಸುಗಮ ಸಂಗೀತ, ಸಂಜೆ 5.30 ರಿಂದ ಸಂಜೆ 6 ಗಂಟೆಯವರೆಗೆ ಮುಂಬಯಿ ಎಂ.ಜೆ.-5 ಡಾನ್ಸ್‌ ಇವರಿಂದ ನೃತ್ಯ ರೂಪಕ, ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಬೆಂಗಳೂರಿನ ಅನನ್ಯ ಭಟ್‌ ಹಾಗೂ ತಂಡದವರಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ, ರಾತ್ರಿ 8 ರಿಂದ 8.15 ಗಂಟೆಯವರೆಗೆ ಪ್ರಹ್ಲಾದ್‌ ಆಚಾರ್ಯ ಇವರಿಂದ ಶ್ಯಾಡೋ ಪ್ರದರ್ಶನ ಹಾಗೂ ರಾತ್ರಿ 8.15 ರಿಂದ ರಾತ್ರಿ 10 ಗಂಟೆಯವರೆಗೆ ಮುಂಬಯಿನ ಸೋನು ನಿಗಮ ಮತ್ತು ತಂಡದಿಂದ ಹಿಂದಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

- ಗುವಿವಿ ಜ್ಞಾನಗಂಗೆ ಸುತ್ತಮುತ್ತ ಭದ್ರತೆ ಬಿಗಿ

ಕಲ್ಯಾಣ ಕರ್ನಾಟಕ ಉತ್ಸವ(Kalyana Karnataka Utsav 2023) ನಡೆಯುತ್ತಿರುವ ಇಲ್ಲಿನ ಗುವಿವಿ(Gulbarga Univerrsity) ಅಂಗಳ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಫೆ. 24 ರಿಂದ ಪೆ. 26 ರ ವರೆಗೆ 3 ದಿನಗಳ ಕಾಲ ಬಿಗಿ ಬಂದೋಬಸ್‌್ತ ಇರಲಿದೆ. ವಾಹನಗಳ ಸಂಚಾರಕ್ಕೆ ಸೂಕ್ತ ಮಾರ್ಗ ಬದಲಾವಣೆ, ವಾಹನ ನಿಲುಗಡೆಗೆ ಸೂಕ್ತ ಪ್ರದೇಶಗಳನ್ನು ಗುರುತಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಪೊಲೀಸ್‌ ಕಮೀಷ್ನರ್‌ ಆರ್‌ ಚೇತನ್‌ ಹೇಳಿದ್ದಾರೆ.

 

ಕಲ್ಯಾಣ ಕರ್ನಾಟಕ ಪ್ರಗತಿಗೆ ಹತ್ತಾರು ಯೋಜನೆ; ಸಚಿವ ಆನಂದ್ ಸಿಂಗ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುವಿವಿಗೆ ಹೋಗುವ ರಿಂಗ್‌ ರಸ್ತೆಯಿಂದ ಕುಸನೂರ್‌ ರಸ್ತೆ ಮೂರು ದಿನ ಸಂಜೆ 5 ರಿಂದ 10 ಗಂಟೆಯವರೆಗೂ ಏಕಮುಖ ರಸ್ತೆಯಾಗಿರಲಿದೆ. ಇದೇ ರಸ್ತೆಯಲ್ಲಿರುವ ಪ್ರೆಸ್‌ ಕ್ಲಬ್‌ ಬಳಿಯ ವಿಶಾಲ ಜಾಗವನ್ನೇ ವಾನ ನಿಲುಗಡೆಗೆ ಮಾಡಲಾಗಿದೆ. ಸಾರ್ವಜನಿಕರು ಇಲ್ಲೇ ವಾಹನ ನಿಲುಗಡೆ ಮಾಡಿ ಅಲ್ಲಿದಂಲೇ ವಿವಿ ಸಮಾರಂಭ ಸ್ಥಳಕ್ಕೆ ನ‚ಡೆದುಕೊಂಡು ಸಾಗಬೇಕು ಎಂದು ವಿವಿ ಆವರಣದಲ್ಲಿ ಕೈಗೊಂಡಿರುವ ಭದ್ರತೆ, ಸಂಚಾರ ನಿಲುಗಡೆ, ನಿರ್ಬಂಧಗಳ ಮಾಹಿತಿ ನೀಡಿದ್ದಾರೆ. ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಚಂದ್ರಪ್ಪ ಇದ್ದರು.

click me!