ಕೆ.ಕಲ್ಯಾಣಗೆ ವಂಚನೆ ಪ್ರಕರಣ : ಮಂತ್ರ​ವಾ​ದಿಯ 9 ಮ್ಯಾಕ್ಸಿಕ್ಯಾಬ್‌ ವಶ

Kannadaprabha News   | Asianet News
Published : Oct 12, 2020, 08:06 AM IST
ಕೆ.ಕಲ್ಯಾಣಗೆ ವಂಚನೆ ಪ್ರಕರಣ : ಮಂತ್ರ​ವಾ​ದಿಯ 9 ಮ್ಯಾಕ್ಸಿಕ್ಯಾಬ್‌ ವಶ

ಸಾರಾಂಶ

ಚಿತ್ರ ಸಾಹಿತಿ ಕೆ ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣವಾಗಿದ್ದ ಮಂತ್ರವಾದಿ ಶಿವಾನಂದ ವಾಲಿಯ 9 ಮ್ಯಾಕ್ಸಿ ಕ್ಯಾಬ್ ಸೀಜ್ ಮಾಡಲಾಗಿದೆ 

ಬೆಳಗಾವಿ (ಅ.12): ಖ್ಯಾತ ಚಲನಚಿತ್ರ ಗೀತ ರಚನೆಕಾರ ಕೆ.ಕಲ್ಯಾಣ್‌ ದಾಂಪತ್ಯದಲ್ಲಿ ಕಲಹಕ್ಕೆ ಕಾರಣ ಹಾಗೂ ಲಕ್ಷಾಂತರ ರು. ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಮಂತ್ರವಾದಿ ಶಿವ​ನಾಂದ ವಾಲಿ ಒಡೆತನದಲ್ಲಿದ್ದ 9 ಮ್ಯಾಕ್ಸಿಕ್ಯಾಬ್‌ಗಳನ್ನು ನಗರದ ಮಾಳಮಾರುತಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಕಲ್ಯಾಣ್‌ ಪತ್ನಿ ಅಶ್ವಿನಿ, ಅತ್ತೆ, ​ಮಾವರನ್ನು ಅಪಹರಿಸಿ, ಪುಸಲಾಯಿಸಿ ಹಣ​, ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಕಲ್ಯಾಣ್‌ ಮನೆ ಕೆಲಸದಾಕೆ ಗಂಗಾ, ವಾಲಿ ವಿರುದ್ಧ ದೂರು ನೀಡಿದ್ದರು.

ಕವಿ ಕಲ್ಯಾಣ್‌ ಜೀವನದಲ್ಲಿ ನಿಜಕ್ಕೂ ನಡೆದದ್ದೇನು? ..

 ಈ ಹಿನ್ನೆಲೆಯಲ್ಲಿ ಬಾಗಲಕೋಟೆಯ ವಾಲಿಯನ್ನು ಕೆಲ ದಿನಗಳ ಹಿಂದೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕಲ್ಯಾಣ್‌ ಪತ್ನಿ, ಅತ್ತೆ​, ಮಾವನ ಅಕೌಂಟ್‌ನಿಂದ ಸುಮಾರು 45 ಲಕ್ಷ ರು. ಹಾಗೂ ಕೋಟ್ಯಂತರ ರು. ಆಸ್ತಿ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಹಣದಿಂದ ಶಿವಾನಂದ ಖರೀದಿಸಿದ್ದ 9 ಮ್ಯಾಕ್ಸಿಕ್ಯಾಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

PREV
click me!

Recommended Stories

ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ
ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ