ಕಲ್ಪತರು ಸೆಂಟ್ರಲ್‌ ಶಾಲೆಗೆ ಸತತ 17ನೇ ಬಾರಿ ಶೇ.100 ಫಲಿತಾಂಶ

By Kannadaprabha News  |  First Published May 16, 2023, 4:50 AM IST

ನಗರದ ಪ್ರತಿಷ್ಠಿತ ಕಲ್ಪತರು ವಿದ್ಯಾಸಂಸ್ಥೆಯ ಕಲ್ಪತರು ಸೆಂಟ್ರಲ್‌ ಶಾಲೆಯ 2022-23ನೇ ಶೈಕ್ಷಣಿಕ ಸಾಲಿನ 10ನೇ ತರಗತಿಯ (ಸಿಬಿಎಸ್‌ಇ) ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಶೇ. 100 ಫಲಿತಾಂಶವನ್ನು ತನ್ನದಾಗಿಸಿಕೊಂಡಿದೆ.


ತಿಪಟೂರು: ನಗರದ ಪ್ರತಿಷ್ಠಿತ ಕಲ್ಪತರು ವಿದ್ಯಾಸಂಸ್ಥೆಯ ಕಲ್ಪತರು ಸೆಂಟ್ರಲ್‌ ಶಾಲೆಯ 2022-23ನೇ ಶೈಕ್ಷಣಿಕ ಸಾಲಿನ 10ನೇ ತರಗತಿಯ (ಸಿಬಿಎಸ್‌ಇ) ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಶೇ. 100 ಫಲಿತಾಂಶವನ್ನು ತನ್ನದಾಗಿಸಿಕೊಂಡಿದೆ.

ವಿದ್ಯಾರ್ಥಿಗಳು ತಮ್ಮ ಶ್ರಮ ಮತ್ತು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಕಾರ, ಪ್ರಾಂಶುಪಾಲರು ಹಾಗು ಸಿಬ್ಬಂದಿ ವರ್ಗದವರ ಮಾರ್ಗದÜರ್ಶನದಡಿಯಲ್ಲಿ ಸತತವಾಗಿ 17ನೇ ಬಾರಿಯೂ ನೂರಕ್ಕೆ ನೂರರಷ್ಟುಫಲಿತಾಂಶವನ್ನು ಗಳಿಸಿ ಪೋಷಕರು ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಒಟ್ಟು 116 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಅತ್ಯುನ್ನತ ಶ್ರೇಣಿ 44, ಉನ್ನತ ಶ್ರೇಣಿ 69, ದ್ವಿತೀಯ ಶ್ರೇಣಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಎಲ್‌.ಎ. ವಚನ್‌ ಶೇ. 98.2, ಸುಚಿತ್‌ ಪಿ. ಪ್ರಸಾದ್‌ 97.2, ಎ. ಹಪ್ರ್ರಿತ್‌ 98.8, ಪ್ರಣವ್‌ ಎಚ್‌. ಹಸ್ತಕರ್‌ 96.2, ಎಂ. ಉಲ್ಲಾಸ್‌ 96, ಪ್ರೀತಂ ಗೌಡ ಡಿ 95.8, ಡಿ. ಪುನಶ್ಚೇತ್‌ 95.6, ಪ್ರತೀಕ್ಷ ಡಿ.ಎಸ್‌. 95.4, ಸಿಂಚನ ಎಲ್‌ 95.4, ಸಮೀಕ್ಷಾ 95.2, ದಿಯಾ ನಾಗ್‌ 95, ಅಪರ್ಣ ಬಾಲಬಂತರೆ 94.4, ಶ್ರೇಯಾ ಜಿ. ಪಟೇಲ್‌ 94.4, ಕುಶಾಲ್‌ ಎ. ಆರಾಧ್ಯ 94, ತೇಜಸ್ವಿವಿ ಪಾಠಿ 94ರಷ್ಟುಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯ‚ಕ್ಷ ಪಿ.ಕೆ ತಿಪ್ಪೇರುದ್ರಪ್ಪ ಮತ್ತು ಪದಾಧಿಕಾರಿಗಳು, ಪ್ರಾಂಶುಪಾಲರಾದ ದೇವಿಕ ಬಿ.ಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.ದೆ.

Latest Videos

undefined

3823 ಶಾಲೇಲಿ ಶೇ.100ರ ಸಾಧನೆ, 34 ಶಾಲೆಯಲ್ಲಿ ಶೂನ್ಯ ಫಲಿತಾಂಶ

ಬೆಂಗಳೂರು(ಮೇ.09):  ಜಿಲ್ಲಾವಾರು ಈ ಬಾರಿ ಚಿತ್ರದುರ್ಗದಲ್ಲಿ ಶೇ.98.8 ರಷ್ಟು ಫಲಿತಾಂಶದ ಮೂಲಕ ಪ್ರಥಮ ಸ್ಥಾನಕ್ಕೇರಿದೆ. ಮಂಡ್ಯ ಶೇ.96.74 ಮತ್ತು ಹಾಸನ ಶೇ.96.68ರಷ್ಟುಫಲಿತಾಂಶದ ಮೂಲಕ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿವೆ. ಶೇ.75.49ರಷ್ಟು ಫಲಿತಂಶ ಪಡೆದಿರುವ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ಇನ್ನು, 35 ಶೈಕ್ಷಣಿಕ ಜಿಲ್ಲೆಗಳಲ್ಲಿ 23 ಜಿಲ್ಲೆಗಳಲ್ಲಿ ಶೇ.75ರಿಂದ 100ರಷ್ಟುಫಲಿತಾಂಶ ಪಡೆದು ‘ಎ’ ಶ್ರೇಣಿ ಪಡೆದರೆ, 12 ಜಿಲ್ಲೆಗಳು ಶೇ.60ರಿಂದ ಶೇ.75ರಷ್ಟು ಫಲಿತಾಂಶ ಪಡೆದು ‘ಬಿ’ ಗ್ರೇಡ್‌ ಪಡೆದಿವೆ. ‘ಸಿ’ಗ್ರೇಡ್‌ನಲ್ಲಿ ಯಾವುದೇ ಜಿಲ್ಲೆ ಇಲ್ಲ. ವಿಶೇಷವೆಂದರೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಟಾಪ್‌ 4 ಸ್ಥಾನದಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕ್ರಮವಾಗಿ 19, 18, 13 ಮತ್ತು 9ನೇ ಸ್ಥಾನ ಪಡೆದಿವೆ.

3823 ಶಾಲೇಲಿ ಶೇ.100ರ ಸಾಧನೆ, 34 ಶಾಲೆಯಲ್ಲಿ ಶೂನ್ಯ ಫಲಿತಾಂಶ

 

ರಾಜ್ಯದ 15335 ಪ್ರೌಢ ಶಾಲೆಗಳ ಪೈಕಿ ಈ ಬಾರಿ 3823 ಶಾಲೆಗಳಲ್ಲಿ ಎಲ್ಲ ಮಕ್ಕಳೂ ಪಾಸಾಗಿ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ. ಈ ಪೈಕಿ 1824 ಅನುದಾನ ರಹಿತ ಖಾಸಗಿ ಶಾಲೆಗಳು, 1517 ಸರ್ಕಾರಿ, 482 ಅನುದಾನಿತ ಖಾಸಗಿ ಶಾಲೆಗಳಾಗಿವೆ. ಇನ್ನು, 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು ಇವುಗಳಲ್ಲಿ 23 ಅನುದಾನ ರಹಿತ ಶಾಲೆಗಳು, 11 ಅನುದಾನಿತ ಖಾಸಗಿ ಶಾಲೆಗಳಾಗಿವೆ.

ಸಾಧನೆಗೆ ಬಡತನ ಅಡ್ಡಿಯೆಂಬುದು ಸುಳ್ಳು: ಗೌಂಡಿ ಕೆಲಸದಾತನ ಮಗಳಿಗೆ ಡಿಸ್ಟಿಂಕ್ಷನ್‌!

59 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕ

ಕಳೆದ ಸಾಲಿನಲ್ಲಿ 55 ಸಾವಿರದಷ್ಟಿದ್ದ ಗ್ರೇಸ್‌ ಅಂಕ ಪಡೆದು ಪಾಸಾದವರ ಸಂಖ್ಯೆ ಈ ಬಾರಿ 59 ಸಾವಿರಕ್ಕೆ ಏರಿದೆ. ಈ ಮಕ್ಕಳಿಗೆ ಗರಿಷ್ಠ ಮೂರು ವಿಷಯಗಳಲ್ಲಿ ತಲಾ ಶೇ.10ರಷ್ಟು ಕೃಪಾಂಕ ನೀಡಲಾಗಿದೆ ಎಂದು ಇದೇ ವೇಳೆ ಮಂಡಳಿ ಅಧ್ಯಕ್ಷ ಆರ್‌.ರಾಮಚಂದ್ರನ್‌ ವಿವರಿಸಿದರು.

ನಿಯಮಾನುಸಾರ ಗರಿಷ್ಠ ಎರಡು ವಿಷಯಗಳಲ್ಲಿ ಮಾತ್ರ ಶೇ.5ರಷ್ಟುಗ್ರೇಸ್‌ ಅಂಕ ನೀಡಲು ಅವಕಾಶವಿತ್ತು. ಆದರೆ, ಸರ್ಕಾರ ಕಲಿಕಾ ಕೊರತೆ ಹಿನ್ನೆಲೆಯಲ್ಲಿ 2020-21ರ ಕೋವಿಡ್‌ ವರ್ಷದಿಂದ ಗರಿಷ್ಠ 3 ವಿಷಯಗಳಲ್ಲಿ ತಲಾ 10ರಷ್ಟುಗ್ರೇಸ್‌ ಅಂಕ ನೀಡಬಹುದೆಂದು ವಿಶೇಷ ಅವಕಾಶ ಕಲ್ಪಿಸಿತ್ತು. ಅದನ್ನು ಈ ಬಾರಿಯೂ ಮುಂದುವರೆಸಲು ಅವಕಾಶ ನೀಡಿತ್ತು. ಆ ಪ್ರಕಾರ, ಆರೂ ವಿಷಯಗಳಲ್ಲಿ ಕನಿಷ್ಠ 175 ಅಂಕಗಳನ್ನು ಪಡೆದವರಿಗೆ ಮಾತ್ರ, ಫೇಲಾಗಿರುವ 3 ವಿಷಯಗಳಲ್ಲಿ ಗ್ರೇಸ್‌ ಅಂಕ ಪಡೆಯಲು ಅರ್ಹರಾಗಿರುತ್ತಾರೆ. ಅದೂ ಕೂಡ ಫೇಲಾಗಿರುವ ಮೂರು ವಿಷಯಗಳಿಗೆ ತಲಾ ಶೇ.10ರಷ್ಟುಅಂಕ ನೀಡಿದರೆ ಪಾಸಾಗುವಂತಹವರಿಗೆ ಮಾತ್ರ ನೀಡಲಾಗಿದೆ. 59 ಸಾವಿರ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಒಂದು ವಿಷಯದಲ್ಲಿ, ಕೆಲವರಿಗೆ 2 ವಿಷಯದಲ್ಲಿ ಇನ್ನು ಕೆಲವರು 3 ವಿಷಯದಲ್ಲಿ ಗ್ರೇಸ್‌ ಅಂಕ ಪಡಲಾಗಿದೆ.

click me!