Chikkamagaluru: ರಾಜ ವೀರ ಮದಕರಿ ಸ್ಮಾರಕ ನಿರ್ಮಾಣ: ಕಾಳಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ಸಭೆ!

By Govindaraj S  |  First Published May 30, 2022, 1:03 AM IST

ಪುರಾತನ ಹಿಂದೂ ದೇವಾಲಯಗಳಿದ್ದ ಜಾಗದಲ್ಲಿ ಮತ್ತೆ ಮಂದಿರಗಳಾಗಬೇಕೆಂಬ ಹೋರಾಟ ನಡೆಯುತ್ತಿದ್ದು, ರಾಜ್ಯದಲ್ಲಿ ದಿನದಿಂದ ದಿನಕೆ ಧರ್ಮದ ದಂಗಲ್ ಜೋರಾಗ್ತಿದೆ. ಈ ಮಧ್ಯೆ ಹೈದರಾಲಿ ವಿಷ ಹಾಕಿ ಕೊಂದ ಕೋಟೆನಾಡಿನ ರಾಜ ವೀರ ಮದಕರಿ ನಾಯಕರ ಸ್ಮಾರಕದ ಹೋರಾಟವೂ ಮುನ್ನೆಲೆಗೆ ಬಂದಿದೆ.


ವರದಿ: ಆಲ್ದೂರು ‌ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.30): ಪುರಾತನ ಹಿಂದೂ ದೇವಾಲಯಗಳಿದ್ದ ಜಾಗದಲ್ಲಿ ಮತ್ತೆ ಮಂದಿರಗಳಾಗಬೇಕೆಂಬ ಹೋರಾಟ ನಡೆಯುತ್ತಿದ್ದು, ರಾಜ್ಯದಲ್ಲಿ ದಿನದಿಂದ ದಿನಕೆ ಧರ್ಮದ ದಂಗಲ್ ಜೋರಾಗ್ತಿದೆ. ಈ ಮಧ್ಯೆ ಹೈದರಾಲಿ ವಿಷ ಹಾಕಿ ಕೊಂದ ಕೋಟೆನಾಡಿನ ರಾಜ ವೀರ ಮದಕರಿ ನಾಯಕರ ಸ್ಮಾರಕದ ಹೋರಾಟವೂ ಮುನ್ನೆಲೆಗೆ ಬಂದಿದೆ. ಮದಕರಿ ವಂಶದ ಏಳನೇ ಕುಡಿ ಹಾಗೂ ಸ್ವಾಮೀಜಿಗಳು ಶ್ರೀರಂಗಪಟ್ಟದಲ್ಲೇ ಸ್ಮಾರಕ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ. 

Tap to resize

Latest Videos

ಕಾಶಿ ಮಠದ ಶ್ರೀಗಳ ಸಮ್ಮುಖದಲ್ಲಿ ‌ಸಭೆ: ಚಿತ್ರದುರ್ಗದ ಕಲ್ಲಿನ ಕೋಟೆಯ ರಾಜ ವೀರ ಮದಕರಿ ನಾಯಕರದ್ದು ಅಸಹಜ ಸಾವಲ್ಲ. ಅವರು ಯುದ್ಧದಲ್ಲೂ ಮಡಿದಿಲ್ಲ. ಅವರನ್ನ ಗೃಹಬಂಧನದಲ್ಲಿಟ್ಟು, ಸ್ವಾತಂತ್ರ್ಯವನ್ನ ಕಸಿದು ಹೈದರಾಲಿ ಊಟದಲ್ಲಿ ವಿಷ ಹಾಕಿ ಕೊಂದನೆಂದು ಯಾರಿಗೂ ತಿಳಿದಿಲ್ಲ. ಅವರದ್ದು ದುರಂತ ಸಾವು ಎಂದು ಮದಕರಿ ನಾಯಕರ ಏಳನೇ ತಲೆಮಾರಿನ ಕೊನೆ ಕುಡಿ ರಾಜ ಪರಶುರಾಮ ನಾಯಕ ಅರಸು ಸ್ಪಷ್ಟಪಡಿಸಿದ್ದು, ಅವರು ಮಡಿದ ಜಾಗ ಶ್ರೀರಂಗಪಟ್ಟಣದಲ್ಲೇ ಅವರ ಸ್ಮಾರಕ ನಿರ್ಮಾಣವಾಗಬೇಕೆಂದು ಆಗ್ರಹಿಸಿದ್ದಾರೆ. 

Chikkamagaluru: ಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಯುವಕ ಸಾವು!

ಈಗಾಗಲೇ ರಾಜ್ಯದಲ್ಲಿ ನಡಿಯುತ್ತಿರೋ ಮಸೀದಿ-ಮಂದಿರಗಳ ವಿವಾದದ ವಿದ್ಯಮಾನಗಳ ಬೆನ್ನೆಲ್ಲೆ ಮದಕರಿ ನಾಯಕರ ಸ್ಮಾರಕ ಶ್ರೀರಂಗಪಟ್ಟಣದಲ್ಲೇ ಆಗಬೇಕೆಂಬ ಕೂಗು ಮೆಲ್ಲಗೆ ಚಾಲ್ತಿಗೆ ಬರುತ್ತಿದೆ. ಇದಕ್ಕೆ ಕಾಫಿನಾಡಿನ ಋಷಿಕುಮಾರ್ ಶ್ರೀಗಳ ಜೊತೆ ನಾಡಿನ ವಿವಿಧ ಶ್ರೀಗಳು ಕೈಜೋಡಿಸಿದ್ದಾರೆ. ಕಾಳಿಮಠಕ್ಕೆ ಭೇಟಿ ನೀಡಿದ್ದ ಮದಕರಿ ವಂಶಸ್ಥ ರಾಜ ಪರಶುರಾಮ ನಾಯಕ ಕಾಳಿ ಶ್ರೀಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೇ ಜೂನ್ 9ರಂದು ಮದಕರಿ ನಾಯಕರ ಮನೆದೇವರು ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮದಕರಿ ನಾಯಕರ ಸ್ಮಾರಕದ ಹೋರಾಟಕ್ಕೆ ಮುಂದಾಗುವುದಾಗಿ ಮದಕರಿನಾಯಕರ ವಂಶಸ್ಥರಾದ ಪರಶುರಾಮ ನಾಯಕ ಅರಸ ಸ್ಪಷ್ಟಪಡಿಸಿದ್ದಾರೆ.

ಶ್ರೀರಂಗಪಟ್ಟಣಕ್ಕೆ ತಂದು ಮದಕರಿ ನಾಯಕರ ಪ್ರಾಣ ತೆಗೆದಿದ್ದಾರೆ: ಮದಕರಿ ನಾಯಕರು 11 ವರ್ಷಗಳ ಕಾಲ ಹೈದರಾಲಿಯನ್ನ ಕೋಟೆಯ ಗಡಿಗೂ ಬಿಟ್ಟಿರಲಿಲ್ಲ. ಬಂದಾಗೆಲ್ಲ ಸೋತಿದ್ದ. ಕೊನೆಗೆ ಮಾತುಕತೆಗೆಂದು ಕರೆಸಿ ಮೋಸದಿಂದ ಬಂಧಿಸಿ ಎರಡು ವರ್ಷಗಳ ಕಾಲ ಜೈಲಿನಲ್ಲಿಟ್ಟು ಊಟದಲ್ಲಿ ವಿಷ ಹಾಕಿ ಕೊಂದನು. ಅಲ್ಲೇ ಅವರ ಅಂತ್ಯ ಸಂಸ್ಕಾರ ಕೂಡ ಆಯಿತು. ಹಾಗಾಗಿ, ಅಲ್ಲೇ ಅವರ ಸ್ಮಾರಕ ನಿರ್ಮಾಣವಾಬೇಕೆಂದು ಅವರ ವಂಶಸ್ಥರ ಜೊತೆ ಕಾಳಿಶ್ರೀ ಕೂಡ ಪಟ್ಟು ಹಿಡಿದಿದ್ದಾರೆ. ದುರ್ಗದಿಂದ ಶ್ರೀರಂಗಪಟ್ಟಣಕ್ಕೆ ತಂದು ಮದಕರಿ ನಾಯಕರ ಪ್ರಾಣ ತೆಗೆದಿದ್ದಾರೆ. ಹಾಗಾಗಿ, ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕೆಂಬುದು ನಮ್ಮ ಬಯಕೆ ಎಂದಿದ್ದಾರೆ. 

Chikkamagaluru ಜಿಲ್ಲೆಯಲ್ಲಿ ಮಾವಿನ ಹಣ್ಣಿಗೆ ಬಾರೀ ಬೇಡಿಕೆ

ಈ ವಿಚಾರವಾಗಿ ಕೆಲವರು ನನ್ನನ್ನ ಮಂಡ್ಯಕ್ಕೆ ಬರಲು ಬಿಡೋದಿಲ್ಲ ಅಂತಿದ್ದಾರೆ. ಯಾರು ತಡೆಯುತ್ತೀರಾ, ತಡೆಯಿರಿ. ನಾವು ಶ್ರೀರಂಗಪಟ್ಟದಲ್ಲಿ ಸ್ಮಾರಕ ಮಾಡಿಯೇ ಸಿದ್ದ ಅಂತ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಕೂಡ ಸಾವಲು ಹಾಕಿದ್ದಾರೆ. ಒಟ್ಟಾರೆ, ಮದಕರಿ ನಾಯಕ ಅಂದ್ರೆ ಧೈರ್ಯದ ಸಂಕೇತ. ಹೈದರಾಲಿಯ ಮೋಸದಿಂದ ಸತ್ತ ಹೋರಾಟಗಾರ. ಹಾಗಾಗಿ, ಅವರ ಸ್ಮಾರಕ ನಿರ್ಮಾಣದ ಕೂಗು ಇಂದು-ನಿನ್ನೆಯದ್ದಲ್ಲ. ಆದರೆ, ಈಗೀಗ ಅದು ಹೆಚ್ಚು ಮುನ್ನೆಲೆಗೆ ಬರುತ್ತಿದೆ. ರಾಜ್ಯ-ದೇಶದ ಧರ್ಮ ದಂಗಲ್ ಮಧ್ಯೆ ಮದಕರಿ ನಾಯಕ ಸ್ಮಾರಕ ನಿರ್ಮಾಣದ ಹೋರಾಟದ ಕೂಗು ಜೋರಾಗುವ ಲಕ್ಷಗಳು ದಟ್ಟವಾಗಿದೆ. ಸರ್ಕಾರ ಮದಕರಿ ನಾಯಕರ ಸ್ಮಾರಕ ನಿರ್ಮಾಣಕ್ಕೆ ಮನಸ್ಸು ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕು.

click me!